ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಅಜ್ಜರಕಾಡಿನಲ್ಲಿ ನಡೆದ 9ನೇ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ಶಿಪ್-2026ರ ಹಟ್ಟಿಹಂಗಡಿಯ ಶ್ರೀ ಸಿದ್ಧಿವಿನಾಯಕ ಶಾಲೆಯ 2ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ಅಝಾನ್ ಎರಡು ಪ್ರಥಮ ಸ್ಥಾನಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
7 ವರ್ಷದೊಳಗಿನ ವಯೋಮಾನದ ವಿಭಾಗದಲ್ಲಿ ಸ್ಪರ್ಧಿಸಿದ ಅಝಾನ್, ಕುಮಿಟೆ (Kumite) ಹಾಗೂ ಕಟಾ (Kata) ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿ ದ್ವಿಗುಣ ಯಶಸ್ಸು ಸಾಧಿಸಿದ್ದಾರೆ
ಎಸ್.ಎಸ್. ಹನೀಫ್ ಗುಲ್ವಾಡಿ ಅವರ ಪುತ್ರನಾಗಿರುವ ಮೊಹಮ್ಮದ್ ಅಝಾನ್ ಅವರ ಈ ಸಾಧನೆಗೆ ಪೋಷಕರು ಹಾಗೂ ಶಾಲೆಯ ಅಧ್ಯಾಪಕ ವೃಂದ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.











