ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕನ್ನಡ ನಾಡು ನುಡಿಯ ಜೊತೆಗೆ ಭಾಷಾಭಿಮಾನ ಹೆಚ್ಚಬೇಕು ಆ ಮೂಲಕ ಕನ್ನಡ ಭಾಷೆ ಉಳಿಯಲು ಸಾಧ್ಯ ಎಂದು ಕೋಟ ಆರಕ್ಷಕ ಠಾಣೆಯ ಎಎಸ್‌ಐ ಗೋಪಾಲ್ ಪೂಜಾರಿ ಹೇಳಿದರು.
ಅವರು ಭಾನುವಾರ ಕೋಟದ ಡಾ.ಕೋಟ ಶಿವರಾಮ ಕಾರಂತರ ಮನೆಯಂಗಳದಲ್ಲಿ ಪಂಚವರ್ಣ ಯುವಕ ಮಂಡಲ ಹಾಗೂ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇವರ ಆಶ್ರಯದಲ್ಲಿ 29ನೇ ವರ್ಷದ ಸದ್ಭಾವನಾ -2026 ಶೀರ್ಷಿಕೆಯಡಿ ನಡೆದ ಕನ್ನಡ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೆರಿಸಿ ಮಾತನಾಡಿದರು. ಪಂಚವರ್ಣ ಸಂಘಟನೆ ಅನೇಕ ವರ್ಷಗಳಿಂದ ಭಾಷಾಭಿಮಾನ ಬಿತ್ತುವ ಹಾಗೂ ಹಲವು ಸಮಾಜಮುಖಿ ಕಾರ್ಯಗಳ ಮೂಲಕ ಮನೆ ಮಾತಾಗಿ ಬೆಳೆದು ನಿಂತಿದೆ ಎಂದರು.
ಪರಿಸರವಾದಿ ಕೋ.ಗಿ.ನಾ ಮಾತನಾಡಿ, ಭಾಷಾ ಅಸ್ಮಿತೆ ನಮ್ಮೊಳಗಿದೆ ಅದನ್ನು ಅಳಿಸಿ ಹಾಕಲು ಯಾರಿಂದಲೂ ಸಾಧ್ಯವಿಲ,ನಮ್ಮತನ ನಮ್ಮ ಭಾಷಾಭಿಮಾನ ಎಲ್ಲಿ ಹೊದರು ಅದು ನಮ್ಮ ಮನೆಯ ಭಾಷೆಯಾಗಿ ಉಳಿಯುತ್ತದೆ.ಅದರ ಜೊತೆಗೆ ರಾಜ್ಯೋತ್ಸವ ಕನ್ನಡದ ಉತ್ಸವವಾಗಿ ಹೊರಹೊಮ್ಮುತ್ತಿದೆ ಎಂದರು.
ಕಾರ್ಯಕ್ರಮವನ್ನು ಕೋಟ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇಗುಲದ ಅಧ್ಯಕ್ಷ ಹಲಸಿನಕಟ್ಟೆ ಅನಂತಪದ್ಮನಾಭ ಐತಾಳ್ ಉದ್ಘಾಟಿಸಿದರು.
ಗಣ್ಯರಿಂದ ಭುವನೇಶ್ವರ ಭಾವಚಿತ್ರಕ್ಕೆ ಪುಷ್ಭನಮನ ಸಲ್ಲಿಸಲಾಯಿತು. ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೋಟ ಜಾಮೀಯಾ ಮಸೀದಿ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ, ಉದ್ಯಮಿ ರಮೇಶ್ ಪ್ರಭು, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ, ಪಂಚವರ್ಣ ಸಂಘಟನೆಯ ಗೌರವಾಧ್ಯಕ್ಷ ಸತೀಶ್ ಹೆಚ್. ಕುಂದರ್, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ,ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ, ಅಘೋರೇಶ್ವರ ಕಲಾರಂಗದ ಸ್ಥಾಪಕ ಪ್ರಭಾಕರ್ ನಾಯರಿ, ಧರ್ಮಸ್ಥಳ ಗ್ರಾ.ಯೋ. ಕೋಟ ವಲಯದ ಮೇಲ್ವಿಚಾರಕ ನಾಗೇಶ್ ಉಪಸ್ಥಿತರಿದ್ದರು.
ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ನಿರೂಪಿಸಿ, ಪಂಚವರ್ಣ ಸದಸ್ಯ ಪ್ರಭಾಕರ್ ಬಿ.ಎಸ್.ಎನ್.ಎಲ್. ವಂದಿಸಿದರು.

















