ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೂಡ್ಲಕಟ್ಟೆಯ ಐಎಂಜೆ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ‘ನವೋನ್ಮೇಶ’ ರಾಜ್ಯ ಮಟ್ಟದ ವಿಜ್ಞಾನ, ವಾಣಿಜ್ಯ, ಸಾಂಸ್ಕೃತಿಕ ಹಾಗೂ ಕ್ರೀಡಾ ಉತ್ಸವದ ಸಮಾರೋಪ ಸಮಾರಂಭವು ಯಶಸ್ವಿಯಾಗಿ ಸಂಪನ್ನಗೊಂಡಿತು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಖ್ಯಾತ ಚಲನಚಿತ್ರ ನಟ ವಜ್ರಂಗ್ ಶೆಟ್ಟಿ ಅವರು ಭಾಗವಹಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೋರಿದ ಉತ್ಸಾಹವನ್ನು ಶ್ಲಾಘಿಸಿದರು ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಶುಭಕೋರಿದರು.
ಈ ಬಾರಿಯ ‘ನವೋನ್ಮೇಶ’ ಫೆಸ್ಟ್‌ನಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮಂಗಳೂರಿನ ಕೆನರಾ ವಿಕಾಸ್ ಪಿಯು ಕಾಲೇಜಿನ ತಂಡವು ಸಮಗ್ರ ಚಾಂಪಿಯನ್ (Winner) ಪಟ್ಟವನ್ನು ಮುಡಿಗೇರಿಸಿಕೊಂಡಿತು. ಉಡುಪಿಯ ಎಂಜೆಎಂ ಪಿಯು ಕಾಲೇಜಿನ ತಂಡವು ಪ್ರಥಮ ರನ್ನರ್ ಅಪ್ ಹಾಗೂ ಕುಂದಾಪುರದ ಶ್ರೀ ವೆಂಕಟರಮಣ ಪಿಯು ಕಾಲೇಜ್ ದ್ವಿತೀಯ ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾದರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಖ್ಯಾತ ಚಲನಚಿತ್ರ ನಟ ವಜ್ರಂಗ್ ಶೆಟ್ಟಿ ಅವರು ಭಾಗವಹಿಸಿ, ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಸ್ಪರ್ಧೆಗಳಲ್ಲಿ ವಿಜೇತರಾದ ತಂಡಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಶುಭಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಎಂಜೆ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಡಾ. ಎಸ್. ಎನ್. ಭಟ್ ಅವರು ವಹಿಸಿದ್ದರು.
ಐಎಂಜೆಐಎಸ್‌ಸಿ ಪ್ರಾಂಶುಪಾಲೆ ಡಾ. ಪ್ರತಿಭಾ ಎಂ. ಪಟೇಲ್ ನವೋನ್ಮೇಶ್ 2026ರ ವರದಿ ವಾಚಿಸಿ ಧನ್ಯವಾದ ಸಮರ್ಪಿಸಿದರು ಹಾಗೂ ಐಎಂಜೆಸಿಎಹೆಚ್‌ಎಸ್ ಪ್ರಾಂಶುಪಾಲೆ ಪ್ರೊ. ಹೇಮಲತಾ ಸ್ವಾಗತಿಸಿದರು. ಎಮ್ ಸಿ ಎನ್ ಉಪಪ್ರಾಂಶುಪಾಲರಾದ ರೂಪಶ್ರೀ ಅತಿಥಿ ಪರಿಚಯ ನೀಡಿದರು.
ವೇದಿಕೆಯಲ್ಲಿ ಎಂಐಟಿಕೆ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗ್ಡೆ, ಎಂಸಿಎನ್ ಪ್ರಾಂಶುಪಾಲೆ ಜೆನ್ನಿಫರ್ ಫ್ರೀಡಾ ಮೆನೆಜಸ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು. ವಿದ್ಯಾರ್ಥಿನಿ ಅಲಿಶಾ ಬಿಷಪ್ ಕಾರ್ಯಕ್ರಮ ನಿರೂಪಿಸಿದರು.
ಇದನ್ನೂ ಓದಿ – ಮೂಡ್ಲಕಟ್ಟೆ ಐಎಂಜೆ ಸಂಸ್ಥೆಯಲ್ಲಿ ʼನವೋನ್ಮೇಶ 2026ʼ ರಾಜ್ಯ ಮಟ್ಟದ ಫೆಸ್ಟ್ ಸಂಪನ್ನ – https://kundapraa.com/?p=103848 .

















