ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು ವಿನೂತನ ಕಾರ್ಯಕ್ರಮ ಸರಣಿಯಡಿ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಉಳಿಸಿ ಬೆಳೆಸುವಲ್ಲಿ ವಿಶೇಷ ಪ್ರಯತ್ನ ಸತತ 124ನೇ ತಿಂಗಳ ಕಾರ್ಯಕ್ರಮ ಇತ್ತೀಚೆಗೆ ಗೊಂಬೆ ಮನೆಯಲ್ಲಿ ಜರುಗಿತು.
ಸಭಾ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲ ಎಮ್. ರತ್ನಾಕರ್ ಪೈ ಅವರು ಮಾತನಾಡಿ ಗೊಂಬೆಯಾಟ ಅಕಾಡೆಮಿಯ ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು ಶೀರ್ಷಿಕೆ ನಿಜವಾಗಿಯೂ ಶ್ಲಾಘನೀಯ. ಈ ವೇದಿಕೆಯಲ್ಲಿ ಅತೀ ಚಿಕ್ಕ ವಯಸ್ಸಿನಿಂದ ಹಿಡಿದು ವಯೋ ವೃದ್ಧರ ತನಕ ಅನೇಕ ಕಲಾವಿದರು ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಇನ್ನು ಮುಂದೆಯೂ ಈ ಅಕಾಡೆಮಿ ಇನ್ನಷ್ಟು ಕಲಾವಿದರನ್ನು ಗುರುತಿಸಲಿ ಅನ್ನುವದೇ ನಮ್ಮೆಲ್ಲರ ಹಾರೈಕೆ ಎಂದು ಹಾರೈಸಿದರು.
ನಿವೃತ್ತ ಮುಖ್ಯೋಪಾಧ್ಯಾಯ ನಾಗೇಶ್ ಶ್ಯಾನುಭಾಗ್ ಬಂಟ್ವಾಡಿ, ರಮಾನಂದ ಕಿಣಿ ಅಂಪಾರು, ಕಿಶೋರ್ ಕುಮಾರ್ ಆರೂರು ಹಾಗೂ ಪೃಥ್ವಿ ಕಿಶೋರ್ ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಿರಿಯ ಪ್ರತಿಭೆ ಪನ್ನಗ ಕೆ. ಆರೂರ್, ಶಂಕರನಾರಾಯಣ ಅವರನ್ನು ಅಕಾಡೆಮಿಯ ವತಿಯಿಂದ ಸಮ್ಮಾನಿಸಲಾಯಿತು. ನಂತರ ಪನ್ನಗ ಕೆ. ಅರೂರ್ ರವರು ಆರು ಸಂಗೀತ ಪರಿಕರಗಳಾದ ಕೊಳಲು, ಚಂಡೆ, ಮದ್ದಲೆ, ರಿದಮ್ ಪ್ಯಾಡ್, ತಬಲಾ ಹಾಗೂ ಢೋಲಕ್ಗಳನ್ನು ನುಡಿಸಿ ನೆರೆದ ಪ್ರೇಕ್ಷಕರಿಂದ ಸೈ ಯೆನಿಸಿಕೊಂಡರು.
ನಿವೃತ್ತ ಅಧ್ಯಾಪಕ ಉದಯ ಭಂಡಾರ್ಕಾರ್ ಹಟ್ಟಿಯಂಗಡಿ ಅವರು ನಿರೂಪಿಸಿದರು. ದೇವಕಿ ಪ್ರಭು ತಲ್ಲೂರು ಅವರು ವಂದಿಸಿದರು.

















