ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಕೊಸೆಸಾಂವ್ ಮಾತೆಯ ದೇವಾಲಯ ಗಂಗೊಳ್ಳಿ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಕರ್ನಾಟಕ, ಸಮುದಾಯ ವೈದ್ಯಕೀಯ ವಿಭಾಗ, ಕೆ.ಎಂ.ಸಿ. ಮಣಿಪಾಲ ಹಾಗೂ ಆರೋಗ್ಯ ಆಯೋಗ, ಸ್ತ್ರೀ ಆಯೋಗ ಮತ್ತು ಸ್ಪರ್ಶ ಸಂಪದ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕ್ಯಾನ್ಸರ್, ಕಣ್ಣಿನ ಹಾಗೂ ಆರೋಗ್ಯ ತಪಾಸಣಾ ಶಿಬಿರ ಗಂಗೊಳ್ಳಿಯ ಕೊಸೆಸಾಂವ್ ಮಾತೆಯ ಚರ್ಚ್ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಶಿಬಿರವನ್ನು ಸಂಪದದ ನಿರ್ದೇಶಕ, ಧರ್ಮಗುರು ರೀಕ್ಸನ್ ಮೊಂತೆರೊ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚರ್ಚಿನ ಧರ್ಮಗುರು ಥೋಮಸ್ ರೋಶನ್ ಡಿಸೋಜ ಶುಭ ಹಾರೈಸಿದರು. ಡಾ. ತನ್ಮಯ್, ಪಾಲನಾ ಮಂಡಳಿಯ ಕಾರ್ಯದರ್ಶಿ ಗ್ಲೋರಿಯಾ ಡಿಸೋಜ, 20 ಆಯೋಗಗಳ ಸಂಯೋಜಕಿ ಜಸಿಂತ ಡಿಸೋಜ, ಸಚೇತಕಿಯಾದ ಧರ್ಮಭಗಿನಿ ಗ್ರೇಸಿ ಲೋಬೊ, ಸ್ವಸಹಾಯ ಸಂಘದ ಮಾರ್ಗದರ್ಶಕಿ ಸಿಂತಿಯಾ ರೊಡ್ರಿಗಸ್, ಸ್ತ್ರೀ ಸಂಘಟನೆಯ ಅಧ್ಯಕ್ಷೆ ಅನಿತಾ ಫೆನಾಂಡಿಸ್ ಹಾಗೂ ಸ್ಟ್ಯಾನ್ಲಿ ಫೆನಾಂಡಿಸ್ ಉಪಸ್ಥಿತರಿದ್ದರು.
ಗ್ಲೋರಿಯಾ ಡಿಸೋಜ ಸ್ವಾಗತಿಸಿದರು. ಐರಿನ್ ನಜರೆತ್ ವಂದಿಸಿದರು. ರೀಟಾ ಡಾಯಸ್ ಕಾರ್ಯಕ್ರಮ ನಿರೂಪಿಸಿದರು. ಸುಮಾರು ೭೦ ಮಂದಿ ಶಿಬಿರದ ಸದುಪಯೋಗ ಪಡೆದುಕೊಂಡರು.











