ಬೈಂದೂರು: ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಐದು ದಿನಗಳ ಕಾಲ ಜರುಗುವ ಸಾರ್ವಜನಿಕ ಲಕ್ಷಮೋದಕ ಗಣಪತಿ ಮಹಾಯಾಗ ಮತ್ತು ವಿಶೇಷ ಚತುಃಪವಿತ್ರ ನಾಗಮಂಡಲೋತ್ಸವದ ಧಾರ್ಮಿಕ ವಿಧಿ-ವಿಧಾನಗಳು ಮಂಗಳವಾರ ಬೆಳಿಗ್ಗೆ ದೇವಳದ ಪ್ರಧಾನ ಅರ್ಚಕ ಬಿ, ಕೃಷ್ಣಮೂರ್ತಿ ನಾವಡ, ಆನಗಳ್ಳಿ ಚನ್ನಕೇಶವ ಗಾಯತ್ರಿ ಭಟ್ಟ, ಕೆರೆಕಟ್ಟೆ ಸೀತಾರಾಮ ಅಡಿಗರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು.
ದೇವತಾ ಕಾರ್ಯಕ್ಕೆ ಭಕ್ತರು ಬೈಂದೂರಿನ ವಿವಿಧ ಭಾಗಗಳಿಂದ ಹೊರೆಕಾಣಿಕೆಯನ್ನು ವಾದ್ಯಘೋಷಗಳೊಂದಿಗೆ ಮೆರವಣಿಗೆ ಮೂಲಕ ತಂದು ಸಮರ್ಪಿಸಿದರು. ಸಂಜೆ ರಾಕ್ಷೋಘ್ನಹೋಮ, ವಾಸ್ತುಪೂಜೆ, ಬಲಿ ಕುಂಡಮಂಟಪ ಸಂಸ್ಕಾರ, ಅಗ್ನಿಜನನ ನಡೆಯಿತು.