ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಡಲತೀರದ ಭಾರ್ಗವ, ಜ್ಞಾನಪೀಠ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತರ ಹೆಸರಿನಲ್ಲಿ ನೀಡಲಾಗುವ ಪ್ರತಿಷ್ಠಿತ ‘ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರʼಕ್ಕೆ ಬಿಜೂರಿನ ಉದಯೋನ್ಮುಖ ಪ್ರತಿಭೆ ನಿಹಾರಿಕಾ ಆರ್. ದೇವಾಡಿಗ ಆಯ್ಕೆಯಾಗಿದ್ದಾಳೆ.
ಈಕೆ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ರವಿಕಲಾ ದೇವಾಡಿಗ ಹಾಗೂ ಬೈಂದೂರು ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರವೀಂದ್ರ ದೇವಾಡಿಗ ದಂಪತಿಯ ಸುಪುತ್ರಿ.











