ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಿತ್ರಮಂಡಳಿ, ಕೋಟ ಇವುಗಳ ಆಶ್ರಯದಲ್ಲಿ ನಡೆದ ನವೆಂಬರ್ ತಿಂಗಳ ನಂನಮ್ಮೊಳಗೆ ಸಾಹಿತ್ಯಾವಲೋಕನ ಕಾರ್ಯಕ್ರಮದಲ್ಲಿ ಸುಮನಾ ಆರ್ ಹೇರ್ಳೆಯವರ ಮಕ್ಕಳ ಹಾಡುಗಳ ಸಂಕಲನ ಬಣ್ಣದ ಚಿಟ್ಟೆ ಇತ್ತೀಚಿಗೆ ಲೋಕಾರ್ಪಣೆಗೊಂಡಿತು.
ಕುಂದಾಪುರದ ಶಸ್ತ್ರಚಿಕಿತ್ಸಾ ತಜ್ಞ ಡಾ. ಉಮೇಶ್ ಭಟ್ ಕೃತಿ ಲೋಕಾರ್ಪಣೆಗೊಳಿಸಿ, ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೈಯಾಡಿಸಿದ ಸುಮನಾ ಹೇರ್ಳೆಯವರ ಸಾಧನೆ, ನಿರಂತರ ಸಾಹಿತ್ಯ ಕೃಷಿ ಪ್ರಶಂಸನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ನೀ. ಸುರೇಂದ್ರ ಅಡಿಗ ಬಣ್ಣದ ಚಿಟ್ಟೆ ಕೃತಿಯು ಕನ್ನಡ ಭಾಷಾ ಶಿಕ್ಷಕರು ಕೈಪಿಡಿಯಾಗಿ ಬಳಸಬಹುದಾದಂತಹ ಉತ್ತಮ ಮಕ್ಕಳ ಹಾಡುಗಳ ಸಂಕಲನ ಎಂದರು.
ಹಿರಿಯ ಸಾಹಿತಿ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಸ್ವಾಗತಿಸಿ, ಪೂರ್ಣಿಮಾ ಅಧಿಕಾರಿ ಕೃತಿಯನ್ನು ಪರಿಚಯಿಸಿದರು. ಮಹಾಲಕ್ಷ್ಮಿ ಸೋಮಯಾಜಿ ನಿರೂಪಿಸಿದರು.
ಕೃತಿಯಲ್ಲಿನ ಕೆಲವು ಹಾಡುಗಳನ್ನು ಪುಟಾಣಿಗಳಾದ, ಸ್ಕಂದ, ಅಹನಾ, ಶ್ರೀಜಿತ್ ಮತ್ತು ಮನೋಮಯ್ ಹಾಡಿದರು. ಉಡುಪಿ ಜಿಲ್ಲಾ ಕಸಾಪ ಕೋಶಾಧಿಕಾರಿ ಮನೋಹರ ಭಟ್ ಧನ್ಯವಾದ ಸಮರ್ಪಿಸಿದರು.

















