ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಬೆಂಗಳೂರು ಕರ್ನಾಟಕ ರಾಜ್ಯ ಕಾನೂನು ಪ್ರಾಧಿಕಾರ, ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ, ನೂಜಾಡಿ ಆಂಗ್ಲ ಮಾಧ್ಯಮ ಶಾಲೆ ಸಹಭಾಗಿತ್ವದಲ್ಲಿ ಮಕ್ಕಳಿಗೆ “ಬಚ್ಪನ್ ಸುರಕ್ಷಾ ಅಭಿಯಾನದಡಿ, ಕಾನೂನು ಅರಿವು ಕಾರ್ಯಕ್ರಮವು ಬುಧವಾರ ನಡೆಯಿತು.
ಮುಖ್ಯ ಸಂಪನ್ಮೂಲ ಅಥಿತಿಯಾಗಿ ಭಾಗವಹಿಸಿದ್ದ ಉಡುಪಿ ನ್ಯಾಯಾವಾದಿ ಮತ್ತು ಕಾನೂನು ನೆರವು ಅಭಿರಕ್ಷಕರಾದ ರಾಘವೇಂದ್ರ ಎಸ್., ಅವರು ಮಕ್ಕಳಿಗೆ ಮಕ್ಕಳ ರಕ್ಷಣಾ ನೀತಿ 2016, ತಿದ್ದುಪಡಿ ನಿಯಮ 2023, ಕಡ್ಡಾಯ ಅನುಷ್ಠಾನ, ಮಕ್ಕಳ ಸುರಕ್ಷತೆ ಕ್ರಮ, ಅಗತ್ಯ ಜಾಗೃತಿ, ಸಂಕ್ಷಿಪ್ತವಾಗಿ ವಿವರಿಸುತ್ತಾ, ಮಕ್ಕಳಿಗೆ ಪೋಕ್ಸೋ ಕಾಯ್ದೆ, ಮಾಧಕ ದ್ರವ್ಯ ನಿರ್ಮೂಲನ ಕಾಯ್ದೆ, ಬಾಲ ಕಾರ್ಮಿಕ ಪದ್ಧತಿ, ಸಂಚಾರಿ ನಿಯಮ ಜಾಗೃತಿ ಮತ್ತು ಪಾಲನೆ ಬಗ್ಗೆ ಸಂಸ್ಷಿಪ್ತಾವಾಗಿ ಅರಿವು ಮತ್ತು ಜಾಗೃತಿ ಮೂಡಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರುಯಾದ ಶೈಲಜಾ ವಿ. ಶೆಟ್ಟಿ ಸ್ವಾಗತ ಭಾಷಣ ನಿರ್ವಹಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಕೂಡ ನಿವೃತ್ತ ಮುಖ್ಯೋಪಾಧ್ಯಾಯರಾದ ಬಿ. ರಾಜೀವ ಶೆಟ್ಟಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಉಡುಪಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸ್ವಯಂ ಸೇವಕ ಮತ್ತು ಸಾಮಾಜಿಕ ಕಾರ್ಯಕರ್ತ ರಕ್ಷಿತ್ ಶೆಟ್ಟಿ, ಎಸ್. ಡಿ. ಎಂ.ಸಿ. ಸದಸ್ಯರಾದ ರಾಜೇಶ್ ಮತ್ತು ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು.
ಶಿಕ್ಷಕಿ ಉಷಾ ಕಾರ್ಯಕ್ರಮ ನಿರೂಪಿಸಿ. ಶಿಕ್ಷಕಿ ಚೈತ್ರ ಧನ್ಯವಾದ ಸಮರ್ಪಿಸಿದರು. ಎಲ್ಲ ಮಕ್ಕಳು, ಶಾಲೆಯ ಶಿಕ್ಷಕ ಶಿಕ್ಷೇತರ ಸಿಬ್ಬಂದಿ ವರ್ಗದವರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲಾಯಿತು.

















