ತಲ್ಲೂರು: ದನಗಳನ್ನು ಸಾಗಿಸುತ್ತಿದ್ದ ಲಾರಿ ಅಡ್ಡಗಟ್ಟಿದ ಹಿಂದೂ ಯುವಕರು. ಹಲ್ಲೆ, ಘರ್ಷಣೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದಾರೆಂಬ ಶಂಕೆಯ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರೆನ್ನಾದ ಯುವಕರು ಲಾರಿಯನ್ನು ಅಡ್ಡಗಟ್ಟಿದ ಘಟನೆ ತಲ್ಲೂರಿನ ಸಮೀಪದ ರಾಜಾಡಿ ಸೇತುವೆಯ ಬಳಿ ನಡೆದಿದೆ. ಪುಣೆಯಿಂದ ಮಂಗಳೂರು ಸಮೀಪದ ನೇರಳಕಟ್ಟೆಯ ಗೋಶಾಲೆ ಸಾಗಿಸುತ್ತಿದ್ದ ಲಾರಿಯನ್ನು ತಡೆದು ಚಾಲಕ ಹಾಗೂ ಗೋಶಾಲೆಯ ಮ್ಯಾನೆಜರ್ ಮೇಲೆ ಹಲ್ಲೆಗೆ ಮುಂದಾದ ಘಟನೆ ನಡೆದಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ

Call us

Click Here

ಪುಣೆಯಿಂದ ಮಂಗಳೂರು ಕಡೆಗೆ ಹೊರಟ್ಟಿದ್ದ 13 ಗೀರ್ ತಳಿಯ ದನಗಳನ್ನು ಲಾರಿಯು ತಲ್ಲೂರು ರಾಜಾಡಿ ಸೇತುವೆ ಬಳಿ ಬರುತ್ತಿದ್ದಂತೆಯೇ ಸುಮಾರು ನೂರು ಜನರ ಗುಂಪೊಂದು ಲಾರಿಯನ್ನು ಅಡ್ಡಗಟ್ಟಿ ಲಾರಿ ಚಾಲಕ ರಾಘು ಹಾಗೂ ಮ್ಯಾನೆಜರ್ ಅನಂತ ಕಾಮತ್ ಅವರೊಂದಿಗೆ ವಾದಕ್ಕಿಳಿದಿತ್ತು. ದನಗಳನ್ನು ಗೋಶಾಲೆಗೆ ಸಾಗಿಸಲಾಗುತ್ತಿದೆ ಎಂದು ದಾಖಲೆಗಳನ್ನು ತೋರಿಸಿದರೂ ನಂಬದ ಗುಂಪು, ಅವರ ಮೇಲೆಯೇ ಹಲ್ಲೆಗೆ ಮುಂದಾಗಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಲು ಲಘು ಲಾಠಿ ಪ್ರಹಾರ ಮಾಡಿದರು.

ಘಟನೆಯ ವೇಳೆ ಏಳು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳಲಾಗಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳದಲ್ಲಿದ್ದ ೧೨ ಬೈಕ್ ಹಾಗೂ ದನಗಳಿದ್ದ ಲಾರಿಯನ್ನು ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ. ಹಲ್ಲೆಗೆ ಮುಂದಾದರ ವಿರುದ್ದ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ್, ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್, ಎಸೈ ಕುಂದಾಪುರ ನಾಸಿರ್ ಹುಸೇನ್ ಹಾಗೂ ಇತರ ಪೊಲೀಸ್ ಸಿಬ್ಬಂಧಿಗಳು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.

Leave a Reply