ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಎಐಸಿಎಸ್ ಅಂತರ್ ಶಾಲಾ ಮಟ್ಟದ ಹ್ಯಾಂಡ್ ಬಾಲ್ ಟೂರ್ನಮೆಂಟ್ ’ವಿಂಗ್ಸ್ ಟು ವಿನ್’ ಹೆಸರಲ್ಲಿ ನಡೆಯಿತು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರು ಹಾಗೂ ಎಐಸಿಎಸ್‌ನ ಉಡುಪಿ ಜಿಲ್ಲೆಯ ಕ್ರೀಡಾ ಕಾರ್ಯದರ್ಶಿಗಳಾದ ರೋಲ್ವಿನ್ ಜೊಯ್ ಅರಾನ್ ಅವರು ಮಾತನಾಡಿ, ಆಟವು ಮಕ್ಕಳನ್ನು ಲವಲವಿಕೆಯಿಂದಿರುವಂತೆ ಮಾಡುತ್ತದೆ. ಆಟದಲ್ಲಿ ಗೆಲ್ಲಲು ಎಲ್ಲರೂ ಶ್ರಮಿಸಬೇಕು. ಬೇರೆಯವರು ಗೆದ್ದರೆ ನೋವು ಪಡಬಾರದು. ಬೇರೆ ಬೇರೆ ಶಾಲೆಗಳಾದರೂ ನಾವೆಲ್ಲ ಎಐಸಿಎಸ್‌ನ ವಿದ್ಯಾರ್ಥಿಗಳು. ನಮ್ಮವರ ಸಾಧನೆ ನೋಡಿ ಹೆಮ್ಮೆ ಪಡಬೇಕು ಎಂದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಮತ್ತು ಶಾಲಾ ಪ್ರಾಂಶುಪಾಲರೂ ಆದ ಶರಣ ಕುಮಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸತತ ಪರಿಶ್ರಮದಿಂದಷ್ಟೇ ಸ್ಪರ್ಧೆಯಲ್ಲಿ ಗೆಲುವು ಸಾಧ್ಯ. ಸ್ವಾಭಿಮಾನದ ಬೆಳವಣಿಗೆಗೆ ಇದು ಪೂರಕ. ಸೋಲು ಕೂಡ ಜೀವನದ ಪಾಠವನ್ನು ನೀಡುತ್ತದೆ. ವಿದ್ಯಾರ್ಥಿಗಳು ಆ ದಿಸೆಯಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಅತ್ಯವಶ್ಯ ಕಾರ್ಯವಾಗಿದೆ ಎಂದರು.
ಸಂಜೆ ನಡೆದ ಸಮಾರೋಪದಲ್ಲಿ ನಿತಿನ್ ಪೂಜಾರಿ ಅವರು ಗುರಿಯತ್ತ ಸಾಗುವಾಗ ಏಳು ಬೀಳುಗಳು ಇದ್ದೇ ಇರುತ್ತವೆ. ಸೋಲು ಗೆಲುವಿಗೆ ಸೋಪಾನವೆಂದು ಅರಿತು ಹೆಜ್ಜೆಯನ್ನು ಇರಿಸಬೇಕು ಎನ್ನುತ್ತಾ ವಿಜೇತರಿಗೆ ಪದಕಗಳನ್ನು ಹಸ್ತಾಂತರಿಸಿದರು.
14 ವರ್ಷಕ್ಕಿಂತ ಕಡಿಮೆ ವಯೋಮಿತಿಯ ಹುಡುಗರ ಸ್ಪರ್ಧೆಯಲ್ಲಿ ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಪೆರಂಪಳ್ಳಿ ಪ್ರಥಮ ಸ್ಥಾನವನ್ನು, ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ ದ್ವಿತೀಯ ಸ್ಥಾನವನ್ನು, ಸೈಂಟ್ ಥೋಮಸ್ ಸೆಂಟ್ರಲ್ ಸ್ಕೂಲ್ ಬೈಂದೂರು ತೃತೀಯ ಸ್ಥಾನವನ್ನು ಪಡೆದುಕೊಂಡವು. ಬೆಸ್ಟ್ ಡಿಪೆಂಡರ್ ಸ್ಥಾನವನ್ನು ಲಿಟ್ಲ ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರದ ಕುಮಾರ ತೇಜಸ್, ಬೆಸ್ಟ್ ಶೂಟರ್ ಸ್ಥಾನವನ್ನು ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಪೆರಂಪಳ್ಳಿಯ ಕುಮಾರ ಯಾಸ್ಟನ್, ಬೆಸ್ಟ್ ಆಲ್ ರೌಂಡರ್ ಸ್ಥಾನವನ್ನು ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರದ ರುಶಿಲ್, ಬೆಸ್ಟ್ ಗೋಲ್ ಕೀಪರ್ ಅವಾರ್ಡ್‌ನ್ನು ಟ್ರಿನಿಟಿ ಸೆಂಟರ್ ಸ್ಕೂಲ್ ಪೆರಂಪಳ್ಳಿಯ ಅನ್ವಿತ್ ಪಡೆದುಕೊಂಡರು.
14 ವರ್ಷಕ್ಕಿಂತ ಕಡಿಮೆ ವಯೋಮಿತಿಯ ಹುಡುಗಿಯರ ಸ್ಪರ್ಧೆಯಲ್ಲಿ ಎಸ್ ಎಮ್ ಎಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಬ್ರಹ್ಮಾವರ ಪ್ರಥಮ ಸ್ಥಾನವನ್ನು, ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಪೆರಂಪಳ್ಳಿ ದ್ವಿತೀಯ ಸ್ಥಾನವನ್ನು, ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಹಟ್ಟಿಅಂಗಡಿ ತೃತೀಯ ಸ್ಥಾನವನ್ನು ಪಡೆದುಕೊಂಡವು. ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಆರಾಧ್ಯಾ ಬೆಸ್ಟ್ ಡಿಪೆಂಡರ್ ಸ್ಥಾನವನ್ನು, ಎಸ್.ಎಮ್. ಎಸ್. ಇಂಗ್ಲೀಷ್ ಮೀಡಿಯಂ ಸ್ಕೂಲ್ ಬ್ರಹ್ಮಾವರದ ನೆರೋಲಿ ಬೆಸ್ಟ್ ಶೂಟರ್ ಸ್ಥಾನವನ್ನು, ಬೆಸ್ಟ್ ಆಲ್ ರೌಂಡರ್ ಸ್ಥಾನವನ್ನು ಟ್ರಿನಿಟಿ ಸೆಂಟ್ರಲ್ ಸ್ಕೂಲ್, ಪೆರಂಪಳ್ಳಿಯ ಇಕ್ಷಾ, ಬೆಸ್ಟ್ ಗೋಲ್ ಕೀಪರ್ ಅವಾರ್ಡ್‌ನ್ನು ಎಸ್ ಎಮ್ ಎಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಬ್ರಹ್ಮಾವರದ ಮಾನ್ಯಾ ಪಡೆದುಕೊಂಡರು.
17 ವರ್ಷಕ್ಕಿಂತ ಕಡಿಮೆ ವಯೋಮಿತಿಯ ಹುಡುಗರ ಸ್ಪರ್ಧೆಯಲ್ಲಿ ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಪೆರಂಪಳ್ಳಿ ಪ್ರಥಮ ಸ್ಥಾನವನ್ನು, ಶ್ರೀ ಸಿದ್ಧಿವಿನಾಯಕ ವಸತಿಶಾಲೆ ದ್ವಿತೀಯ ಸ್ಥಾನವನ್ನು, ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ ತೃತೀಯ ಸ್ಥಾನವನ್ನು ಪಡೆದುಕೊಂಡವು. ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರದ ದಿಶಾನ್ ಬೆಸ್ಟ್ ಡಿಪೆಂಡರ್ ಸ್ಥಾನವನ್ನು, ಶ್ರೀ ಸಿದ್ಧಿವಿನಾಯಕ ವಸತಿಶಾಲೆಯ ಪ್ರಕಾಶ್ ಬೆಸ್ಟ್ ಶೂಟರ್ ಸ್ಥಾನವನ್ನು, ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಪೆರಂಪಳ್ಳಿಯ ಕುಮಾರ ಶಾಜ್ ಆಲ್-ರೌಂಡರ್ ಸ್ಥಾನವನ್ನು, ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಪೆರಂಪಳ್ಳಿಯ ರಫ಼ಾನ್ ಬೆಸ್ಟ್ ಗೋಲ್ ಕೀಪರ್ ಅವಾರ್ಡ್‌ನ್ನು ಪಡೆದುಕೊಂಡರು.
17 ವರ್ಷಕ್ಕಿಂತ ಕಡಿಮೆ ವಯೋಮಿತಿಯ ಹುಡುಗಿಯರ ಸ್ಪರ್ಧೆಯಲ್ಲಿ ಎಸ್ ಎಮ್ ಎಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಬ್ರಹ್ಮಾವರ ಪ್ರಥಮ ಸ್ಥಾನವನ್ನು, ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಪೆರಂಪಳ್ಳಿ ದ್ವಿತೀಯ ಸ್ಥಾನವನ್ನು, ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ ತೃತೀಯ ಸ್ಥಾನವನ್ನು ಪಡೆದುಕೊಂಡವು. ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರದ ದಿಶಾನಿ ಬೆಸ್ಟ್ ಡಿಪೆಂಡರ್ ಸ್ಥಾನವನ್ನು, ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಪೆರಂಪಳ್ಳಿಯ ಧರಣಿ ಬೆಸ್ಟ್ ಶೂಟರ್ ಅವಾರ್ಡನ್ನು, ಎಸ್ ಎಮ್ ಎಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್, ಬ್ರಹ್ಮಾವರದ ಕುಮಾರಿ ತೃಪ್ತಿ ಬೆಸ್ಟ್ ಆಲ್-ರೌಂಡರ್ ಸ್ಥಾನವನ್ನು, ಎಸ್ ಎಮ್ ಎಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್, ಬ್ರಹ್ಮಾವರದ ಕುಮಾರಿ ಪ್ರತೀಕ್ಷಾ ಬೆಸ್ಟ್ ಗೋಲ್ ಕೀಪರ್ ಅವಾರ್ಡ್‌ನ್ನು ಪಡೆದುಕೊಂಡರು.
14 ವರ್ಷಕ್ಕಿಂತ ಕಡಿಮೆ ವಯೋಮಿತಿಯಲ್ಲಿ ಮತ್ತು 17 ವರ್ಷಕ್ಕಿಂತ ಕಡಿಮೆ ವಯೋಮಿತಿಯ ಸ್ಪರ್ಧೆಗಳಲ್ಲಿ ಟ್ರಿನಿಟಿ ಸೆಂಟ್ರಲ್ ಸ್ಕೂಲ್, ಪೆರಂಪಳ್ಳಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಈ ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಸಹಶಿಕ್ಷಕರಾದ ಗಣೇಶ ದೇವಾಡಿಗ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಸಹಶಿಕ್ಷಕರಾದ ಸಚಿನ್ ವಿಜೇತರ ಪಟ್ಟಿಯನ್ನು ವಾಚಿಸಿದರು. ವಿದ್ಯಾರ್ಥಿಗಳಾದ ಯಶ್ ಎಮ್.ಸಿ ಮತ್ತು ಪ್ರಸನ್ನ ಕಾರ್ಯಕ್ರಮವನ್ನು ನಿರೂಪಿಸಿದರು. ಸಾನ್ವೀ ಕೆ. ಎಸ್ ಸ್ವಾಗತವನ್ನು ನೆರವೇರಿಸಿದರೆ ವಿದ್ಯಾರ್ಥಿ ವಿರಾಜ್ ಧನ್ಯವಾದ ಸಮರ್ಪಿಸಿದರು.
ಈ ಸಮಯದಲ್ಲಿ ಬಹಳಷ್ಟು ಶಾಲೆಗಳಿಂದ ಬಂದ ಅಧ್ಯಾಪಕರು, ಶಾಲಾ ಉಪಪ್ರಾಂಶುಪಾಲರಾದ ರಾಮ ದೇವಾಡಿಗ, ಸ್ಪರ್ಧಾರ್ಥಿಗಳು, ಶಾಲಾ ಅಧ್ಯಾಪಕವೃಂದ, ಶಿಕ್ಷಕೇತರವೃಂದದವರೂ ಉಪಸ್ಥಿತರಿದ್ದರು.














