ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತವಾಗಿ ಗುಪ್ತವಾಗಿ ಪ್ರತಿಭೆಯನ್ನು ಹೊರತರುವುದೇ ಶಿಕ್ಷಣದ ಮೂಲ ಉದ್ದೇಶ ಎಂದು ಗಂಗೊಳ್ಳಿ ಕ್ಲಸ್ಟರ್ ಸಿಆರ್ಪಿ ಮಹೇಶ್ ವಕ್ವಾಡಿ ಹೇಳಿದರು.
ಅವರು ಗಂಗೊಳ್ಳಿಯ ಜಿ.ಎಸ್.ವಿ.ಎಸ್. ಅಸೋಸಿಯೇಶನ್ ಪ್ರಾಯೋಜಿತ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವತಿಯಿಂದ ಕಾಲೇಜಿನ ನೆಕ್ಸೋರ ಎಸ್.ವಿ. ಸೈನ್ಸ್ ಕ್ಲಬ್ ಸಹಯೋಗದೊಂದಿಗೆ ಹೈಸ್ಕೂಲು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಗಂಗೊಳ್ಳಿ ಕ್ಲಸ್ಟರ್ ಮಟ್ಟದ ಇಂಟರ್ ಸ್ಕೂಲ್ ಸೈನ್ಸ್ ಕಾಂಪಿಟೇಶನ್ ’ಇಗ್ನೋವೇಟ್’ ನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ತಂತ್ರಜ್ಞಾನ, ಕೃತಕ ಬುದ್ಧಿಮತ್ತೆಯ ಈ ಯುಗದಲ್ಲಿ ತಮ್ಮ ಬದುಕನ್ನು ರೂಪಿಸಿಕೊಳ್ಳುವ ಯುವ ಪೀಳಿಗೆ ಉತ್ತಮ ರೀತಿಯಲ್ಲಿ ಆವಿಷ್ಕಾರದ ರೀತಿಯಲ್ಲಿ ಹೊಸ ಹೊಸ ಯೋಜನೆ, ಚಿಂತನೆ ಮಾಡಿಕೊಂಡಾಗ, ಸಂಶೋಧನಾ ಪ್ರವೃತ್ತಿ ಬಂದಾಗ, ಅವರಲ್ಲಿರುವ ಜ್ಞಾನ ಪ್ರಕಟವಾದಾಗ ಜಗತ್ತಿಗೆ ಹೊಸ ನಾವಿನ್ಯತೆಯನ್ನು, ಕಲ್ಪನೆಯನ್ನು ಕಟ್ಟಿಕೊಳ್ಳಬಹುದು. ಹೊಸ ಹೊಸ ಕಾರ್ಯಕ್ರಮದ ಮುಖೇನ ಆವಿಷ್ಕಾರದ ತಂತ್ರಜ್ಞಾನದ ಯೋಚನೆಯನ್ನು ಬೆಳೆಸಿಕೊಳ್ಳಬೇಕು. ಸಂಸ್ಕಾರಯುತ ವಿದ್ಯಾರ್ಥಿಗಳ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಶ್ರಮಿಸುತ್ತಿದೆ ಎಂದರು.
ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ. ಅಧ್ಯಕ್ಷತೆ ವಹಿಸಿದ್ದರು. ಜಿ.ಎಸ್.ವಿ.ಎಸ್. ಅಸೋಸಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ, ಶಾಲೆಯ ಸಂಚಾಲಕ ಎನ್.ಸದಾಶಿವ ನಾಯಕ್, ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಗೋಪಾಲ ದೇವಾಡಿಗ, ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್, ಸೈನ್ಸ್ ಕ್ಲಬ್ನ ವಿದ್ಯಾರ್ಥಿ ಪ್ರತಿನಿಧಿ ಪೂರ್ವಿಕಾ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಫಾತಿಮಾತುಲ್ ಶಹನಾಹ್ ಸ್ವಾಗತಿಸಿ, ತನಿಷಾ ಎ.ಪೂಜಾರಿ ಪ್ರಾರ್ಥಿಸಿದಳು. ಕಾರ್ಯಕ್ರಮದ ಸಂಯೋಜಕಿ, ಉಪನ್ಯಾಸಕಿ ಪವಿತ್ರಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿಯರಾದ ತ್ರಿಷಾ ಪೂಜಾರಿ ಅತಿಥಿಯನ್ನು ಪರಿಚಯಿಸಿ, ಮನೀಷಾ ಖಾರ್ವಿ ಕಾರ್ಯಕ್ರಮ ನಿರ್ವಹಿಸಿ, ಅಂಕುಶ್ ಖಾರ್ವಿ ವಂದಿಸಿದರು.
ಪೋಟೊ ಪೈಲ್ ನೇಮ್ : ೨೦ಜಿಎಎನ್೬-ಎನ್ಒವಿ (ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವತಿಯಿಂದ ಕಾಲೇಜಿನ ನೆಕ್ಸೋರ ಎಸ್. ವಿ. ಸೈನ್ಸ್ ಕ್ಲಬ್ ಸಹಯೋಗದೊಂದಿಗೆ ಹೈಸ್ಕೂಲು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಗಂಗೊಳ್ಳಿ ಕ್ಲಸ್ಟರ್ ಮಟ್ಟದ ಇಂಟರ್ ಸ್ಕೂಲ್ ಸೈನ್ಸ್ ಕಾಂಪಿಟೇಶನ್ ’ಇಗ್ನೋವೇಟ್’ ನ್ನು ಮಹೇಶ್ ವಕ್ವಾಡಿ ಉದ್ಘಾಟಿಸಿದರು)














