Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕನ್ನಡ ಕೊರಳಿನ ಕೂಗಾಗಿದೆಯೇ ಹೊರತು ಕರುಳಿನ ಕೂಗಾಗಿಲ್ಲ: ಅರವಿಂದ ಚೊಕ್ಕಾಡಿ
    alvas nudisiri

    ಕನ್ನಡ ಕೊರಳಿನ ಕೂಗಾಗಿದೆಯೇ ಹೊರತು ಕರುಳಿನ ಕೂಗಾಗಿಲ್ಲ: ಅರವಿಂದ ಚೊಕ್ಕಾಡಿ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಮೂಡುಬಿದಿರೆ: ಕನ್ನಡ ಭಾಷೆಯ ಬಗ್ಗೆ ನಮಗಿರುವ ಅಭಿಮಾನ ಕೇವಲ ಘೋಷಣೆಗಳಿಗೆ ಸೀಮಿತವಾಗಬಾರದು. ಅದು ನಮ್ಮ ಆಲೋಚನೆ, ಮಾತು ಮತ್ತು ನಡವಳಿಕೆಯಲ್ಲಿ ಪ್ರತಿಫಲಿಸಬೇಕು. ಇಂದು ಕನ್ನಡ ಕೊರಳಿನ ಕೂಗಾಗಿದೆಯೇ ಹೊರತು ಕರುಳಿನ ಕೂಗಾಗಿಲ್ಲ. ಕನ್ನಡವನ್ನು ಉಳಿಸುವ ಬಗ್ಗೆ ಮಾತನಾಡುವುದಕ್ಕಿಂತ ಅದನ್ನು ದಿನನಿತ್ಯದ ಬದುಕಿನಲ್ಲಿ ಬಳಸುವ ಮೂಲಕ ಬೆಳೆಸುವ ಅಗತ್ಯವಿದೆ ಎಂದು ಚಿಂತಕ ಅರವಿಂದ ಚೊಕ್ಕಾಡಿ ಅಭಿಪ್ರಾಯಪಟ್ಟರು.

    Click Here

    Click Here

    Call us

    Click Here

    ಅವರು ಭಾನುವಾರ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಕನ್ನಡ ಸಂಘ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ನವೆಂಬರ್ 1 ಕನ್ನಡ ರಾಜ್ಯೋತ್ಸವವಲ್ಲ. ಕರ್ನಾಟಕ ರಾಜ್ಯೋತ್ಸವ. ಕರ್ನಾಟಕ ರಾಜ್ಯದ ರಚನೆಯ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ. ಭಾಷೆಯೊಂದಕ್ಕೆ ನಿರ್ದಿಷ್ಟವಾಗಿ ಉದಯವಾದ ದಿನ ಎಂಬುದಿಲ್ಲ. ಕನ್ನಡಕ್ಕೆ ಸುಮಾರು ಎರಡರಿಂದ ಎರಡೂವರೆ ಸಾವಿರ ವರ್ಷಗಳ ದಾಖಲಿತ ಇತಿಹಾಸವಿದ್ದು, ಅದಕ್ಕೂ ಹಿಂದಿನ ಅಸ್ತಿತ್ವವೂ ಇದ್ದಿರಬಹುದು. ಹೀಗಾಗಿ ರಾಜ್ಯೋತ್ಸವದ ಆಚರಣೆಯನ್ನು ಭಾಷೆಯ ಇತಿಹಾಸ ಮತ್ತು ರಾಜ್ಯದ ಅಸ್ಮಿತೆಯ ವಿಶಾಲ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು.

    ಹಲವು ಭಾಷೆಗಳನ್ನು ಕಲಿಯುವುದು ಒಳ್ಳೆಯ ಬೆಳವಣಿಗೆ. ಆದರೆ ಕರ್ನಾಟಕ ಎಂಬ ರಾಜ್ಯದ ಅಸ್ಮಿತೆ ಮತ್ತು ಅಸ್ತಿತ್ವವನ್ನು ಉಳಿಸುವ ಪ್ರಮುಖ ಕೊಂಡಿ ಕನ್ನಡ ಭಾಷೆ. ಭಾಷೆಯನ್ನು ನಾವು ಉಳಿಸಬೇಕೆಂದು ಪ್ರತ್ಯೇಕವಾಗಿ ಪ್ರಯತ್ನಿಸುವುದಕ್ಕಿಂತ ಅದನ್ನು ನಿರಂತರವಾಗಿ ಬಳಸಬೇಕು ಮತ್ತು ಬೆಳೆಸಬೇಕು. ಹಣವನ್ನು ಖರ್ಚು ಮಾಡಿದಷ್ಟು ಅದು ಕಡಿಮೆಯಾಗುತ್ತದೆ, ಆದರೆ ಜ್ಞಾನವನ್ನು ಬಳಸಿದಷ್ಟು ಅದು ಹೆಚ್ಚಾಗುತ್ತದೆ. ಕನ್ನಡವೂ ಅಂಥದ್ದೇ ಒಂದು ಶ್ರೀಮಂತ ಜ್ಞಾನ ಪರಂಪರೆ. ಅದನ್ನು ಪೆಟ್ಟಿಗೆಯಲ್ಲಿಟ್ಟು ಸಂರಕ್ಷಿಸುವ ವಸ್ತುವಿನಂತೆ ಕಾಣದೆ, ಬಳಕೆಯ ಮೂಲಕ ಜೀವಂತವಾಗಿಡಬೇಕು. ಭಾಷೆ, ಚಿಂತನೆ ಮತ್ತು ನಡವಳಿಕೆಗಳ ನಡುವೆ ಅವಿನಾಭಾವ ಸಂಬಂಧವಿದೆ. ನಮ್ಮ ಸಂಸ್ಕೃತಿ ನಮ್ಮ ನಡವಳಿಕೆಯಲ್ಲಿ ವ್ಯಕ್ತವಾಗುತ್ತದೆ. ನಮ್ಮ ನಡವಳಿಕೆ ಭಾಷೆಯಲ್ಲಿಯೂ ಪ್ರತಿಫಲಿಸುತ್ತದೆ. ಭಾಷೆಯನ್ನು ಅದರ ಸೌಂದರ್ಯ, ಸ್ವಾರಸ್ಯ ಮತ್ತು ಸಂದರ್ಭಕ್ಕೆ ತಕ್ಕಂತೆ ಬಳಸುವ ಅಭ್ಯಾಸ ಬೆಳೆದಾಗ ಭಾಷೆಯ ಮೇಲಿನ ಆಸಕ್ತಿಯೂ ಸಹಜವಾಗಿ ಹೆಚ್ಚುತ್ತದೆ. ಕನ್ನಡದ ಮೇಲಿನ ಅಭಿಮಾನ ಕೇವಲ ಮಾತಿನಲ್ಲಿ ವ್ಯಕ್ತವಾಗದೆ ನಮ್ಮ ಬದುಕಿನ ಭಾಗವಾಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.

    ನಂತರ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ,  ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕನ್ನಡ ಸಂಘವು ಕರ್ನಾಟಕದ ಇತಿಹಾಸ, ಸಾಂಸ್ಕೃತಿಕ ವೈವಿಧ್ಯ, ಸಾಹಿತ್ಯಿಕ ಪರಂಪರೆ ಹಾಗೂ ನಾಡಿನ ಒಟ್ಟಾರೆ ಅಸ್ಮಿತೆಯನ್ನು ಪ್ರತಿನಿಧಿಸುವ ವೇದಿಕೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಭಾಷೆ ಮತ್ತು ಸಂಸ್ಕೃತಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಎಂಬ ಅಭಿಪ್ರಾಯವಿದೆ. ಆದರೆ ನಮ್ಮ ಪ್ರಾದೇಶಿಕ ಗುರುತು ಯಾವುದೇ ಒಂದು ಭಾಷೆ ಅಥವಾ ಜಿಲ್ಲೆಗೆ ಸೀಮಿತವಾಗಿಲ್ಲ. ನಾವು ಅಖಂಡ ಕರ್ನಾಟಕದ ಪ್ರಜೆಗಳು. ತುಳು ಸೇರಿದಂತೆ ಇಲ್ಲಿನ ಎಲ್ಲ ಭಾಷೆ, ಸಂಸ್ಕೃತಿಗಳನ್ನು ಗೌರವಿಸುತ್ತಲೇ ಕನ್ನಡದ ಬಗೆಗಿನ ಪ್ರೀತಿ ಮತ್ತು ಬದ್ಧತೆಯನ್ನು ಬೆಳೆಸಿಕೊಳ್ಳಬೇಕು. ಕನ್ನಡವೆಂಬುದು ನಮ್ಮ ನಾಡಿನ ವಿಶಾಲ ಸಾಂಸ್ಕೃತಿಕ ಪರಂಪರೆಯನ್ನು ಬೆಸೆಯುವ ಪ್ರಮುಖ ಕೊಂಡಿಯಾಗಿದೆ ಎಂದರು.

    ಈ ಆಶಯದ ಭಾಗವಾಗಿಯೇ ಆಳ್ವಾಸ್ ಸಂಸ್ಥೆ ಕಳೆದ 30 ವರ್ಷಗಳಿಂದ ಆಳ್ವಾಸ್ ನುಡಿಸಿರಿ ಸಾಹಿತ್ಯ  ಸಮ್ಮೇಳನದ ಮೂಲಕ ಕನ್ನಡ ನಾಡು, ನುಡಿ, ಸಂಸ್ಕೃತಿ, ಕಲೆ, ಚಿಂತನೆ ಮತ್ತು ಸಾಹಿತ್ಯದ ವಿವಿಧ ಆಯಾಮಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುತ್ತಿದೆ.  ಕನ್ನಡದ ಬೆಳವಣಿಗೆ ಎಂದರೆ ಕೇವಲ ಭಾಷೆಯ ಸಂರಕ್ಷಣೆಯಲ್ಲ. ಅದರಲ್ಲಿರುವ ಜ್ಞಾನ, ಸೃಜನಶೀಲತೆ, ಚಿಂತನೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಸಮಾಜದ ಬದುಕಿನೊಂದಿಗೆ ಬೆಸೆಯುವುದಾಗಿದೆ. ಹೊಸ ತಲೆಮಾರಿನಲ್ಲಿ ಕನ್ನಡದ ಬಗ್ಗೆ ಅಭಿಮಾನ ಮೂಡಿಸುವುದರ ಜೊತೆಗೆ, ಕನ್ನಡವನ್ನು ಆಧುನಿಕ ಜ್ಞಾನ ಮತ್ತು ಸಂವಹನದ ಭಾಷೆಯಾಗಿಯೂ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

    Click here

    Click here

    Click here

    Call us

    Call us

    ಕರ‍್ಯಕ್ರಮದಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ  ವಿದ್ಯಾರ್ಥಿಗಳು ಡೊಳ್ಳು ಕುಣಿತ, ಪೂಜಾ ಕುಣಿತ ನೃತ್ಯ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್, ಕೃಷಿ ವಿಜ್ಞಾನ ಕಾಲೇಜಿನ ಡೀನ್ ಡಾ ವಾಸುದೇವನ್, ಕನ್ನಡ ಸಂಘದ ಸಂಯೋಜಕ ಗಣೇಶ್ ಎಂ ಆರ್ ಹಾಗೂ ಸಹಸಂಯೋಜಕ ಡಾ. ಗುರುಶಾಂತ್ ವಗ್ಗರ್ ಇದ್ದರು. ಶ್ರೀಲಕ್ಷ್ಮೀ ನಿರೂಪಿಸಿ, ಭಾಗ್ಯಶ್ರೀ  ಸ್ವಾಗತಿಸಿದರು.  

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ

    02/11/2026

    ಜಿಲ್ಲಾಮಟ್ಟದ ಈಜು ಸ್ಪರ್ಧೆಯಲ್ಲಿ ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ ವಿದ್ಯಾರ್ಥಿನಿಯರ ಸಾಧನೆ

    02/11/2026

    ಸುಜ್ಞಾನ ನ್ಯಾಷನಲ್ ಪಿಯು ಕಾಲೇಜಿನಲ್ಲಿ ‘ಕನ್ನಡ ಸಿರಿನುಡಿ ಸಂಭ್ರಮ’

    02/11/2026
    Leave A Reply Cancel Reply

    16 − 7 =

    Call us

    Click Here

    Call us

    Call us

    Call us
    Highest Viewed Recently
    • ಕರ್ನಾಟಕ ಮಾಧ್ಯಮ ಆಕಾಡೆಮಿಯಿಂದ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ
    • ಕೋಟ ಪಂಚವರ್ಣ ಸಂಘಟನೆ ಕಛೇರಿಯಲ್ಲಿ ರಾಜ್ಯೋತ್ಸವ ಸಂಭ್ರಮ
    • ಸೈಂಟ್ ಥಾಮಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ಅದ್ಧೂರಿಯಾಗಿ ನಡೆದ ವಾರ್ಷಿಕ ಕ್ರೀಡಾಕೂಟ – ʼವಿಕ್ಟರಿ 2026ʼ
    • ಕನ್ನಡ ಕೊರಳಿನ ಕೂಗಾಗಿದೆಯೇ ಹೊರತು ಕರುಳಿನ ಕೂಗಾಗಿಲ್ಲ: ಅರವಿಂದ ಚೊಕ್ಕಾಡಿ
    • ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.