ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕರಾವಳಿ ಜಿಲ್ಲೆಗಳು ಕಲೆ, ಸಾಹಿತ್ಯ ಸಂಸ್ಕೃತಿ ಆತಿಥ್ಯಕ್ಕೆ ಹೆಸರುವಾಸಿಯಾಗಿದೆ. ಜಿಲ್ಲೆಯ ಅನೇಕ ಸಾಧಕರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಹುಲಿ ಪರ್ವದಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಯುವ ಸಮುದಾಯವನ್ನು ಸಂಘಟಿಸುವ ಪ್ರಯತ್ನ ಶ್ಲಾಘನೀಯ ಎಂದು ಬೆಳಗಾವಿ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳ್ಕರ್ ಹೇಳಿದರು.

ಅವರು ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ದೆವಳದ ರಥಬೀದಿಯಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕು ಇತಿಹಾಸದಲ್ಲಿ ಪ್ರಪ್ರಥಮ ಭಾರಿಗೆ ಯುವ ಮುಖಂಡ ಶೇಖರ ಪೂಜಾರಿ ಉಪ್ಪುಂದ ಇವರ ಸಾರಥ್ಯದಲ್ಲಿ ಶ್ರೀ ದುರ್ಗಾ ಟೈಗರ್ಸ್ ಉಪ್ಪುಂದ ಇವರ ಸಂಯೋಜನೆಯಲ್ಲಿ ಆಯೋಜಿಸಲಾದ ಮಂಗಳೂರು ಹಾಗೂ ಉಡುಪಿ ಭಾಗದ ಆಯ್ದ ಪ್ರತಿಷ್ಠಿತ ತಂಡಗಳ ಹುಲಿ ಪರ್ವ-2026 ಆಕರ್ಷಕ ಹುಲಿ ಕುಣಿತ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮ ಅತ್ಯಂತ ವೈಭವದಿಂದ ಸಂಘಟಿಸಲಾಗಿದೆ ಮತ್ತು ಜಿಲ್ಲೆಯ ಜನರ ಸಾಂಸ್ಕೃತಿಕ ಉತ್ಸಾಹದ ಪ್ರತೀಕವಾಗಿದೆ ಎಂದು ಶ್ಲಾಘಿಸಿದರು.


ಹಿರಿಯರಾದ ಅರೆಹಾಡಿ ಮಂಜು ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಉಪ್ಪುಂದದಲ್ಲಿ ಹುಲಿ ಕುಣಿತ ನಡೆಸಿಕೊಂಡು ಬರುತ್ತಿದ್ದ ಹಿರಿಯ ಕಲಾವಿದರನ್ನು ಗೌರವಿಸಲಾಯಿತು ಹಾಗೂ ಸ್ಪರ್ಧೆಗೆ ಆಗಮಿಸಿದ ಹುಲಿ ತಂಡಗಳಿಗೆ ಗೌರವಿಸಲಾಯಿತು.

ಶಾಸಕ ಗುರುರಾಜ ಗಂಟೆಹೊಳೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ, ಸದಸ್ಯರಾದ ಮಹಾಲಿಂಗ ನಾಯ್ಕ್, ರಘುರಾಮ ದೇವಾಡಿಗ, ಉಪ್ಪುಂದ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ನಾರಾಯಣ ಖಾರ್ವಿ, ಖ.ರೈ.ಸೇ. ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಮ.ಬ.ವ್ಯ.ಸೇ.ಸ. ಸಂಘದ ಅಧ್ಯಕ್ಷ ಜಗದೀಶ ಪೂಜಾರಿ ಹಕ್ಕಾಡಿ, ಬೆಳಕೆ ವ್ಯ.ಸೇ.ಸ. ಸಂಘದ ಅಧ್ಯಕ್ಷ ಮಹಾದೇವ ನಾಯ್ಕ್, ತಾಲೂಕು ರೈತಸಂಘದ ಅಧ್ಯಕ್ಷ ನೆಲ್ಯಾಡಿ ದೀಪಕ್ ಕುಮಾರ್ ಶೆಟ್ಟಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ ಆರ್. ಕೆ., ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶೇಖರ ಪೂಜಾರಿ, ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಮಾಜಿ ಸದಸ್ಯೆ ಗೌರಿ ದೇವಾಡಿಗ, ಉದ್ಯಮಿಗಳಾದ ಬಿ. ಎಸ್. ಸುರೇಶ ಶೆಟ್ಟಿ, ಸುಭಾಷ್ ಪೂಜಾರಿ ತಗ್ಗರ್ಸೆ, ಗುರುರಾಜ ಪಂಜು ಪೂಜಾರಿ, ರಘುರಾಮ ಶೆಟ್ಟಿ ಬಿಜೂರು, ಅಶೋಕ ಶೇಟ್ ಉಪ್ಪುಂದ, ರಘುರಾಮ ಕೆ. ಪೂಜಾರಿ ಶಿರೂರು, ರವೀಂದ್ರ ಶೆಟ್ಟಿ, ಉದಯ ಪೂಜಾರಿ, ಜಿ. ಗೋಕುಲ ಶೆಟ್ಟಿ, ಮಂಜು ಪೂಜಾರಿ ಸೇನಾಪುರ, ಕನ್ನಡ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಉಪ್ಪುಂದ, ಶ್ರೀ ದುರ್ಗಾ ಫ್ರೆಂಡ್ಸ್ ಅಧ್ಯಕ್ಷ ಕೇಶವ ದೇವಾಡಿಗ, ಶಿಶುಮಂದಿರ ಸ್ಥಾಪಕಾಧ್ಯಕ್ಷ ಡಿ. ಟಿ. ಸೀತಾರಾಮ ಮಯ್ಯ, ಮೀನುಗಾರರ ಸಹಕಾರಿ ಸಂಘದ ನಿರ್ದೇಶಕ ಬಿಎಚ್ಪಿ ನಾಗರಾಜ ಖಾರ್ವಿ, ಜಾದೂಗಾರ ಓಂಗಣೇಶ್ ಕಾಮತ್ ಉಪ್ಪುಂದ ಮತ್ತಿತರರು ಇದ್ದರು.
ಕಾರ್ಯಕ್ರಮದ ಸಾರಥಿ ಶೇಖರ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಸುಬ್ರಹ್ಮಣ್ಯ ಜಿ. ಉಪ್ಪುಂದ ನಿರೂಪಿಸಿದರು. ಜಿಪಂ ಮಾಜಿ ಸದಸ್ಯ ಎಸ್. ಮದನ್ ಕುಮಾರ್ ವಂದಿಸಿದರು. ಸುಮಾರು 25 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಈ ಸ್ಪರ್ಧಾ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಹುಲಿ ಕುಣಿತ ಸ್ಪರ್ಧೆಯ ಫಲಿತಾಂಶ:
ಪ್ರಥಮ ಬಹುಮಾನ:
ಕಾರ್ಕಳ ಟೈಗರ್ಸ್ ಮತ್ತು ಅಶೋಕರಾಜ್ ಬಳಗ ಕಾಡಬೆಟ್ಟು ಉಡುಪಿ (ಜಂಟಿ ವಿಜೇತರು)
ದ್ವಿತೀಯ ಬಹುಮಾನ:
ಕುರ್ಕಾಲು ಟೈಗರ್ಸ್ ಉಡುಪಿ, ಕರಿಹುಲಿ: ಸುಧರ್ಮ ಮೊಗವೀರ

















