Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ನಕಲಿ ದಾಖಲೆ ಸೃಷ್ಟಿಸಿ ಎಂ.ಸಿ.ಸಿ ಬ್ಯಾಂಕ್‌ಗೆ 98.99 ಲಕ್ಷ ರೂ. ವಂಚನೆ – ಮೂರು ಪ್ರತ್ಯೇಕ ಪ್ರಕರಣ ದಾಖಲು
    ಊರ್ಮನೆ ಸಮಾಚಾರ

    ನಕಲಿ ದಾಖಲೆ ಸೃಷ್ಟಿಸಿ ಎಂ.ಸಿ.ಸಿ ಬ್ಯಾಂಕ್‌ಗೆ 98.99 ಲಕ್ಷ ರೂ. ವಂಚನೆ – ಮೂರು ಪ್ರತ್ಯೇಕ ಪ್ರಕರಣ ದಾಖಲು

    Updated:04/11/2026No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಬೈಂದೂರು:
    ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್‌ಗೆ ಸಲ್ಲಿಸುವ ಮೂಲಕ ಟೊಯೋಟಾ ಕಾರು ಖರೀದಿ ಹಾಗೂ ಆಸ್ತಿ ಅಡಮಾನ ಸಾಲ ಪಡೆದು ಎಂ.ಸಿ.ಸಿ ಬ್ಯಾಂಕ್‌ ಯಡ್ತರೆ ಶಾಖೆಗೆ ಬರೋಬ್ಬರಿ 98.99 ಲಕ್ಷ ರೂ. ವಂಚಿಸಿರುವ ಆರೋಪದಡಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

    Click Here

    Click Here

    Call us

    Click Here

    ಉಡುಪಿಯ MCC Bank Ltd.ನ ಮುಖ್ಯ ವ್ಯವಸ್ಥಾಪಕ ಹಾಗೂ ವಸೂಲಾತಿ ಅಧಿಕಾರಿ ಸಂದೀಪ್ ಕ್ವಾಡ್ರಸ್ ಅವರು ನೀಡಿದ ದೂರಿನ ಮೇರೆಗೆ ಈ ಪ್ರಕರಣಗಳು ದಾಖಲಾಗಿವೆ. ಬೈಂದೂರು ಯಡ್ತರೆ ಶಾಖೆಯಲ್ಲಿ ನಡೆದಿರುವ ಈ ವಂಚನೆ ಪ್ರಕರಣಗಳಲ್ಲಿ ಆರೋಪಿಗಳು ನಕಲಿ ದಾಖಲೆಗಳನ್ನು ಅಸಲಿ ಎಂದು ನಂಬಿಸಿ ಬ್ಯಾಂಕ್‌ನಿಂದ ಲಕ್ಷಾಂತರ ರೂಪಾಯಿ ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ.

    ಪ್ರಕರಣ 1:
    ಶಿರೂರಿನ ಜುಹಾ ಮಂಜಿಲ್ ನಿವಾಸಿ ಸಮೀರನ್ ಶೇಖ್ ಎಂಬಾತ ತನ್ನ ಜಾಮೀನುದಾರ ಅಸ್ನಾ ಶೇಖ್ ಅವರೊಂದಿಗೆ 2026ರ ಜುಲೈ 11ರಂದು ಬ್ಯಾಂಕ್‌ಗೆ ಹಾಜರಾಗಿ ಹೊಸ ಟೊಯೋಟಾ ಇನೋವಾ ಕ್ರಿಸ್ಟಾ ಕಾರು ಖರೀದಿಸುವುದಾಗಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದ. ನಂದಿ ಟೊಯೋಟಾ ಕಾರ್ಸ್ ಪ್ರೈವೇಟ್ ಲಿಮಿಟೆಡ್‌ನ ಜೂನ್ 29ರ ಕೊಟೇಶನ್ ಸಲ್ಲಿಸಿ 27.50 ಲಕ್ಷ ರೂ. ಸಾಲ ಪಡೆದಿದ್ದ. ಬಳಿಕ KA-20-ZZ-9876 ನೋಂದಣಿ ಸಂಖ್ಯೆಯ ವಾಹನವನ್ನು ಪರಿಶೀಲನೆಗೆ ಹಾಜರುಪಡಿಸಿ ಆರ್‌ಸಿ, ಖರೀದಿ ಬಿಲ್, ವಿಮೆ ಹಾಗೂ ಬಿ-ಎಕ್ಸ್‌ಟ್ರಾಕ್ಟ್ ದಾಖಲೆಗಳನ್ನು ಸಲ್ಲಿಸಿದ್ದ. ಅಲ್ಲದೆ, ಎರಡು ತಿಂಗಳ ಸಾಲದ ಕಂತನ್ನೂ ಪಾವತಿಸಿದ್ದ. ಆದರೆ ಬ್ಯಾಂಕ್ ಅಧಿಕಾರಿಗಳು ದಾಖಲೆಗಳ ನೈಜತೆಯನ್ನು ಪರಿಶೀಲಿಸಿದಾಗ ಅವೆಲ್ಲವೂ ನಕಲಿ ಎಂಬುದು ಪತ್ತೆಯಾಗಿದೆ.

    ಪ್ರಕರಣ 2:
    ಗಂಗೊಳ್ಳಿಯ ಖಾರ್ವಿಕೇರಿ ನಿವಾಸಿ ಮಹಮದ್ ಹುಸೈನ್ ಅಜುಮುದ್ದೀನ್ ಎಂಬಾತ ತೆಕ್ಕಟ್ಟೆಯ ಜನತಾ ಕಾಲೋನಿ ನಿವಾಸಿ ಸಾನಾಬಿ ಅವರನ್ನು ಜಾಮೀನುದಾರರನ್ನಾಗಿ ಮಾಡಿಕೊಂಡು 2026ರ ಸೆಪ್ಟೆಂಬರ್ 22ರಂದು ಬ್ಯಾಂಕ್‌ಗೆ ಹಾಜರಾಗಿದ್ದ. ಹೊಸ ಟೊಯೋಟಾ ಫಾರ್ಚುನರ್ ಕಾರು ಖರೀದಿಸುವುದಾಗಿ ನಂದಿ ಟೊಯೋಟಾ ಕಾರ್ಸ್ ಪ್ರೈವೇಟ್ ಲಿಮಿಟೆಡ್‌ನ ಸೆಪ್ಟೆಂಬರ್ 21ರ ಕೊಟೇಶನ್ ಸಲ್ಲಿಸಿ 33.49 ಲಕ್ಷ ರೂ. ಸಾಲಕ್ಕೆ ಅರ್ಜಿ ಸಲ್ಲಿಸಿದ್ದ. ಸೆಪ್ಟೆಂಬರ್ 28ರಂದು ಸಾಲ ಮಂಜೂರಾಗಿದ್ದು, ಬಳಿಕ KA-04-MH-4174 ನೋಂದಣಿ ಸಂಖ್ಯೆಯ ವಾಹನದ ವಿಮಾ ಪಾಲಿಸಿಯನ್ನು ಬ್ಯಾಂಕ್‌ಗೆ ಸಲ್ಲಿಸಿದ್ದ. ಒಂದು ಕಂತನ್ನು ಮರುಪಾವತಿಸಿದ್ದ. ಆದರೆ ದಾಖಲೆಗಳ ಪರಿಶೀಲನೆಗಾಗಿ ಆರ್‌ಟಿಒ ಕಚೇರಿಯನ್ನು ಸಂಪರ್ಕಿಸಿದಾಗ ವಿಮಾ ಪಾಲಿಸಿಯಲ್ಲಿ ನಮೂದಿಸಿದ್ದ ವಾಹನದ ನೋಂದಣಿ ಸಂಖ್ಯೆ ನಕಲಿ ಎಂಬುದು ತಿಳಿದುಬಂದಿದೆ.

    ಪ್ರಕರಣ 3:
    ಸಿದ್ದಾಪುರ ಗ್ರಾಮದ ಹೊಸಂಗಡಿ ನಿವಾಸಿ ಮಹಮದ್ ಸಲೀಂ ಎಂಬಾತ ಹೆಣ್ಣೆಬೈಲು ನಿವಾಸಿ ಅಲ್ ಶಕೀರಾ ಅವರನ್ನು ಜಾಮೀನುದಾರರನ್ನಾಗಿ ಮಾಡಿಕೊಂಡು 2026ರ ಜುಲೈ 15ರಂದು ಬ್ಯಾಂಕ್‌ಗೆ ಹಾಜರಾಗಿದ್ದ. ಹೊಸ ಟೊಯೋಟಾ ಇನೋವಾ ಕ್ರಿಸ್ಟಾ ಕಾರು ಖರೀದಿಸುವುದಾಗಿ ನಂದಿ ಟೊಯೋಟಾ ಕಾರ್ಸ್ ಪ್ರೈವೇಟ್ ಲಿಮಿಟೆಡ್‌ನ ಜುಲೈ 14ರ ಕೊಟೇಶನ್ ಸಲ್ಲಿಸಿ 26 ಲಕ್ಷ ರೂ. ಸಾಲ ಪಡೆದಿದ್ದ. ಬಳಿಕ KA-20-AA-8888 ನೋಂದಣಿ ಸಂಖ್ಯೆಯ ವಾಹನವನ್ನು ಪರಿಶೀಲನೆಗೆ ಹಾಜರುಪಡಿಸಿ ಆರ್‌ಸಿ, ಖರೀದಿ ಬಿಲ್, ವಿಮೆ ಹಾಗೂ ಬಿ-ಎಕ್ಸ್‌ಟ್ರಾಕ್ಟ್ ದಾಖಲೆಗಳನ್ನು ಸಲ್ಲಿಸಿದ್ದ. ಎರಡು ತಿಂಗಳ ಕಂತನ್ನೂ ಪಾವತಿಸಿದ್ದ. ಆದರೆ ಬ್ಯಾಂಕ್ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದಾಗ ಅವೆಲ್ಲವೂ ನಕಲಿ ಎಂಬುದು ಪತ್ತೆಯಾಗಿದೆ.

    Click here

    Click here

    Click here

    Call us

    Call us

    ಇದಲ್ಲದೆ, ಮಹಮದ್ ಸಲೀಂ ತನ್ನ ಹೆಸರಿನಲ್ಲಿರುವ ಹೊಸಂಗಡಿ ಗ್ರಾಮದ 45 ಸೆಂಟ್ಸ್ ಜಮೀನನ್ನು ಅಡಮಾನವಿಟ್ಟು 12 ಲಕ್ಷ ರೂ. ಸಾಲವನ್ನೂ ಪಡೆದಿದ್ದ. ಈ ಸಾಲ ಪಡೆಯುವ ಸಂದರ್ಭದಲ್ಲಿಯೂ ಆತ ಸಲ್ಲಿಸಿದ್ದ ದಾಖಲೆಗಳು ನಕಲಿ ಎಂಬುದು ಬ್ಯಾಂಕ್ ಅಧಿಕಾರಿಗಳ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.

    ಈ ಮೂರು ಪ್ರಕರಣಗಳಲ್ಲಿ ಒಟ್ಟು 98.99 ಲಕ್ಷ ರೂ. ಸಾಲವನ್ನು ನಕಲಿ ದಾಖಲೆಗಳ ಮೂಲಕ ಪಡೆದು ಬ್ಯಾಂಕ್‌ಗೆ ವಂಚಿಸಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

    Byndoor
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಸಾಲಿಗ್ರಾಮ ದೇಗುಲಕ್ಕೆ ಕಲ್ಲಡ್ಕ ಪ್ರಭಾಕರ್ ಭಟ್ ಭೇಟಿ

    04/11/2026

    ಪ್ರತಿಭಾ ಕಾರಂಜಿ ಕ್ಲಸ್ಟರ್ ಮಟ್ಟದ ಸ್ಪರ್ಧೆಯ ಪ್ರೌಢ ವಿಭಾಗದಲ್ಲಿ ಸುಜ್ಞಾನ – ವಿದ್ಯಾರಣ್ಯ ಸಂಸ್ಥೆಗೆ ಅದ್ಭುತ ಜಯ

    04/11/2026

    ಬೈಂದೂರು ಶಾಸಕರ ರೈತ ವಿರೋಧಿ ನಡೆ: ಕೆ. ವಿಕಾಸ್ ಹೆಗ್ಡೆ

    03/11/2026
    Leave A Reply Cancel Reply

    17 + nine =

    Call us

    Click Here

    Call us

    Call us

    Call us
    Highest Viewed Recently
    • ರಾಜ್ಯ ಮಟ್ಟದ ಬಾಲಕಿಯರ ಖೋ-ಖೋ ಪಂದ್ಯಾಟ: ಆಳ್ವಾಸ್‌ ಬಾಲಕಿಯರ ತಂಡ ಚಾಂಪಿಯನ್
    • ಸಾಲಿಗ್ರಾಮ ದೇಗುಲಕ್ಕೆ ಕಲ್ಲಡ್ಕ ಪ್ರಭಾಕರ್ ಭಟ್ ಭೇಟಿ
    • ಡಿಪ್ಲೊಮಾ ಇನ್ ಕೋ-ಆಪರೇಟಿವ್ ಆಡಿಟ್ ತರಬೇತಿ: ಅರ್ಜಿ ಆಹ್ವಾನ
    • ನಕಲಿ ದಾಖಲೆ ಸೃಷ್ಟಿಸಿ ಎಂ.ಸಿ.ಸಿ ಬ್ಯಾಂಕ್‌ಗೆ 98.99 ಲಕ್ಷ ರೂ. ವಂಚನೆ – ಮೂರು ಪ್ರತ್ಯೇಕ ಪ್ರಕರಣ ದಾಖಲು
    • ಪ್ರತಿಭಾ ಕಾರಂಜಿ ಕ್ಲಸ್ಟರ್ ಮಟ್ಟದ ಸ್ಪರ್ಧೆಯ ಪ್ರೌಢ ವಿಭಾಗದಲ್ಲಿ ಸುಜ್ಞಾನ – ವಿದ್ಯಾರಣ್ಯ ಸಂಸ್ಥೆಗೆ ಅದ್ಭುತ ಜಯ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.