ಅಂಜಲಿ ಆಸ್ಪತ್ರೆ ಬೈಂದೂರು: ಉಚಿತ ಆರೋಗ್ಯ ತಪಾಸಣಾ ಶಿಬಿರ

Click Here

Call us

Call us

Call us

ಬೈಂದೂರು: ಮನುಷ್ಯನ ಆರೋಗ್ಯಕ್ಕೆ ಯಾವುದೇ ತೊಂದರೆಯಾದಾಗ ಮನಕ್ಲೇಷ ಉಂಟಾಗುತ್ತದೆ. ಆಗ ಏನಿದ್ದರೂ ಸುಖ ಅನುಭವಿಸಲು ಅಸಾಧ್ಯ. ಸುಖಕ್ಕೆ ಆರೋಗ್ಯವೇ ಮೂಲ ಕಾರಣ. ಆದುದರಿಂದ ಆರೋಗ್ಯ ರಕ್ಷಣೆಗೆ ಪ್ರಾಶಸ್ತ್ಯ ನೀಡಬೇಕು ಎಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಧನ್ವಂತರಿ ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾದ ಡಾ. ರೂಪಾ ಆರ್. ಭಟ್ ಹೇಳಿದರು.

Call us

Click Here

ಹೊಸ ಆಡಳಿತದಡಿ ಪುನರಾರಂಭಗೊಂಡ ಬೈಂದೂರಿನ ಅಂಜಲಿ ಆಸ್ಪತ್ರೆಯಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಅನಾರೋಗ್ಯ ಕಾಡಿದಾಗ ಮಾತ್ರ ವೈದ್ಯರ ಬಳಿ ಹೋಗುವ ಪ್ರವೃತ್ತಿ ಸರಿಯಾದುದಲ್ಲ. ನಿಗದಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದರಿಂದ ಆರೋಗ್ಯ ಕಾಪಾಡಿಕೊಳ್ಳುವುದು ಸುಲಭವಾಗುತ್ತದೆ. ಜೀವನ ಮೌಲ್ಯಗಳನ್ನು ಕಡೆಗಣಿಸಿ, ಐಷಾರಾಮಿ ಬದುಕಿಗೆ ಹಾತೊರೆಯುವುದರಿಂದ ಮಾನಸಿಕ ಕಾಯಿಲೆಗಳು ಹೆಚ್ಚುತ್ತಿವೆ. ಈ ದಿಕ್ಕಿನಲ್ಲಿಯೂ ಜನರು ಚಿಂತಿಸಬೇಕು ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ. ಜಗನ್ನಾಥ ಶೆಟ್ಟಿ ಡಾ. ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಪುನರಾರಂಭವಾಗಿರುವ ಅಂಜಲಿ ಆಸ್ಪತ್ರೆ ಉತ್ತಮ ಸೇವೆ ನೀಡುವ ಮೂಲಕ ಬೈಂದೂರಿನ ಪ್ರಮುಖ ಕೊರತೆಯನ್ನು ನೀಗಿಸಲಿ ಎಂದು ಹಾರೈಸಿದರು.

ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಆಸ್ಪತ್ರೆಯಲ್ಲಿ ಪರಿಣತ ವೈದ್ಯರ ಸೇವೆ ಲಭ್ಯವಿದೆ. ಅದರೊಂದಿಗೆ ಆಯುರ್ವೇದ ವಿಭಾಗದಲ್ಲಿ ಶೀಘ್ರವೇ ಪಂಚಕರ್ಮ ಚಿಕಿತ್ಸೆಯನ್ನೂ ಆರಂಭಿಸಲಾಗುವುದು ಎಂದು ಹೇಳಿದರು. ಇಸ್ರೋದ ವಿಜ್ಞಾನಿ ಭಾಸ್ಕರ ಮಂಜ, ಆಸ್ಪತ್ರೆ ನಿರ್ದೇಶಕ ಮಂಡಳಿಯ ಸದಸ್ಯೆ ಅನುರಾಧಾ ಮಂಜ ವೇದಿಕೆಯಲ್ಲಿದ್ದರು. ಸತೀಶ ಎಂ. ನಿರೂಪಿಸಿ ವಂದಿಸಿದರು.

Leave a Reply