Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಡಿ.27ರಂದು ಶ್ರೀ ಶೃಂಗೇರಿ ಶಂಕರ ಮಠ ಕುಂಭಕಾಶಿ ವತಿಯಿಂದ ತಾಲೂಕು ಮಟ್ಟದ ಸ್ಪರ್ಧೆ
    ಊರ್ಮನೆ ಸಮಾಚಾರ

    ಡಿ.27ರಂದು ಶ್ರೀ ಶೃಂಗೇರಿ ಶಂಕರ ಮಠ ಕುಂಭಕಾಶಿ ವತಿಯಿಂದ ತಾಲೂಕು ಮಟ್ಟದ ಸ್ಪರ್ಧೆ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಉಡುಪಿಯ ಎಂ.ಜಿ.ಎಂ. ಕ್ರೀಡಾಂಗಣದಲ್ಲಿ ಡಿ.28, 29 ಮತ್ತು 30ರಂದು ನಡೆಯಲಿರುವ ‘ಶ್ರೀ ಶಂಕರ ವಿಜಯೋತ್ಸವ 2026, ಪ್ರಯುಕ್ತ ಕುಂದಾಪುರ ತಾಲೂಕು ವಲಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ನಮ್ಮ ಸಂಸ್ಕೃತಿ, ಆಚಾರ-ವಿಚಾರ ಹಾಗೂ ಸನಾತನ ಧರ್ಮವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸದುದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    Call us

    Click Here

    ಶ್ರೀ ಶಂಕರಾಚಾರ್ಯ ಮಹಾಸ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಂ ಶೃಂಗೇರಿ. ಪ್ರಸ್ತುತ 36ನೇ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಹಾಗೂ ತತ್ಕರಕಮಲ ಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರ ಕೃಪಾಶೀರ್ವಾದದೊಂದಿಗೆ, ಶ್ರೀ ಶೃಂಗೇರಿ ಶಂಕರ ಮಠ ಕುಂಭಕಾಶಿ ಆನೆಗುಡ್ಡೆಯ ವತಿಯಿಂದ ನವೆಂಬರ್ 27ರಂದು ಬೆಳಿಗ್ಗೆ 9.30ಕ್ಕೆ ಕುಂಭಕಾಶಿಯ ಶ್ರೀ ಶಂಕರ ಮಠದ ಶ್ರೀ ಭಾರತೀ ತೀರ್ಥ ಸಭಾಭವನದಲ್ಲಿ ಈ ಸ್ಪರ್ಧೆಗಳು ಜರುಗಲಿವೆ.

     ವಿಭಾಗವಾರು ಸ್ಪರ್ಧೆಗಳ ವಿವರ:

     * ಹಿರಿಯ ಪ್ರಾಥಮಿಕ ಶಾಲಾ ವಿಭಾಗ (5, 6, 7ನೇ ತರಗತಿ):

       * ಸ್ತೋತ್ರ ಗಾಯನ: ಭಜಗೋವಿಂದಂ (8 ಚರಣ)

    Click here

    Click here

    Call us

       * ಭಾಷಣ (3+1 ನಿಮಿಷ): ಶ್ರೀ ಶಂಕರರ ಜೀವನದ ಘಟನೆಗಳು

     * ಪ್ರೌಢ ಶಾಲಾ ವಿಭಾಗ (8, 9, 10ನೇ ತರಗತಿ):

       * ಸ್ತೋತ್ರ ಗಾಯನ: ತೋಟಕಾಷ್ಟಕಂ (8 ಚರಣ)

       * ಭಾಷಣ (3+1 ನಿಮಿಷ): ಶ್ರೀ ಶಂಕರರ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣೆಗಳು

     * ಪದವಿ ಪೂರ್ವ ಕಾಲೇಜು ವಿಭಾಗ (11, 12ನೇ ತರಗತಿ):

       * ಸ್ತೋತ್ರ ಗಾಯನ: ಭವಾನಿ ಅಷ್ಟಕಂ (8 ಚರಣ)

       * ಭಾಷಣ (3+1 ನಿಮಿಷ): ಭಾರತದ ಪುನರುತ್ಥಾನದಲ್ಲಿ ಶ್ರೀ ಶಂಕರರ ಕೊಡುಗೆ

     * ರಸಪ್ರಶ್ನೆ (ಎಲ್ಲಾ ವಿಭಾಗದವರಿಗೆ): ಶ್ರೀ ಶಂಕರರ ಜೀವನ, ತತ್ತ್ವಶಾಸ್ತ್ರ ಮತ್ತು ಸನಾತನ ಧರ್ಮರಕ್ಷಣೆಯ ಕುರಿತು ಲಿಖಿತ ಸ್ಪರ್ಧೆ (40+20 ನಿಮಿಷ) ನಡೆಯಲಿದೆ.

     ಬಹುಮಾನ ಹಾಗೂ ಸೌಲಭ್ಯಗಳು:
    ತಾಲೂಕು ಮಟ್ಟದ ವಿಜೇತರಿಗೆ ಪ್ರಥಮ ₹4,000, ದ್ವಿತೀಯ ₹3,000, ತೃತೀಯ ₹2,000 ಹಾಗೂ ಸಮಾಧಾನಕರ ಬಹುಮಾನ ನೀಡಲಾಗುವುದು. ಇಲ್ಲಿ ವಿಜೇತರಾದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಲಿದ್ದು, ಜಿಲ್ಲಾ ಮಟ್ಟದಲ್ಲಿ ಪ್ರಥಮ ₹40,000, ದ್ವಿತೀಯ ₹30,000, ತೃತೀಯ ₹20,000 ಹಾಗೂ ಸಮಾಧಾನಕರ ಬಹುಮಾನ ಪಡೆಯಲಿದ್ದಾರೆ. ಭಾಗವಹಿಸುವಎಲ್ಲಾ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಮಾಣಪತ್ರ ನೀಡಲಾಗುವುದು. ಸಂಯೋಜಕರು ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.

    ನೋಂದಣಿ ಮತ್ತು ಸಂಪರ್ಕ:
    ಆಕರ ಪುಸ್ತಕಗಳ ಮಾಹಿತಿ ಹಾಗೂ ಹೆಸರು ನೋಂದಣಿಗಾಗಿ ಶ್ರೀ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿಗಳಾದ ವೇ.ಮೂ. ಲೋಕೇಶ ಅಡಿಗ ಹಾಗೂ ಬಡಾಕೆರೆ ನಾಗ ಪಾತ್ರಿಗಳು (8277397605, 9743155808) ಅಥವಾ ಶಾಂಕರ ತತ್ತ್ವ ಪ್ರಸಾರಕರಾದ ಡಾ. ವೆಂಕಟರಾಮ್ ಭಟ್ ನೆಂಪು (9900199644) ಅವರನ್ನು ಸಂಪರ್ಕಿಸಬಹುದು.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ವಿದ್ಯಾರ್ಥಿಗಳು ವಲಯಮಟ್ಟಕ್ಕೆ ಆಯ್ಕೆ

    25/11/2026

    ಕುಂಭಾಸಿ: ಮಿನಿ ಬಸ್ಸಿಗೆ ಟ್ಯಾಂಕರ್ ಡಿಕ್ಕಿ – 30ಕ್ಕೂ ಅಧಿಕ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು, ಸಣ್ಣಪುಟ್ಟ ಗಾಯ

    25/11/2026

    ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್: ಎರಡು ವಿಭಾಗದಲ್ಲಿ ಮೊಹಮ್ಮದ್ ಅಝಾನ್‌ ಪ್ರಥಮ

    25/11/2026
    Leave A Reply Cancel Reply

    1 × five =

    Call us

    Click Here

    Call us

    Call us

    Call us
    Highest Viewed Recently
    • ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ವಿದ್ಯಾರ್ಥಿಗಳು ವಲಯಮಟ್ಟಕ್ಕೆ ಆಯ್ಕೆ
    • ಕುಂಭಾಸಿ: ಮಿನಿ ಬಸ್ಸಿಗೆ ಟ್ಯಾಂಕರ್ ಡಿಕ್ಕಿ – 30ಕ್ಕೂ ಅಧಿಕ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು, ಸಣ್ಣಪುಟ್ಟ ಗಾಯ
    • ಡಿ.27ರಂದು ಶ್ರೀ ಶೃಂಗೇರಿ ಶಂಕರ ಮಠ ಕುಂಭಕಾಶಿ ವತಿಯಿಂದ ತಾಲೂಕು ಮಟ್ಟದ ಸ್ಪರ್ಧೆ
    • ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್: ಎರಡು ವಿಭಾಗದಲ್ಲಿ ಮೊಹಮ್ಮದ್ ಅಝಾನ್‌ ಪ್ರಥಮ
    • ಗಂಗೊಳ್ಳಿ ಗ್ರಾಪಂಗೆ ಬಾಕಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಜಿಪಂ ಸಿಇಒ ಅವರಿಗೆ ಮನವಿ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.