ಕಿರಿಮಂಜೇಶ್ವರ ಮನೆಗೆ ಬೆಂಕಿ. ಲಕ್ಷಾಂತರ ರೂ. ಮೌಲ್ಯದ ಸೊತ್ತು ನಷ್ಟ

Click Here

Call us

Call us

Call us

ಬೈಂದೂರು: ಇಲ್ಲಿಗೆ ಸಮೀಪದ ಕಿರಿಮಂಜೇಶ್ವರ ಪ್ರವಾಸಿ ತಾಣ ಎದುರಿನ ಮನೆಯೊಂದಕ್ಕೆ ಬೆಂಕಿ ತಗಲಿ ಸಂಪೂರ್ಣ ಸುಟ್ಟು ಹೋಗಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಕಿರಿಮಂಜೇಶ್ವರದ ಕಮಲಾ ದೇವಾಡಿಗ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಬೆಂಕಿ ತಗಲು ಈ ಅವಘಡ ಸಂಭವಿಸಿದೆ. ಪಕ್ಕದ ಮನೆಯಲ್ಲಿಯೂ ಯಾರೂ ಇಲ್ಲದ ಕಾರಣ ಬೆಂಕಿ ಹೊತ್ತಿ ಉರಿಯುತ್ತಿದ್ದುದು ತಡವಾಗಿ ತಿಳಿದಿದೆ. ಬೆಂಕಿ ಊರಿಯುತ್ತಿದ್ದದ್ದನ್ನು ಗಮನಿಸಿದ ಸ್ಥಳೀಯರೊಬ್ಬರು ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಕುಂದಾಪುರದಿಂದ ಅಗ್ನಿಶಾಮಕದಳದ ಸಿಬ್ಬಂಧಿಗಳು ಬಂದು ಬೆಂಕಿ ನಂದಿಸಿದ್ದಾರೆ.

Call us

Click Here

ಹೊಸ ಮನೆಯನ್ನು ಕಟ್ಟುತ್ತಿದ್ದರಿಂದ ಅಲ್ಲೇ ಸಮೀಪದಲ್ಲಿ ಗುಡಿಸಲೊಂದನ್ನು ನಿರ್ಮಿಸಿಕೊಂಡು ವಾಸವಾಗಿದ್ದರು. ಇಂದು ಯಾವುದೋ ಕಾರ್ಯದ ನಿಮಿತ್ತ ಕಮಲಾ ದೇವಾಡಿಗ ಹಾಗೂ ಅವರ ಪತಿ ವೆಂಕಟೇಶ್ ಹೊರಗಡೆ ಹೋಗಿದ್ದರೇ, ಅವರ ಮಗಳು ಕಾಲೇಜಿಗೆ ತೆರಳಿದ್ದಳು. ಹೊಸ ಮನೆಯ ಸ್ಲ್ಯಾಪ್ ಹಾಕಲು ಇಟ್ಟದ್ದ ಒಂದೂವರೆ ಲಕ್ಷ ರೂ. ನಗದು, ಚಿನ್ನಾಭರಣ, ಅಂಕಪಟ್ಟಿ ಎಲ್ಲವೂ ಬೆಂಕಿಗೆ ತುತ್ತಾಗಿದೆ. ಸುಮಾರು 7 ಲಕ್ಷ ರೂ. ನಷ್ಟ ಸಂಭವಿಸಿದೆ. ಸ್ಥಳಕ್ಕೆ ಬೈಂದೂರು ವಿಶೇಷ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

news kirimanjeshwara fire accident news kirimanjeshwara fire accident1 news kirimanjeshwara fire accident2 news kirimanjeshwara fire accident3 news kirimanjeshwara fire accident4

Leave a Reply