Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕೋಟ: ಹಣ ದುಪ್ಪಟ್ಟು ಮಾಡುವ ಆಮಿಷವೊಡ್ಡಿ ಹೊಟೇಲ್ ಉದ್ಯಮಿಗೆ 5.76 ಲಕ್ಷ ರೂ. ವಂಚನೆ
    ಊರ್ಮನೆ ಸಮಾಚಾರ

    ಕೋಟ: ಹಣ ದುಪ್ಪಟ್ಟು ಮಾಡುವ ಆಮಿಷವೊಡ್ಡಿ ಹೊಟೇಲ್ ಉದ್ಯಮಿಗೆ 5.76 ಲಕ್ಷ ರೂ. ವಂಚನೆ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕೋಟ:
    ಹೂಡಿಕೆ ಮಾಡಿದ ಹಣವನ್ನು ಕೆಲವೇ ದಿನಗಳಲ್ಲಿ ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ ಹೋಟೆಲ್ ಉದ್ಯಮಿಯೊಬ್ಬರಿಂದ 5.76 ಲಕ್ಷ ರೂ. ಪಡೆದು ವಂಚಿಸಿರುವ ಆರೋಪದಡಿ ಮೂವರ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Click Here

    Click Here

    Call us

    Click Here

    ಕುಂದಾಪುರ ತಾಲೂಕಿನ ವಡೇರಹೋಬಳಿ ನಿವಾಸಿ ಪ್ರಕಾಶ್ (38 ವರ್ಷ) ಎಂಬವರು ವಂಚನೆಗೊಳಗಾದವರು. ದೂರಿನ ಆಧಾರದಲ್ಲಿ ಬಸ್ರೂರಿನ ಜ್ಯೋತಿ, ಸಾಲಿಗ್ರಾಮದ ಅಕ್ಷತಾ ದೇವಾಡಿಗ ಹಾಗೂ ಮೈಸೂರಿನ ಹಿರಿಯಪಟ್ಟಣದ ಪ್ರಶಾಂತ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ಉದ್ಯಮಿ ಪ್ರಕಾಶ್ ಅವರು ಕೋಟದಲ್ಲಿ ಹಲವು ವರ್ಷಗಳಿಂದ ಹೋಟೆಲ್ ಉದ್ಯಮ ನಡೆಸಿಕೊಂಡು ಬರುತ್ತಿದ್ದಾರೆ. ಈ ಅವಧಿಯಲ್ಲಿ ಬಸ್ರೂರು ನಿವಾಸಿ ಜ್ಯೋತಿ ಎಂಬವರು ಅವರಿಗೆ ಪರಿಚಯವಾಗಿದ್ದರು. ತಮ್ಮ ಬಳಿ ವಿವಿಧ ಹಣಕಾಸು ವ್ಯವಹಾರಗಳು ಹಾಗೂ ಹೂಡಿಕೆ ಮಾಡಿದ ಹಣವನ್ನು ದುಪ್ಪಟ್ಟು ಮಾಡುವ ಯೋಜನೆಗಳಿವೆ ಎಂದು ಜ್ಯೋತಿ ತಿಳಿಸಿದ್ದರು.

    ಈ ಯೋಜನೆಗಳಲ್ಲಿ ಹಣ ಹೂಡಿದರೆ ಕಡಿಮೆ ಅವಧಿಯಲ್ಲಿ ಉತ್ತಮ ಲಾಭ ದೊರೆಯುತ್ತದೆ ಎಂದು ನಂಬಿಸಿ ಪ್ರಕಾಶ್ ಅವರಿಂದ ಹಂತ ಹಂತವಾಗಿ ಹಣ ಪಡೆದುಕೊಂಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

    2025ರ ಜನವರಿ 21ರಿಂದ ಮೇ. 23ರ ವರೆಗೆ ಜ್ಯೋತಿ ಸೂಚನೆಯಂತೆ ಪ್ರಕಾಶ್ ಅವರು ಸಾಲಿಗ್ರಾಮ ನಿವಾಸಿ ಅಕ್ಷತಾ ದೇವಾಡಿಗ ಅವರ ಬ್ಯಾಂಕ್ ಖಾತೆಗೆ ಫೋನ್‌ಪೇ ಮೂಲಕ ಒಟ್ಟು 3,68,000 ರೂ. ಹಂತ ಹಂತವಾಗಿ ವರ್ಗಾಯಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    Click here

    Click here

    Click here

    Call us

    Call us

    ಇಷ್ಟೇ ಅಲ್ಲದೇ ಜ್ಯೋತಿ ಅವರ ಒತ್ತಾಯದ ಮೇರೆಗೆ ಮೈಸೂರಿನ ಹಿರಿಯಪಟ್ಟಣ ನಿವಾಸಿ ಪ್ರಶಾಂತ್ ಅವರ ಖಾತೆಗೆ ಫೋನ್‌ಪೇ ಮೂಲಕ 58,000  ರೂ. ವರ್ಗಾಯಿಸಿರುವುದಾಗಿ ಆರೋಪಿಸಲಾಗಿದೆ. ಈ ಎರಡು ಖಾತೆಗಳಿಗೆ ಒಟ್ಟು 4,26,000 ರೂ. ವರ್ಗಾವಣೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿರುವುದರ ಜೊತೆಗೆ ಜ್ಯೋತಿ ಅವರ ಕೋರಿಕೆಯಂತೆ 1,50,000 ರೂ. ನಗದು ನೀಡಿರುವುದಾಗಿಯೂ ಪ್ರಕಾಶ್ ದೂರಿನಲ್ಲಿ ತಿಳಿಸಿದ್ದಾರೆ. ಈ ಮೂಲಕ ಬ್ಯಾಂಕ್ ವರ್ಗಾವಣೆ ಮತ್ತು ನಗದು ಸೇರಿ ಒಟ್ಟು 5,76,000 ರೂ. ಹಣವನ್ನು ಆರೋಪಿಗಳು ಪಡೆದುಕೊಂಡಿರುವುದಾಗಿ ಆರೋಪಿಸಲಾಗಿದೆ.

    ಹೂಡಿಕೆ ಮಾಡಿದ ಹಣವನ್ನು ಕೆಲವೇ ದಿನಗಳಲ್ಲಿ ಲಾಭಾಂಶದೊಂದಿಗೆ ದುಪ್ಪಟ್ಟು ಮಾಡಿ ಹಿಂದಿರುಗಿಸುವುದಾಗಿ ಭರವಸೆ ನೀಡಲಾಗಿತ್ತು ಎಂದು ದೂರಿನಲ್ಲಿ ವಿವರಿಸಲಾಗಿದೆ.

    ಹಣ ಪಡೆದುಕೊಂಡ ಬಳಿಕವೂ ಜ್ಯೋತಿ ಮತ್ತಷ್ಟು ಹಣ ನೀಡುವಂತೆ ಒತ್ತಾಯಿಸಿದ್ದರು. ಆದರೆ ಪ್ರಕಾಶ್ ಅವರು ಹೆಚ್ಚುವರಿ ಹಣ ನೀಡಲು ನಿರಾಕರಿಸಿ, ಈಗಾಗಲೇ ಹೂಡಿಕೆ ಮಾಡಿರುವ ಹಣವನ್ನು ಹಿಂದಿರುಗಿಸುವಂತೆ ಕೇಳಿಕೊಂಡಿದ್ದರು.

    ಜ್ಯೋತಿ ಅವರು ಹಣ ವಾಪಸ್ ನೀಡುವ ಬದಲು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿರುವುದಾಗಿ ಪ್ರಕಾಶ್ ಆರೋಪಿಸಿದ್ದಾರೆ. ಹಣ ಹಿಂತಿರುಗಿಸದ ಹಿನ್ನೆಲೆಯಲ್ಲಿ ಪ್ರಕಾಶ್ ಅವರು ನ್ಯಾಯಾಲಯದ ಮೊರೆ ಹೋಗಿ ಖಾಸಗಿ ದೂರು ಸಲ್ಲಿಸಿದ್ದರು.

    ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Kota
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕುಂದಾಪುರ: ಶ್ರೀ ವೆಂಕಟರಮಣ ಪ.ಪೂ ಕಾಲೇಜಿನಲ್ಲಿ ʼವಿಕ್ಟರಿ 2026ʼ ಉದ್ಘಾಟನೆ

    05/11/2026

    ಮೂಡ್ಲಕಟ್ಟೆ: ʼಇನೋವೆಷನ್ ಅಂಡ್‌ ಡಿಸೈನ್ ಥಿಂಕಿಂಗ್ʼ ವಿಷಯದ ಕುರಿತು ವಿಶೇಷ ಉಪನ್ಯಾಸ

    05/11/2026

    ಬಾಲ್ ಬ್ಯಾಡ್ಮಿಂಟನ್: ಗಂಗೊಳ್ಳಿ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

    04/11/2026
    Leave A Reply Cancel Reply

    twenty − one =

    Call us

    Click Here

    Call us

    Call us

    Call us
    Highest Viewed Recently
    • ಕುಂದಾಪುರ: ಶ್ರೀ ವೆಂಕಟರಮಣ ಪ.ಪೂ ಕಾಲೇಜಿನಲ್ಲಿ ʼವಿಕ್ಟರಿ 2026ʼ ಉದ್ಘಾಟನೆ
    • ಆಳ್ವಾಸ್: ಆರೋಗ್ಯಕರ ನಡವಳಿಕೆ ಹಾಗೂ ಎಚ್‌ಐವಿ ಏಡ್ಸ್ ಕುರಿತು ಜಾಗೃತಿ ಉಪನ್ಯಾಸ
    • ವಿದ್ಯಾರ್ಥಿಗಳಿಗೆ ವಸತಿ ಶಾಲೆ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಕಲ್ಪಿಸಿ: ತನ್ವೀರ್ ಸೇಠ್
    • ಕೋಟ: ಹಣ ದುಪ್ಪಟ್ಟು ಮಾಡುವ ಆಮಿಷವೊಡ್ಡಿ ಹೊಟೇಲ್ ಉದ್ಯಮಿಗೆ 5.76 ಲಕ್ಷ ರೂ. ವಂಚನೆ
    • ಮೂಡ್ಲಕಟ್ಟೆ: ʼಇನೋವೆಷನ್ ಅಂಡ್‌ ಡಿಸೈನ್ ಥಿಂಕಿಂಗ್ʼ ವಿಷಯದ ಕುರಿತು ವಿಶೇಷ ಉಪನ್ಯಾಸ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.