ಕುಂದಾಪುರ: ಸ್ಪರ್ಧಾತ್ಮಕ ಯುಗದಲ್ಲಿ ವಿಜ್ಞಾನ ಎತ್ತರದ ಸ್ಥರದಲ್ಲಿ ಹೊಸ ಹೊಸಾ ಅವಿಷ್ಕಾರಗಳು ನಡೆಯುತ್ತಿದೆ. ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ವಿಜ್ಞಾನ ಮಾದರಿ ಸ್ಪರ್ಧೆ ಬೌದ್ಧಿಕ ಮಟ್ಟದ ವೃದ್ಧಿಗೆ ಪೂರಕಾವಾಗಿದೆ ಎಂದು ಹಂಗಳೂರು ಚಿಕ್ಕ ಮಹಾಲಿಂಗೇಶ್ವರ ಫ್ರೆಂಡ್ಸ್ ಮಾರ್ಗದರ್ಶಕ ಕೆ.ಆರ್.ನಾಯ್ಕ್ ಹೇಳಿದ್ದಾರೆ.
ಹಂಗಳೂರು ಚಿಕ್ಕ ಮಹಾಲಿಂಗೇಶ್ವರ ಫ್ರೆಂಡ್ಸ್, ಅಂಕದಕಟ್ಟೆ ಹಳೆ ವಿದ್ಯಾರ್ಥಿಗಳ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಅಂಕದಕಟ್ಟೆ ಸರಕಾರಿ ಮಾದರಿ ಶಾಲಾ ವೇದಿಕೆಯಲ್ಲಿ ನಡೆದ ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ಮಾದರಿ ಸ್ಪರ್ಧೆ ಮತ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಿದ್ದರು.
ಬೇರೆ ಬೇರೆ ಕಡೆಯಿಂದ ಸ್ಪರ್ಧೆಗೆ ಬಂದ ವಿದ್ಯಾರ್ಥಿಗಳು ಒಂದೆಡೆ ಕಲೆತು ವಿಷಯ ವಿನಿಮಯದಿಂದ ಜ್ಞಾನ ವೃದ್ಧಿಗೆ ಸಹಕಾರಿಯಾಗಲಿದೆ. ಹಿಂದೆ ವಿದ್ಯಾರ್ಥಿಗಳಿಗೆ ಕಲಿಕೆ ಅವಕಾಶ ಕಮ್ಮಿಯಿದ್ದು, ಪ್ರಸಕ್ತ ಕಲಿಕೆಗೆ ವಿಫುಲ ಅವಕಾಶ ವಿದ್ಯಾರ್ಥಿಗಳಿಗೆ ಸಿಗುತ್ತಿದೆ ಎಂದು ಹೇಳಿದರು.
ಅಂಕದಕಟ್ಟೆ ಸರಕಾರಿ ಮಾದರಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ವರ್ಣ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯಶಿಕ್ಷಕಿ ಸುಜಾತಾ ಭಟ್, ಹಂಗಳೂರು ಚಿಕ್ಕ ಮಹಾಲಿಂಗೇಶ್ವರ ಫ್ರೆಂಡ್ ಅಧ್ಯಕ್ಷ ಗೌತಮ್ ಇದ್ದರು. ಅಂಕದಕಟ್ಟೆ ಸರಕಾರಿ ಮಾದರಿ ಶಾಲೆ ನಿವೃತ್ತ ಶಿಕ್ಷಕ ಸದಾನಂದ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಎಸ್.ಶೆಟ್ಟಿ ಶುಭಾಶಂಸನೆ ಮಾಡಿದರು. ರವೀಂದ್ರ ಪಿ. ನಿರೂಪಿಸಿದರು. ಹಂಗಳೂರು ಚಿಕ್ಕ ಮಹಾಲಿಂಗೇಶ್ವರ ಫ್ರೆಂಡ್ ಪದಾಧಿಕಾರಿ ಶಶಿಧರ್ ಮತ್ತು ವಿಶ್ವನಾಥ್ ಅಥಿತಿಗಳ ಗೌರವಿಸಿದರು. ವಿವಿಧ ಶಾಲೆಯಿಂದ ಬಂದ ವಿದ್ಯಾರ್ಥಿಗಳ ೫೦ಕ್ಕೂ ಮಿಕ್ಕ ವಿಜ್ಞಾನ ಮಾದರಿ ಪ್ರದರ್ಶನ ಕಂಡಿತು.