Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಅರಿತು ಆಚರಿಸುವುದೇ ಬೆಳಕಿನ ಹಬ್ಬದ ನಿಜವಾದ ಅರ್ಥ: ಮುನಿರಾಜ್ ರೆಂಜಾಳ
    alvas nudisiri

    ಅರಿತು ಆಚರಿಸುವುದೇ ಬೆಳಕಿನ ಹಬ್ಬದ ನಿಜವಾದ ಅರ್ಥ: ಮುನಿರಾಜ್ ರೆಂಜಾಳ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಮೂಡುಬಿದಿರೆ:
    ದೀಪಾವಳಿ ಕೇವಲ ಸಂಭ್ರಮದ ಹಬ್ಬವಲ್ಲ. ಅದು ಜ್ಞಾನ, ತಿಳುವಳಿಕೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳಗಿಸುವ ಹಬ್ಬವಾಗಿದೆ ಎಂದು ಖ್ಯಾತ ಚಿಂತಕ ಮುನಿರಾಜ್ ರೆಂಜಾಳ ಹೇಳಿದರು.

    Click Here

    Click Here

    Call us

    Click Here

    ಅವರು ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಡೊಳ್ಳು ದೀಪಾವಳಿ ಕಾರ್ಯಕ್ರಮದಲ್ಲಿ ದೀಪಾವಳಿ ಸಂದೇಶ ನೀಡಿ ಮಾತನಾಡಿದರು. ಪ್ರತಿಯೊಂದು ಹಬ್ಬದ ಹಿಂದೆಯೂ ಒಂದು ಇತಿಹಾಸ, ಸಂಸ್ಕೃತಿ ಹಾಗೂ ಬದುಕಿಗೆ ಮಾರ್ಗದರ್ಶನ ನೀಡುವ ಸಂದೇಶವಿದೆ. ಹಣತೆ ಕೇವಲ ಬೆಳಕಿನ ಸಂಕೇತವಲ್ಲ.  ಅದು ಜ್ಞಾನ ಮತ್ತು ತಿಳುವಳಿಕೆಯ ಪ್ರತೀಕವಾಗಿದೆ. ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಹರಡುವ ಸಂದೇಶವನ್ನು ಹಣತೆ ನೀಡುತ್ತದೆ. ನಾವೆಲ್ಲರೂ ಒಂದೊಂದು ಹಣತೆಯಂತೆ ನಾವು ಇರುವ ಸ್ಥಳದಲ್ಲಿ ಬೆಳಕು ಹರಿಸುವ ಕೆಲಸ ಮಾಡಬೇಕು.

    ಸಮಾಜದಲ್ಲಿ ಪ್ರೀತಿ, ಸಹಬಾಳ್ವೆ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಮೂಲಕ ನಮ್ಮ ಬದುಕು ಇತರರಿಗೂ ಬೆಳಕಾಗಬೇಕು. ದೀಪಾವಳಿ ಎಲ್ಲಾ ಪಂಥ, ಸಮುದಾಯಗಳ ನಡುವೆ ಸಂಭ್ರಮ ಹಾಗೂ ಸೌಹಾರ್ದತೆಯನ್ನು ಬೆಸೆಯುವ ಹಬ್ಬವಾಗಿದೆ. ಬೆಳಕು ಎಂಬುದು ಎಲ್ಲರಿಗೂ ಸಮಾನವಾದುದು. ಅದೇ ರೀತಿ ಮಾನವೀಯತೆ ಮತ್ತು ಪ್ರೀತಿಯೂ ಎಲ್ಲಾ ಗಡಿಗಳನ್ನು ಮೀರಿದ ಮೌಲ್ಯಗಳಾಗಿವೆ. ನಮ್ಮ ವೈವಿಧ್ಯಮಯ ಸಂಸ್ಕೃತಿಯ ನಡುವೆ ಇಂತಹ ಹಬ್ಬಗಳು ಏಕತೆ ಮತ್ತು ಸಾಮರಸ್ಯವನ್ನು ಗಟ್ಟಿಗೊಳಿಸುತ್ತವೆ ಎಂದರು.

    ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಡೊಳ್ಳು ತಂಡದ ವಿದ್ಯಾರ್ಥಿಗಳು ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮನೆಗೆ ತೆರಳಲು ಸಾಧ್ಯವಾಗದೆ ಆಳ್ವಾಸ್‌ನಲ್ಲಿಯೇ ಉಳಿದುಕೊಂಡಿರುವ ವಿದ್ಯಾರ್ಥಿಗಳಿಗಾಗಿ ಈ ವಿಶೇಷ ಆಚರಣೆಯನ್ನು ಆಯೋಜಿಸಲಾಗಿದೆ ಶ್ರೀಲಂಕಾ, ಕಾಶ್ಮೀರ, ಬಿಹಾರ, ಮಣಿಪುರ, ಅಸ್ಸಾಂ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಶಿಕ್ಷಣಕ್ಕಾಗಿ ಆಳ್ವಾಸ್‌ಗೆ ಆಗಮಿಸಿರುವ ವಿದ್ಯಾರ್ಥಿಗಳು ತಮ್ಮ ಮನೆ, ಕುಟುಂಬ ಮತ್ತು ಊರಿನ ಹಬ್ಬದ ಸಂಭ್ರಮವನ್ನು ಇಲ್ಲಿ ನೆನಪಿಸಿಕೊಳ್ಳುವುದು ಸಹಜ. ಅಂತಹ ವಿದ್ಯಾರ್ಥಿಗಳಿಗೂ ದೀಪಾವಳಿಯ ಸಂತಸ, ಆತ್ಮೀಯತೆ ಮತ್ತು ಹಬ್ಬದ ಸಂಭ್ರಮವನ್ನು ಅನುಭವಿಸುವ ಅವಕಾಶ ದೊರೆಯಬೇಕು ಎಂಬ ಉದ್ದೇಶದಿಂದ ಈ ಆಚರಣೆಯನ್ನು ರೂಪಿಸಲಾಗಿದೆ ಎಂದರು.

    ವಿವಿಧ ರಾಜ್ಯಗಳಿಂದ ಬಂದಿರುವ ವಿದ್ಯಾರ್ಥಿಗಳು ಒಂದೇ ಕುಟುಂಬದ ಸದಸ್ಯರಂತೆ ಸೇರಿ ದೀಪಾವಳಿಯನ್ನು ಸಂಭ್ರಮಿಸಬೇಕು ಎಂಬ ಆಶಯದಿಂದ ಭಜನೆ ಸೇರಿದಂತೆ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ ಎಂದರು.

    Click here

    Click here

    Click here

    Call us

    Call us

    ದೀಪಾವಳಿಯ ಸಂಪ್ರದಾಯಿಕ ಆಚರಣೆಗಳಿಗೆ ಭಕ್ತಿಯ ಸೊಬಗು ತುಂಬಿದ ಭಜನಾ ಕಾರ್ಯಕ್ರಮವು ವಿಶೇಷ ಆಕರ್ಷಣೆಯಾಯಿತು. ಮಂಗಳೂರಿನ ಇಸ್ಕಾನ್ ಬಳಗದ ಎರಡು ತಂಡಗಳು, ಆದಿತ್ಯ ಭಟ್ ಪಾಣೆಮಂಗಳೂರು, ಆಳ್ವಾಸ್ ಸಂಸ್ಥೆಯ ಭಜನಾ ತಂಡ ಸೇರಿದಂತೆ ವಿವಿಧ ಭಜನಾ ಮಂಡಳಿಗಳು ಭಕ್ತಿಗೀತೆ ಹಾಗೂ ಕುಣಿತ ಭಜನೆಯ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದವು. ಕಲ್ಲಮುಂಡ್ಕೂರಿನ ಮಹಾಲಿಂಗೇಶ್ವರ ಭಜನಾ ಮಂಡಳಿ, ಸಂಪಿಗೆ ಪುತ್ತಿಗೆಯ ಗುರು ರಾಘವೇಂದ್ರ ಭಜನಾ ಮಂಡಳಿ, ಇರುವೈಲು ಪುಪಾಡಿಕಲ್ಲಿನ ಸತ್ಯನಾರಾಯಣ ಭಜನಾ ಮಂಡಳಿ, ಮೂಡುಬಿದಿರೆ ಕೋಟೆಬಾಗಿಲಿನ ಮಹಮ್ಮಾಯಿ ಸೇವಾ ಭಜನಾ ಮಂಡಳಿ ಹಾಗೂ ಮುಂಡ್ಕೂರು–ಬೆಳ್ಮಣ್‌ನ ಸೇವಾ ಭಾರತಿ ಭಜನಾ ಮಂಡಳಿಗಳು ಭಾಗವಹಿಸಿ ಭಕ್ತಿಸಂಗೀತದ ಮೂಲಕ ಹಬ್ಬದ ವಾತವರಣವನ್ನು ಇಮ್ಮಡಿಗೊಳಿಸಿದವು.  

    ಇದಕ್ಕೂ ಮುನ್ನ ಸಾಂಪ್ರದಾಯಿಕ ದೀಪಾವಳಿ ಆಚರಣೆಯ ಅಂಗವಾಗಿ ಗೋಪೂಜೆ, ಬಲೀಂದ್ರ ಪೂಜೆ, ಕೃಷಿಗೆ ಸಂಬಂಧಿಸಿದ ಉಪಕರಣಗಳ ಪೂಜೆ ಹಾಗೂ ತುಳಸಿ ಪೂಜೆ ನೆರವೇರಿಸಲಾಯಿತು. ದೀಪಾವಳಿ ಸಂಭ್ರಮದ ಅಂಗವಾಗಿ ಡೊಳ್ಳು ಪೂಜೆಯನ್ನು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು.

    ಕಾರ್ಯಕ್ರಮದಲ್ಲಿ ಉದ್ಯಮಿ ಕೆ ಶ್ರೀಪತಿ ಭಟ್, ಮೀನಾಕ್ಷಿ ಆಳ್ವ, ಡಾ. ವಿನಯ ಆಳ್ವ, ಡಾ. ಹನಾ ಶೆಟ್ಟಿ, ಡಾ. ಗ್ರೀಷ್ಮಾ ಆಳ್ವ, ಶಿಕ್ಷಕ ಹಾಗೂ ಶಿಕ್ಷಕೇತರ ವರ್ಗದವರು, ವಿದ್ಯಾರ್ಥಿಗಳು,  ಸ್ಥಳೀಯರು ಪಾಲ್ಗೊಂಡರು. ನಿತೇಶ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.  

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಪ್ರತಿಭಾ ಕಾರಂಜಿಯಲ್ಲಿ ಶ್ರೀ ವೆಂಕಟರಮಣ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ – ತಾಲೂಕು ಮಟ್ಟಕ್ಕೆ ಆಯ್ಕೆ

    10/11/2026

    ದೀಪಾವಳಿ ಪ್ರಯುಕ್ತ ಆಳ್ವಾಸ್ ಆಯುರ್ವೇದ ಆಸ್ಪತ್ರೆಯಲ್ಲಿ ಅಭ್ಯಂಗ ಸಪ್ತಾಹ ಶಿಬಿರ ಆರಂಭ

    10/11/2026

    ಕನ್ನಡದ ಅಸ್ಮಿತೆಯ ಅನಾವರಣಕ್ಕೆ ಯುವಶಕ್ತಿಯೇ ಆಶಾಕಿರಣ: ಡಾ. ಎಚ್.ಎಸ್. ಸತ್ಯನಾರಾಯಣ

    10/11/2026
    Leave A Reply Cancel Reply

    sixteen + 13 =

    Call us

    Click Here

    Call us

    Call us

    Call us
    Highest Viewed Recently
    • ಅರಿತು ಆಚರಿಸುವುದೇ ಬೆಳಕಿನ ಹಬ್ಬದ ನಿಜವಾದ ಅರ್ಥ: ಮುನಿರಾಜ್ ರೆಂಜಾಳ
    • ನವೀನಚಂದ್ರ ಮರವಂತೆ ಸ್ಮಾರಕ ಚಾರಿಟೇಬಲ್‌ ಟ್ರಸ್ಟ್: ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ
    • ಪ್ರತಿಭಾ ಕಾರಂಜಿಯಲ್ಲಿ ಶ್ರೀ ವೆಂಕಟರಮಣ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ – ತಾಲೂಕು ಮಟ್ಟಕ್ಕೆ ಆಯ್ಕೆ
    • ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳಿಂದ ಬ್ರಹ್ಮಾವರ ರುಡ್‌ಸೆಟ್ ಸಂಸ್ಥೆಗೆ ಭೇಟಿ
    • ಸೈಂಟ್ ಥಾಮಸ್ ಕಪ್–2026 ಅಂತರ ಶಾಲಾ ಥ್ರೋಬಾಲ್ ಪಂದ್ಯಾವಳಿ ಸಂಪನ್ನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.