ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಅಂಚೆ ಕಚೇರಿಯ ಬ್ಯಾಂಕ್ ಆದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB), ಉಡುಪಿ ಶಾಖೆಯು ಜಿಲ್ಲೆಯ ಜನರಿಗೆ ಅಗತ್ಯ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಕಮಿಷನ್ ಆಧಾರಿತ ವೈಯಕ್ತಿಕ ಬಿಸಿನೆಸ್ ಕರೆಸ್ಪಾಂಡೆಂಟ್ಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಉಡುಪಿ ಶಾಖೆಯಲ್ಲಿ ಒಟ್ಟು 30 ಹುದ್ದೆಗಳು ಲಭ್ಯವಿದ್ದು, ಜಿಲ್ಲೆಯ ಆಸಕ್ತರು, ನಿವೃತ್ತ ನೌಕರರು, ಸಾಮಾನ್ಯ ಸೇವಾ ಕೇಂದ್ರಗಳ ನಿರ್ವಾಹಕರು ಅಥವಾ ಇತರ ವ್ಯಾಪಾರ ಸಂಸ್ಥೆಗಳು ಮತ್ತು ಉದ್ಯಮಗಳನ್ನು ನಡೆಸುತ್ತಿರುವ 18 ರಿಂದ 70 ವರ್ಷದೊಳಗಿನ, ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಇದು ಕಮಿಷನ್ ಆಧಾರಿತ ಕೆಲಸವಾಗಿದ್ದು, ನಿಗದಿತ ಮಾಸಿಕ ವೇತನ ಇರುವ ಉದ್ಯೋಗವಲ್ಲ. ಅಭ್ಯರ್ಥಿಗಳು ಒದಗಿಸುವ ಬ್ಯಾಂಕಿಂಗ್ ಸೇವೆಗಳು ಮತ್ತು ನಡೆಸುವ ವಹಿವಾಟುಗಳ ಆಧಾರದ ಮೇಲೆ ಕಮಿಷನ್ ಪಡೆಯಲಿದ್ದಾರೆ. ಅರ್ಜಿ ಸಲ್ಲಿಸಲು ಡಿಸೆಂಬರ್ 5 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್, ಉಡುಪಿ ಶಾಖೆ ದೂ.ಸಂಖ್ಯೆ: 0820-2522005, ಮೊ.ನಂ: 7899971688 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ನ ಉಡುಪಿ ಶಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.











