ದೇಶ ಕಾಯೋ ಸೈನಿಕರಿಗೆ ಬಗ್ಗೆ ಕನ್ಹಯ್ಯಾ ಆರೋಪಕ್ಕೆ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿದೆ.
ದೆಹಲಿ: ದೇಶ ವಿರೋಧಿ ಘೋಷಣೆ ಕೂಗಿದ ಆರೋಪದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಮುಖಂಡ ಕನ್ಹಯ್ಯಾ ಕುಮಾರ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದ್ದು ಜೆಎನ್‌ಯು ಹಳೆ ವಿದ್ಯಾರ್ಥಿನಿ ಪ್ರಸ್ತುತ ಅದೇ ಕಾಲೇಜಿನ ಪ್ರಾಧ್ಯಾಪಕಿ ಇದನ್ನು ಸಾಕ್ಷೀಕರಿಸಿದ್ದಾರೆ.
ಕನ್ಹಯ್ಯಾ ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯೊಬ್ಬಳೊಂದಿಗೆ (ಈಗ ಹಳೆ ವಿದ್ಯಾರ್ಥಿನಿ) ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ೨೦೧೫ ರ ಜೂನ್‌ನಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಕನ್ಹಯ್ಯಾ ಕುಮಾರ್‌ನನ್ನು ವಿದ್ಯಾರ್ಥಿನಿಯೋರ್ವಳು ಪ್ರಶ್ನಿಸಿದ್ದಳು. ಆಗ ಕನ್ಹಯ್ಯಾ ’ಇದು ನನ್ನ ಹಾಸ್ಟೇಲ್, ನೀನು ಹುಚ್ಚಿ’ ಎಂದು ನಿಂದಿಸಿದ್ದಲ್ಲದೇ ’ನಿನ್ನನ್ನು ನೋಡಿಕೊಳ್ಳುತ್ತೇನೆ. ನನ್ನ ವಿರುದ್ದ ಅದೇನು ಮಾಡುತ್ತೀಯಾ ಮಾಡು’ ಎಂದಿದ್ದರು ಎಂದು ಆರೋಪಿಸಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿ ಜೆಎನ್‌ಯು ಆಡಳಿತ ಮಂಡಳಿಗೆ ದೂರು ನೀಡಿ, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಳು. (ದೂರು ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.) ಆದರೆ ಕನ್ಹಯ್ಯಾ ಭವಿಷ್ಯದ ದೃಷ್ಠಿಯಿಂದ ವಿವಿ ಯಾವುದೇ ಕಠಿಣ ಕ್ರಮಕೈಗೊಂಡಿರಲಿಲ್ಲ. ಕೇವಲ ೩ ಸಾವಿರ ರೂಪಾಯಿ ದಂಡ ವಿಧಿಸಿ ಕೇಸ್ ಮಾಫಿ ಮಾಡಿದ್ದರು ಎಂಬುದು ಈದೀಗ ಬೆಳಕಿಗೆ ಬಂದಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ
ಮಹಿಳಾ ದಿನದಂದು ಜೆಎನ್‌ಯು ಕ್ಯಾಂಪಸ್ಸಿನಲ್ಲಿ ಕಾಶ್ಮೀರದಲ್ಲಿ ಸೈನಿಕರಿಂದ ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ. ಸೇನಾ ವಿಶೇಷಾಧಿಕಾರ ಕಾಯ್ದೆ ವಿರುದ್ಧ ನಾವು ದನಿ ಎತ್ತುತ್ತೇವೆ ಎಂದು ಕನ್ಹಯ್ಯಾ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ಈತನ ಮತ್ತೊಂದು ಮುಖ ಬಹಿರಂಗಗೊಂಡಿದೆ. ಇದರೊಂದಿಗೆ ಕನ್ಹಯ್ಯಾ ಹಾಗೂ ಜೆಎನ್‌ಯು ಪ್ರೋಫೆಸರ್ ಎನ್ನಲಾದ ಇನ್ನೊಬ್ಬ ಮಹಿಳೆಯೋರ್ವರೊಂದಿಗೂ ಅಸಭ್ಯ ಭಂಗಿಯಲ್ಲಿ ಕುಳಿತು ಮಾತನಾಡುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಇದರ ಸತ್ಯಾಸತ್ಯತೆಯ ಬಗ್ಗೆಯೂ ಇನ್ನಷ್ಟೇ ತಿಳಿಯಬೇಕಿದೆ.