Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ನ.05ರಂದು ಹೆಮ್ಮಾಡಿ ಜನತಾ ಪಿಯ ಕಾಲೇಜಿನಲ್ಲಿ ಜನತಾ ಆವಿಷ್ಕಾರ್ 2026
    ಊರ್ಮನೆ ಸಮಾಚಾರ

    ನ.05ರಂದು ಹೆಮ್ಮಾಡಿ ಜನತಾ ಪಿಯ ಕಾಲೇಜಿನಲ್ಲಿ ಜನತಾ ಆವಿಷ್ಕಾರ್ 2026

    Updated:02/11/2026No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಹೆಮ್ಮಾಡಿಯ ಜನತಾ ಪಿಯು ಕಾಲೇಜಿನಲ್ಲಿ ನವೆಂಬರ್ 05 ಗುರುವಾರದಂದು ವ್ಯವಹಾರ ಮೇಳ ಜನತಾ ಆವಿಷ್ಕಾರ್ 2026 ವಿಜ್ಞಾನ, ವ್ಯವಹಾರ, ಸಾಂಸ್ಕೃತಿಕ ಸಂಗಮ ನಡೆಯಲಿದೆ.

    Click Here

    Click Here

    Call us

    Click Here

    ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನವನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳು ಸುಮಾರು 150ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆದು ವಿದ್ಯಾರ್ಥಿಗಳೇ ವ್ಯವಹಾರ ಮಾಡುವುದರ ಮೂಲಕ ಶೈಕ್ಷಣಿಕ ಸಂಚಲನ ಮೂಡಿಸಲಿದ್ದಾರೆ.

    ಅದ್ದೂರಿಯ ಉದ್ಘಾಟನಾ ಕಾರ್ಯಕ್ರಮ:
    ಪೂರ್ವಹ್ನ ನಡೆಯುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ವಿ.ವಿ.ವಿ. ಮಂಡಳಿ ರಿ. ಹೆಮ್ಮಾಡಿ ಇದರ ಅಧ್ಯಕ್ಷರಾದ ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ವಹಿಸಲಿದ್ದಾರೆ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ರಿ. ಉಡುಪಿ ಇದರ ಪ್ರವರ್ತಕರಾದ ನಾಡೋಜ ಡಾ. ಜಿ. ಶಂಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಆದಾನಿ ಗ್ರೂಪ್, ಕರ್ನಾಟಕ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಕಿಶೋರ್ ಆಳ್ವ ಅವರು ವ್ಯವಹಾರ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ ಶೆಟ್ಟಿ ಗಂಟಿಹೊಳೆ, ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ್ ಸಿ. ಕುಂದರ್, ರಕ್ತದ ಆಪದ್ಭಾಂಧವ ಸತೀಶ್ ಸಾಲ್ಯಾನ್ ಮಣಿಪಾಲ.ಜನಸೇವಾ ಟ್ರಸ್ಟ್ ಪ್ರವರ್ತಕರಾದ ವಸಂತ ಗಿಳಿಯಾರ್,ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ.

    ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ಉಡುಪಿ ಜಿಲ್ಲೆಯ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸಾಮೂಹಿಕ ನೃತ್ಯ ಸ್ಪರ್ಧೆ, ಚಿತ್ರ ಕಲಾ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ವಿಜ್ಞಾನ ಮೇಳ, ಕಿರು ಪ್ರಹಸನ ಸ್ಪರ್ಧೆ ನಡೆಯಲಿದೆ.

    ವೈಭವದ ಜನತಾ ಕಲಾ0ಜಲಿ:
    ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರತಿಷ್ಠಿತ ಕಲಾತಂಡಗಳಿಂದ ಹೋಳಿ ಕುಣಿತ, ಹೌoದೇರಾಯನ ವಾಲಗ, ಹುಲಿ ಹೆಜ್ಜೆ,ವಿವಿಧ ನೃತ್ಯ ತಂಡಗಳಿಂದ ನೃತ್ಯ ಪ್ರದರ್ಶನ, ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಸತೀಶ್ ಹೆಮ್ಮಾಡಿ ತಂಡದವರಿಂದ ಜಾದೂ ವಿಸ್ಮಯ ನಡೆಯಲಿದೆ.ಆಸಕ್ತರು ಈ ವ್ಯವಹಾರ ಮೇಳದಲ್ಲಿ ಭಾಗವಹಿಸಿ ಉತ್ಪನ್ನಗಳನ್ನು ಖರೀದಿಸಬಹುದು ಎಂದು ಆಡಳಿತ ಮಂಡಳಿಯ ಅಧ್ಯಕ್ಷರಾದ ಗಣೇಶ್ ಮೊಗವೀರ ತಿಳಿಸಿರುತ್ತಾರೆ.

    Click here

    Click here

    Click here

    Call us

    Call us

    ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಕಾಲೇಜಿನ ಶಿಕ್ಷಣದ ನಡುವೆಯೇ ಸ್ವ ಉದ್ಯೋಗ, ವ್ಯವಹಾರ ಕೌಶಲ್ಯ ಬೆಳೆಸಿಕೊಳ್ಳಬೇಕು. ಕೇವಲ ಅಂಕ ಗಳಿಕೆ ಮಾತ್ರವಲ್ಲದೆ ವ್ಯಾವಹಾರಿಕ ಕೌಶಲ್ಯ, ವ್ಯವಹಾರ ಜ್ಞಾನ ಬೆಳೆಸಿಕೊಂಡು ಸ್ವಾವಲಂಬಿ ಜೀವನ ನಡೆಸಲು ಸನ್ನದ್ದರಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಇವೊಂದು ಅವಕಾಶ ಕಲ್ಪಿಸಿದ್ದೇವೆ. ಈ ವ್ಯವಹಾರ ಮೇಳದಲ್ಲಿ ಸುಮಾರು 150ಕ್ಕೂ ಹೆಚ್ಚು ಮಳಿಗೆಗಳನ್ನು ವಿದ್ಯಾರ್ಥಿಗಳೆ ನಡೆಸಲಿದ್ದಾರೆ – ಗಣೇಶ್ ಮೊಗವೀರ, ಪ್ರಾಂಶುಪಾಲರು, ಜನತಾ ಪಿಯು ಕಾಲೇಜು ಹೆಮ್ಮಾಡಿ.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಉಪ್ಪುಂದ ಶ್ರೀ ದುರ್ಗಾ ಟೈಗರ್ಸ್ ಸಂಯೋಜನೆಯಲ್ಲಿ ಹುಲಿ ಪರ್ವ 2026 ಸಂಪನ್ನ

    02/11/2026

    ಭಂಡಾರ್ಕಾರ್ಸ್: ರಾಜ್ಯೋತ್ಸವ ತಾಳಮದ್ದಳೆ ಮತ್ತು ಡಾ. ಹೆಚ್. ಶಾಂತಾರಾಮ್ ಯಕ್ಷಗಾನ ಪುರಸ್ಕಾರ ಪ್ರದಾನ

    02/11/2026

    ಕೋಡಿ ಗ್ರಾ.ಪಂಗೆ ಭಾರತ ಸರಕಾರದ ಪಂಚಾಯತ್ ರಾಜ್ ಸಚಿವಾಲಯದ ಅಧಿಕಾರಿಗಳ ಭೇಟಿ

    02/11/2026
    Leave A Reply Cancel Reply

    five × two =

    Call us

    Click Here

    Call us

    Call us

    Call us
    Highest Viewed Recently
    • ನ.05ರಂದು ಹೆಮ್ಮಾಡಿ ಜನತಾ ಪಿಯ ಕಾಲೇಜಿನಲ್ಲಿ ಜನತಾ ಆವಿಷ್ಕಾರ್ 2026
    • ಉಪ್ಪುಂದ ಶ್ರೀ ದುರ್ಗಾ ಟೈಗರ್ಸ್ ಸಂಯೋಜನೆಯಲ್ಲಿ ಹುಲಿ ಪರ್ವ 2026 ಸಂಪನ್ನ
    • ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆ: ಅರ್ಜಿ ಆಹ್ವಾನ
    • ಭಂಡಾರ್ಕಾರ್ಸ್: ರಾಜ್ಯೋತ್ಸವ ತಾಳಮದ್ದಳೆ ಮತ್ತು ಡಾ. ಹೆಚ್. ಶಾಂತಾರಾಮ್ ಯಕ್ಷಗಾನ ಪುರಸ್ಕಾರ ಪ್ರದಾನ
    • ಕೋಡಿ ಗ್ರಾ.ಪಂಗೆ ಭಾರತ ಸರಕಾರದ ಪಂಚಾಯತ್ ರಾಜ್ ಸಚಿವಾಲಯದ ಅಧಿಕಾರಿಗಳ ಭೇಟಿ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.