ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಶ್ರೀ ವಿಷ್ಣು ಮೂರ್ತಿ ದೇವಸ್ಥಾನ ಪಾರಂಪಳ್ಳಿ ಇಲ್ಲಿ ಕಾರ್ತಿಕ ಮಾಸದ ಭಜನಾ ಕಾರ್ಯಕ್ರಮದಲ್ಲಿ 96 ವರ್ಷಗಳ ಕಾಲ ಭಜನೆಯನ್ನು ನಡೆಸಿಕೊಂಡು ಬಂದ ಶ್ರೀರಾಮ ವಿಶ್ವಸ್ಥ ಮಂಡಳಿ ಬಾಳ್ಕುದ್ರು ಹಂಗಾರಕಟ್ಟೆ ಭಜನಾ ತಂಡವನ್ನು ಶ್ರೀ ಮಹಾವಿಷ್ಣು ಭಜನಾ ಸಂಘ ಪಾರಂಪಳ್ಳಿ ಇವರ ವತಿಯಿಂದ ಗೌರವ ಸಂಮ್ಮಾನ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹಾ ವಿಷ್ಣು ಭಜನಾ ಸಂಘದ ಅಧ್ಯಕ್ಷ ಶ್ರೀರಾಮಚಂದ್ರ ಉಪಾಧ್ಯ ವಹಿಸಿದರು. ಅತಿಥಿಗಳಾಗಿ ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ಅಧ್ಯಕ್ಷ ಪಟ್ಟಾಭಿರಾಮ ಸೋಮಯಾಜಿ, ಭಜನಾ ಸಂಘದ ಕೋಶಾಧಿಕಾರಿ ನಾಗರಾಜ ಸೋಮಯಾಜಿ, ಮಹಿಳಾ ಭಜನಾ ಸಂಘದ ಅಧ್ಯಕ್ಷೆ ಮಾಲತಿ ಅಡಿಗ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀ ಮಹಾ ವಿಷ್ಣು ಭಜನಾ ಸಂಘದ ಕಾರ್ಯದರ್ಶಿಯಾದ ಪಿ.ವೈ ಕೃಷ್ಣ ಪ್ರಸಾದ್ ಹೇರ್ಳೆ ನಿರೂಪಿಸಿದರು. ಬ್ರಾಹ್ಮಣ ಮಹಾ ಸಭಾದ ಕಾರ್ಯದರ್ಶಿ ರಾಜಾರಾಮ್ ಐತಾಳ್ ವಂದಿಸಿದರು.












