ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಯಕ್ಷಗಾನ ರಾಜಕಲೆಯಾಗಿ ಹೊರಹೊಮ್ಮಿದ್ದು ಸರಕಾರ ಇದನ್ನು ವಿಶೇಷವಾಗಿ ಗುರುತಿಸಿ ನಾಟಕ ಸೇರಿದಂತೆ ವಿವಿಧ ಕಲೆಗೆ ನೀಡಲಾಗುವ ಮಾನ್ಯತೆ ನೀಡಬೇಕು ಎಂದು ಯಕ್ಷಗಾನ ವಿಮರ್ಶಕ ಎಂ.ಎಸ್. ಸಾಮಗ ಹೇಳಿದರು.
ಅವರು ಶುಕ್ರವಾರ ಗುಂಡ್ಮಿ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಇಲ್ಲಿ ಒಂದು ವಾರಗಳ ಯಕ್ಷ ಸಪ್ತಾಹ ಕಾಳಗೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಯಕ್ಷಗಾನಕ್ಕೆ ಯುನಿವರ್ಸಿಟಿ ಮಟ್ಟದಲ್ಲಿ ಗುರುತಿಸಿಕೊಂಡಿದೆ ಇಂತಹ ಕಲೆಯ ತನ್ನ ಚೌಕಟ್ಟನ್ನು ಮೀರದೆ ಅದರ ಪರಂಪರೆಯನ್ನು ಉಳಿಸಿ ಮುಂದಿನ ತಲೆಮಾರಿಗೆ ಕೊಂಡ್ಯೋಯುವ ಕಾರ್ಯ ಆಗಲಿ ಈ ದಿಸೆಯಲ್ಲಿ ಯಕ್ಷಗಾನ ಕಲಾಕೇಂದ್ರ ಹಲವಾರು ಕಲಾವಿದರನ್ನು ಧಾರೆ ಎರೆಯುವ ಮೂಲಕ ಯಕ್ಷಗಾನ ನೈಜ ಪರಂಪರೆಗೆ ಸಾಕ್ಷಿಯಾಗಿದೆ ಎಂದರು.
ಸಭೆಯಲ್ಲಿ ವೈದ್ಯರಾದ ಡಾ. ಭಾರ್ಗವಿ ಐತಾಳ್, ನಿವೃತ್ತ ಬ್ಯಾಂಕ್ ಅಧಿಕಾರಿ ಮಂಜುನಾಥ್ ಉಪಾಧ್ಯಾ ಉಪಸ್ಥಿತರಿದ್ದರು. ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ್ ಹೆಬ್ಬಾರ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ವಿಭಾವನ್ ಹೇರ್ಳೆ ನಿರೂಪಿಸಿದರು.ವೆಂಕಟೇಶ ಕ್ರಮಾಧಾರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಕೋಟದ ಪಂಚವರ್ಣ ಕಲಾತಂಡದಿಂದ ಗಾನ ನೃತ್ಯ ವೈಭವ, ಕಲಾಕೇಂದ್ರದ ಕಲಾವಿದರಿಂದ ಭೌಮಾಸುರ ಕಾಳಗ ಯಕ್ಷಗಾನ ಪ್ರದರ್ಶನಗೊಂಡಿತು.

















