Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕೋ. ಮ. ಕಾರಂತ ಪ್ರಶಸ್ತಿಗೆ ’ನಾದೋಪಾಸಕ’ ಪಂಡಿತ್ ವಾಗೀಶ್ ಭಟ್ ಆಯ್ಕೆ
    ಊರ್ಮನೆ ಸಮಾಚಾರ

    ಕೋ. ಮ. ಕಾರಂತ ಪ್ರಶಸ್ತಿಗೆ ’ನಾದೋಪಾಸಕ’ ಪಂಡಿತ್ ವಾಗೀಶ್ ಭಟ್ ಆಯ್ಕೆ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ
    : ʼಕುಂದಪ್ರಭʼ ಸಂಸ್ಥೆಯ ಆಶ್ರಯದಲ್ಲಿ ನೀಡಲಾಗುತ್ತಿರುವ ಕೋ. ಮ. ಕಾರಂತ ಪ್ರಶಸ್ತಿಗೆ ಬೆಂಗಳೂರಿನ ಸರಸ್ವತೀ ಸಂಗೀತ ವಿದ್ಯಾಲಯ ರಿ. ಸಂಸ್ಥೆಯ ಕಾರ್ಯ ನಿರ್ದೇಶಕ, ಹಿಂದುಸ್ತಾನಿ ಶಾಸ್ತ್ರೀಯ ಮತ್ತು ಭಕ್ತಿ ಸಂಗೀತ ಗಾಯಕ, ’ನಾದೋಪಾಸಕ’ ಪಂಡಿತ್ ವಾಗೀಶ ಭಟ್ ಕುಂದಾಪುರ ಆಯ್ಕೆಯಾಗಿದ್ದಾರೆ.

    Call us

    Click Here

    ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ತಂತ್ರಿಗಳಾಗಿರುವ ಇವರು, ವಿದ್ವತ್ ಪೂರ್ಣ ಭಕ್ತಿ ಗಾಯನದಲ್ಲಿ ಪರಿಣಿತರು. ದೇಶದ ವಿವಿಧ ಕೇಂದ್ರಗಳಲ್ಲಿ ತಮ್ಮ ಗಾಯನ ಕಾರ್ಯಕ್ರಮ ನೀಡಿರುವ ಇವರು ವಿದೇಶಗಳಲ್ಲೂ ಭಾರತೀಯ ಕಲಾ ಕೇಂದ್ರಗಳ ಆಹ್ವಾನದ ಮೇರೆಗೆ ಗಾಯನ ಕಾರ್ಯಕ್ರಮ ನೀಡಿದ್ದಾರೆ. ಇಂಗ್ಲೆಂಡಿನಲ್ಲಿ ನಡೆದ ಅಂತಾರಾಷ್ಟ್ರೀಯ ಶಾಂತಿ ಸಮ್ಮೇಳನದಲ್ಲಿ ಹಾಡಿರುವ ಇವರಿಗೆ ’ನಾದೋಪಾಸಕ’ ಬಿರುದು ನೀಡಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಇವರ ಗಾಯನದ ಹಲವು ಧ್ವನಿ ಸುರಳಿಗಳು ಬಿಡುಗಡೆಗೊಂಡಿವೆ. ರಾಜ್ಯದ ಹಾಗೂ ದೇಶದ ಹಲವು ಸಂಸ್ಥೆಗಳಿಂದ ಇವರಿಗೆ ಪ್ರಶಸ್ತಿ ಲಭ್ಯವಾಗಿದೆ.

    ರಾಷ್ಟ್ರೀಕೃತ ಬ್ಯಾಂಕ್ ಉದ್ಯೋಗಿಯಾಗಿದ್ದ ಇವರು, ಸ್ವಯಂ ನಿವೃತ್ತಿ ಹೊಂದಿ, ಸಂಗೀತದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡವರು. 1987 ರಿಂದ ಬಾವೆ ಮನೆತನದ ನಾಮಾಂಕಿತ ಸರಸ್ವತೀ ಸಂಗೀತ ವಿದ್ಯಾಲಯ ರಿ. ಜವಾಬ್ದಾರಿ ವಹಿಸಿಕೊಂಡು ತಮ್ಮ ಕಲಾ ಸೇವೆ ಮುಂದುವರಿಸಿದ್ದಾರೆ.

    ಪಂಡಿತ್ ವಾಗೀಶ್ ಭಟ್ ಅವರು, ತಂದೆ ವೇದಮೂರ್ತಿ ಗಣಪತಿ ಶರ್ಮಾ ಅವರಿಂದ ವೇದ ಮತ್ತು ಸಂಸ್ಕೃತ ಶಿಕ್ಷಣ ಪಡೆದವರು. ಸಂಗೀತದಲ್ಲಿ ಆಸಕ್ತಿ ಹೊಂದಿ ಕುಂದಾಪುರದ ಪ್ರೊಫೆಸರ್ ಗೋವರ್ಧನ ಶ್ಯಾನುಭಾಗ್ ಅವರಿಂದ ಹಾರ್ಮೋನಿಯಂ ಹಾಗೂ ಗಾಯನದಲ್ಲಿ ಶಿಕ್ಷಣ ಪಡೆದುಕೊಂಡರು. ನಂತರ ಬೆಂಗಳೂರಿನ ಉಭಯಗಾನ ವಿದುಷಿ, ಗುರು ಶ್ಯಾಮಲಾ ಜಿ. ಭಾವೆ ಅವರಲ್ಲಿ ಸಮಗ್ರ ತಾಲೀಮು ಪಡೆದುಕೊಂಡರು. ತಬಲಾ ವಾದನದಲ್ಲೂ ಪಂಡಿತ್ ಗೌರಂಗ ಕೋಡಿಕಲ್ ಹಾಗೂ ಪಂಡಿತ್ ಗುರುನಂದನ್ ಕಲ್ಯಾಣಪುರ್ ಅವರಿಂದ ತರಬೇತಿ ಪಡೆದರು. ಪ್ರತಿಭಾವಂತರಾದ ಇವರು ಸಂಸ್ಕೃತ, ಕಾನೂನು, ವಾಣಿಜ್ಯ, ಬ್ಯಾಂಕಿಂಗ್ ಪರೀಕ್ಷೆಗಳಲ್ಲೂ ಸಾಧನೆ ಮಾಡಿದ ಪ್ರತಿಭಾವಂತಾಗಿದ್ದಾರೆ.

    Click here

    Click here

    Call us

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ

    23/11/2026

    ಮಕ್ಕಳ ಆತ್ಮವಿಶ್ವಾಸ, ಸೃಜನಶೀಲತೆಗೆ ವೇದಿಕೆಯಾದ ‘ರಾಕೆಟ್ಸ್ ಆನ್ ದಿ ರನ್‌ವೇ’

    23/11/2026

    ಪ್ರಜಾ ಸೇವಾ ಕಾರ್ಯಕ್ರಮ ಆರಂಭಗೊಂಡು 2 ತಿಂಗಳಾದರೂ ಸಮಸ್ಯೆ ಬಗೆಹರಿದಿಲ್ಲ: ಶಾಸಕ ಕಿರಣ್ ಕೊಡ್ಗಿ ಅಸಮಾಧಾನ

    23/11/2026
    Leave A Reply Cancel Reply

    thirteen − twelve =

    Call us

    Click Here

    Call us

    Call us

    Call us
    Highest Viewed Recently
    • ಕೋ. ಮ. ಕಾರಂತ ಪ್ರಶಸ್ತಿಗೆ ’ನಾದೋಪಾಸಕ’ ಪಂಡಿತ್ ವಾಗೀಶ್ ಭಟ್ ಆಯ್ಕೆ
    • ಬೆಂಗಳೂರಿನಲ್ಲಿ ಆಳ್ವಾಸ್‌ ಪತ್ರಿಕೋದ್ಯಮದ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ
    • ಕುಂದಾಪುರ: ಕಾರಿಗೆ ಬೈಕ್‌ ಡಿಕ್ಕಿಯಾಗಿ ಹೊಸನಗರ ಹುಂಚದ ಯುವಕನ ಸಾವು
    • ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ
    • ಮಕ್ಕಳ ಆತ್ಮವಿಶ್ವಾಸ, ಸೃಜನಶೀಲತೆಗೆ ವೇದಿಕೆಯಾದ ‘ರಾಕೆಟ್ಸ್ ಆನ್ ದಿ ರನ್‌ವೇ’

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.