ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂದು ಜನರಿಗೆ ಹೇಳುವ ಮೊದಲು ನಾವು ಹೆಲ್ಮೆಟ್ ಧರಿಸಿ ತಿರುಗಾಡಬೇಕು ಎಂಬುದನ್ನು ಅರಿತ ಕುಂದಾಪುರ ಪೊಲೀಸರು ಇಂದು ನಗರದಲ್ಲಿ ಜನಜಾಗೃತಿ ಜಾಥಾ ಆಯೋಜಿಸಿದ್ದರು. ದ್ವಿಚಕ್ರ ವಾಹನ ಹೊಂದಿರುವ ಪೊಲೀಸ್ ಸಿಬ್ಬಂಧಿಗಳು ಹೆಲ್ಮೆಟ್ ಧರಿಸಿ ಅದರ ಅಗತ್ಯದ ಕುರಿತು ಅರಿವು ಮೂಡಿಸಿದರು.
ಪೊಲೀಸ್ ಇಲಾಖೆಯಿಂದ ಕುಂದಾಪುರ ಶಾಸ್ತ್ರೀವೃತ್ತದ ಬಳಿ ಹೆಲ್ಮೆಟ್ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡ ಬೈಕ್ ಜಾಥಾಕ್ಕೆ ಚಾಲನೆ ನೀಡಿದ ಕುಂದಾಪುರ ಡಿಎಸ್ಪಿ ಮಂಜುನಾಥ ಶೆಟ್ಟಿ ಮಾತನಾಡಿ ರಾಜ್ಯ ಸರಕಾರ ಸುಪ್ರಿಂಕೋರ್ಟ್ ತೀರ್ಪಿನಂತೆ ಹೆಲ್ಮೆಟ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿರುವುದರಿಂದ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕಿದೆ. ಬೈಕ್ ಸವಾರ ಹಾಗೂ ಹಿಂಬದಿಯ ಸವಾರರು ಹೆಲ್ಮೆಟ್ ಇಲ್ಲದೇ ಸಂಚರಿಸುವಂತಿಲ್ಲ. ಕಡ್ಡಾಯವಿರುವ ಕಾರಣಕ್ಕೆ ಕಳಪೆ ಗುಣಮಟ್ಟದ ಹೆಲ್ಮಟ್ ಧರಿಸಿ ಪ್ರಾಣಕ್ಕೆ ಕುತ್ತು ತಂದುಕೊಳ್ಳಬೇಡಿ. ಐಎಸ್‌ಐ ಮಾರ್ಕ್ ಇರುವ ಹೆಲ್ಮೆಟ್ ಧರಿಸಿ ಜಾಗೃತರಾಗಿ ಸಂಚರಿಸಿ ಎಂದರು. ಕುಂದಾಪುರ ವೃತ್ತ ದಿವಾಕರ್, ಎಸೈ ನಾಸಿರ್ ಹುಸೇನ್, ಟ್ರಾಫಿಕ್ ಎಸೈಗಳಾದ ಜಯ ಕೆ., ದೇವೆಂದ್ರ ಉಪಸ್ಥಿತರಿದ್ದರು. ಇಲಾಖೆಯ ಸಿಬ್ಬಂಧಿಗಳು ಶಾಸ್ತ್ರೀ ವೃತ್ತದಿಂದ ನಗರದ ಮುಖ್ಯ ರಸ್ತೆಯಲ್ಲಿ ಬೈಕ್ ಜಾಥಾ ನಡೆಸಿ ಜಾಗೃತಿ ಮೂಡಿಸಿದರು.
ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂದು ಜನರಿಗೆ ಹೇಳುವ ಮೊದಲು ನಾವು ಹೆಲ್ಮೆಟ್ ಧರಿಸಿ ತಿರುಗಾಡಬೇಕು ಎಂಬುದನ್ನು ಅರಿತ ಕುಂದಾಪುರ ಪೊಲೀಸರು ಇಂದು ನಗರದಲ್ಲಿ ಜನಜಾಗೃತಿ ಜಾಥಾ ಆಯೋಜಿಸಿದ್ದರು. ದ್ವಿಚಕ್ರ ವಾಹನ ಹೊಂದಿರುವ ಪೊಲೀಸ್ ಸಿಬ್ಬಂಧಿಗಳು ಹೆಲ್ಮೆಟ್ ಧರಿಸಿ ಅದರ ಅಗತ್ಯದ ಕುರಿತು ಅರಿವು ಮೂಡಿಸಿದರು.
ಪೊಲೀಸ್ ಇಲಾಖೆಯಿಂದ ಕುಂದಾಪುರ ಶಾಸ್ತ್ರೀವೃತ್ತದ ಬಳಿ ಹೆಲ್ಮೆಟ್ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡ ಬೈಕ್ ಜಾಥಾಕ್ಕೆ ಚಾಲನೆ ನೀಡಿದ ಕುಂದಾಪುರ ಡಿಎಸ್ಪಿ ಮಂಜುನಾಥ ಶೆಟ್ಟಿ ಮಾತನಾಡಿ ರಾಜ್ಯ ಸರಕಾರ ಹೈಕೋರ್ಟ್ ತೀರ್ಪಿನಂತೆ ಹೆಲ್ಮೆಟ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿರುವುದರಿಂದ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕಿದೆ. ಬೈಕ್ ಸವಾರ ಹಾಗೂ ಹಿಂಬದಿಯ ಸವಾರರು ಹೆಲ್ಮೆಟ್ ಇಲ್ಲದೇ ಸಂಚರಿಸುವಂತಿಲ್ಲ. ಕಡ್ಡಾಯವಿರುವ ಕಾರಣಕ್ಕೆ ಕಳಪೆ ಗುಣಮಟ್ಟದ ಹೆಲ್ಮಟ್ ಧರಿಸಿ ಪ್ರಾಣಕ್ಕೆ ಕುತ್ತು ತಂದುಕೊಳ್ಳಬೇಡಿ. ಐಎಸ್‌ಐ ಮಾರ್ಕ್ ಇರುವ ಹೆಲ್ಮೆಟ್ ಧರಿಸಿ ಜಾಗೃತರಾಗಿ ಸಂಚರಿಸಿ ಎಂದರು. ಕುಂದಾಪುರ ವೃತ್ತ ದಿವಾಕರ್, ಎಸೈ ನಾಸಿರ್ ಹುಸೇನ್, ಟ್ರಾಫಿಕ್ ಎಸೈಗಳಾದ ಜಯ ಕೆ., ದೇವೆಂದ್ರ ಉಪಸ್ಥಿತರಿದ್ದರು. ಇಲಾಖೆಯ ಸಿಬ್ಬಂಧಿಗಳು ಶಾಸ್ತ್ರೀ ವೃತ್ತದಿಂದ ನಗರದ ಮುಖ್ಯ ರಸ್ತೆಯಲ್ಲಿ ಬೈಕ್ ಜಾಥಾ ನಡೆಸಿ ಜಾಗೃತಿ ಮೂಡಿಸಿದರು.