ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಗರದ ಶ್ರೀ ಸಾಯಿ ಸೆಂಟರ್ನ ಮೊದಲ ಮಹಡಿಯಲ್ಲಿ ‘ರೋಷನ್ ಹೋಮಿಯೋಪತಿ’ ನೂತನ ಕ್ಲಿನಿಕ್ ಉದ್ಘಾಟನೆ ಹಾಗೂ ಆಶೀರ್ವಚನ ಸಮಾರಂಭ ಭಾನುವಾರ ಜರುಗಿತು. ಡಾ. ರೋಷನ್ ಪಾಯಸ್ ಅವರ ತಾಯಿ ಐ.ವಿ ಪಾಯಸ್ ಅವರು ನೂತನ ಕ್ಲಿನಿಕ್ನ್ನು ಉದ್ಘಾಟಿಸಿದರು.




ಕುಂದಾಪುರದ ಸಮೂಹ ಚರ್ಚುಗಳ ಧರ್ಮಗುರು ಫಾ. ಪೌಲ್ ರೇಗೊ ಅವರು ಆಶೀರ್ವಚನ ನೀಡಿ, “ಮನುಷ್ಯನ ಆರೋಗ್ಯದ ದೃಷ್ಟಿಯಿಂದ ಹೋಮಿಯೋಪತಿ ವೈದ್ಯಕೀಯ ಪದ್ಧತಿ ಅತೀ ಶ್ರೇಷ್ಠವಾದುದು. ಹೋಮಿಯೋಪತಿ ನಿಧಾನವಾದರೂ ಅತೀ ಪರಿಣಾಮಕಾರಿ ವೈದ್ಯಕೀಯ ಪದ್ಧತಿಯಾಗಿದ್ದು, ಡಾ. ನೇಹಾ ಪಾಯಸ್ ಮೂಲಕ ಕುಂದಾಪುರದ ಜನತೆಗೆ ಉತ್ತಮ ಸೇವೆ ದೊರೆಯಲಿದೆ. ಡಾ. ರೋಷನ್ ಕುಟುಂಬ ಹೋಮಿಯೋಪತಿ ಮೂಲಕ ಜನರ ಆರೋಗ್ಯ ಸುಧಾರಿಸುವಲ್ಲಿ ಯಶಸ್ವಿಯಾಗಲಿ” ಎಂದು ಶುಭ ಹಾರೈಸಿದರು.
ಈ ವೇಳೆ ಕುಂದಾಪುರ ಖ್ಯಾತ ವೈದ್ಯ ಡಾ. ಉತ್ತಮ್ ಕುಮಾರ್ ಶೆಟ್ಟಿ ಮಾತನಾಡಿ, ಹೋಮಿಯೋಪತಿ ವೈದ್ಯಕೀಯ ಪದ್ಧತಿ ಬೆಳೆದು ಬಂದ ದಾರಿ, ಕುಂದಾಪುರದಲ್ಲಿ ಆರಂಭದ ದಿನಗಳ ಅನುಭವಗಳು ಹಾಗೂ ವೈದ್ಯ ಮತ್ತು ರೋಗಿಗಳ ನಡುವಿನ ಆತ್ಮೀಯ ಸಂಬಂಧಗಳ ಅನುಭವ ಹಂಚಿಕೊಂಡರು.




ಈ ವೇಳೆ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರಿನ ಫಾದರ್ಮುಲ್ಲರ್ಸ್ ಹೋಮಿಯೋಪತಿ ಮೇಡಿಕಲ್ ಕಾಲೇಜಿನ ಮಾಜಿ ಆಡಳಿತಾಧಿಕಾರಿ ಫಾ. ಸ್ಟ್ಯಾನಿ ತೌರೊ, ಬೈಂದೂರು ಸೆಂಟ್ ಥಾಮಸ್ ಶಾಲೆಯ ಪ್ರಾಂಶುಪಾಲ ಫಾ. ಫಿಲಿಪ್ ನೆಲ್ಲಿವಿಲ, ಫಾ. ಡೆನಿಸ್ ಡಿಸೋಜಾ, ಹಾಗೂ ಗ್ರೇಶಿಯನ್ ಪಾಯಸ್ ಅವರು ನೂತನ ಕ್ಲಿನಿಕ್ಗೆ ಶುಭ ಹಾರೈಸಿದರು. ಕ್ಲಿನಿಕ್ ವಿನ್ಯಾಸಗೊಳಿಸಿದ ಇಂಜಿನಿಯರ್ ಶ್ರೀನಿವಾಸ ರಾವ್ ಅವರನ್ನು ಅಭಿನಂದಿಸಲಾಯಿತು.



ಡಾ. ನೇಹಾ ಮರಿಟಾ ಪಾಯಸ್ ಅವರ ತಂದೆ ಡಾ. ರೋಷನ್ ಪಾಯಸ್, ತಾಯಿ ಅನಿತಾ ಪಾಯಸ್, ಸಹೋದರ ನೋಯೆಲ್ ಪಾಯಸ್ ಸೇರಿದಂತೆ ಕುಟುಂಬಸ್ಥರು, ಬಂಧು-ಮಿತ್ರರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.
ಡಾ. ರೋಷನ್ ಪಾಯಸ್ ಸ್ವಾಗತಿಸಿದರು. ಡಾ. ನೇಹಾ ಮರಿಟಾ ಪಾಯಸ್ ವಂದಿಸಿದರು. ಪ್ರದೀಪ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.














