ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ಬ್ರಹ್ಮರಥೋತ್ಸವ

Click Here

Call us

Call us

Call us

ಬಸ್ರೂರು: ಇತಿಹಾಸ ಪ್ರಸಿದ್ಧ ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ 7ನೇ ವರ್ಷದ ಬ್ರಹ್ಮರಥೋತ್ಸವವು ಶುಕ್ರವಾರ ವಿಜೃಂಭಣೆಯಿಂದ ಜರಗಿತು.

Call us

Click Here

ಮಧ್ಯಾಹ್ನ 2 ಗಂಟೆಗೆ ಮಹಾಬಲಿ ಪ್ರದಾನ, ರಥಾರೋಹಣ, ಸಂಜೆ 7 ಗಂಟೆಗೆ ಬ್ರಹ್ಮರಥೋತ್ಸವ, ಮಹಾಸಮಾರಾಧನೆ, ರಾತ್ರಿ ವಸಂತಪೂಜೆ, ಪ್ರಸಾದ ವಿತರಣೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ವೇದಮೂರ್ತಿ ಬಿ.ದಾಮೋದರ ಆಚಾರ್ಯ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ವಿಜೃಂಭಣೆಯಿಂದ ಜರಗಿತು.

ಕಾರ್ಯಕ್ರಮಗಳಲ್ಲಿ ದೇವಳದ ಆಡಳಿತ ಮಂಡಳಿ ಸದಸ್ಯರು, ದೇವಳದ ದರ್ಶನ ಪಾತ್ರಿಗಳಾದ ವಾಮನ ಪೈ ಭಟ್ಕಳ, ಸುನೀಲ್ ಪೈ, ವಿವಿಧ ದೇವಳಗಳ ಆಡಳಿತ ಮಂಡಳಿ ಸದಸ್ಯರು, ಸ್ವಸಮಾಜ ಕುಳಾವಿ ಬಾಂಧವರು ಹಾಗೂ ಊರಿನ ಹತ್ತು ಸಮಸ್ತರು ಪಾಲ್ಗೊಂಡು ಶ್ರೀದೇವರ ಪ್ರಸಾದ ಸ್ವೀಕರಿಸಿದರು.

Leave a Reply