ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೆಲ್ಬೋರ್ನ್/ಕುಂದಾಪುರ: ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ನೆಲೆಸಿರುವ ಕ್ರೀಡೋತ್ಸಾಹಿ ಕುಂದಾಪ್ರ ಕನ್ನಡಿಗರು, ತಮ್ಮೂರಿನ ಅಭಿಮಾನದಿಂದಾಗಿ ‘ಕುಂದಾಪ್ರ ರಾಯಲ್ಸ್’ ಎಂಬ ಹೊಸ ಕ್ರಿಕೆಟ್ ತಂಡವನ್ನು ಆರಂಭಿಸಿದ್ದಾರೆ.
ಮೆಲ್ಬೋರ್ನ್ ನಗರದಲ್ಲಿ ಇತ್ತೀಚಿಗೆ ಉದ್ಘಾಟನಾ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಕಳೆದ 15 ವರ್ಷಗಳಿಂದ ಮೆಲ್ಬೋರ್ನ್‌ನಲ್ಲಿ ವಾಸಿಸುತ್ತಿರುವ ತಂಡದ ಮ್ಯಾನೇಜರ್ ಅನಂತರಾಮ ಶೆಟ್ಟಿ ಕೋಳ್ಕೆರೆ ಮತ್ತು ತಂಡದ ನಾಯಕರಾದ ಸೂರಜ್ ಶೆಟ್ಟಿ ಅಸೂಡು ಕಾರ್ಯಕ್ರಮ ಆಯೋಜಿಸಿದರು. ಕಾರ್ಯಕ್ರಮದಲ್ಲಿ 250ಕ್ಕೂ ಮಂದಿ ಭಾಗವಹಿಸಿ ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ವ್ಯಾಪಾರ ಪ್ರಾಯೋಜಕರಾದ ಬ್ರೈಟನ್ ಲೆಕ್ಸಸ್‌ನ ಜನರಲ್ ಸೇಲ್ಸ್ ಮ್ಯಾನೇಜರ್ ಡಿಯೋನ್ ನುಗಾರ, ಆಸ್ಟ್ರೇಬಿಲ್ಡ್‌ನ ದಯಾನಂದ ಶೆಟ್ಟಿ ಅಜ್ರಿ, ಹ್ಯಾಟರ್ ಮತ್ತು ಹೇರ್ ಮತ್ತು ಡ್ರೋಮ್‌ನ ವಿನೋದ್ ಶೆಟ್ಟಿ ಕೊಡ್ಲಾಡಿ, ಸ್ಪ್ರಿಂಗ್ಡೇಲ್ ಫ್ಯಾಮಿಲಿ ಡೆಂಟಲ್ನಿಂದ ಡಾ. ರಕ್ಷಿತ್ ಶೆಟ್ಟಿ ಗಿಳಿಯಾರ್, ಒನ್ಗ್ರೂಪ್ ರಿಯಾಲಿಟಿಯಿಂದ ಕಲ್ಲೆ ಸಿಂಗ್, ವಿಜೇತ್ ಶೆಟ್ಟಿ ಸೀತಾನಾದಿ ಮತ್ತು ಅಲ್ಟಾಲ್ಯಾಂಡ್‌ನಿಂದ ರಾಮ್ ಮೋಹನ್ ಶೆಟ್ಟಿ ಮೊಳಹಳ್ಳಿ, ಮೆಲ್ಬೋರ್ನ್ ಕನ್ನಡ ಸಂಘದಿಂದ ವಿಶೇಷ ಅತಿಥಿಗಳಾಗಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಶರ್ಮಾ ಮತ್ತು ಸಮಿತಿಯ ಸದಸ್ಯರಾದ ಹೇಮಂತ್ ಕುಮಾರ್ ಉಪಸ್ಥಿತರಿದ್ದರು.
ಈ ಸಂದರ್ಭ ಮಾತನಾಡಿದ ರಕ್ಷಿತ್ ಹೆಗ್ಡೆ ಉಡುಪಿ, ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಇಡೀ ಸಮಾಜ ಹೆಮ್ಮೆಪಡುತ್ತದೆ ಮತ್ತು ಮುಂದಿನ ಪ್ರಯತ್ನಗಳಿಗೆ ಶುಭವಾಗಲಿ ಎಂದು ಹಾರೈಸಿದರು.

ಭಾರತೀಯ ಸಮುದಾಯದೊಂದಿಗೆ ನಡೆದ ವಿಶೇಷ ಇವೆಂಟ್‌ನಲ್ಲಿ ಕುಂದಾಪ್ರ ರಾಯಲ್ಸ್ ತಂಡದ ಎಲ್ಲಾ 32 ಆಟಗಾರರನ್ನು ಕ್ರಿಕೆಟ್ ಪ್ರೇಮಿಗಳಿಗೆ ಪರಿಚಯಿಸಲಾಯಿತು. ಅತಿಥಿಗಳು ಮತ್ತು ಪ್ರಾಯೋಜಕರು ತಂಡದ ಜೆರ್ಸಿಯನ್ನು ಅನಾವರಣಗೊಳಿಸಿದರು. ಇತರ ಕ್ರಿಕೆಟ್ ತಂಡಗಳ ವಿವಿಧ ಪ್ರತಿನಿಧಿಗಳು ಮತ್ತು ಅವರ ಕುಟುಂಬಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತಂಡದ ಮ್ಯಾನೇಜರ್ ಅನಂತರಾಮ ಶೆಟ್ಟಿ ಕೋಳ್ಕೆರೆ ಅವರು ತಮ್ಮ ವಂದನಾರ್ಪಣೆ ಸಲ್ಲಿಸುವ ವೇಳೆ ಮಾತನಾಡಿ, ಕೋರ್ ಟೀಮ್ ಸಂಘಟಿಸಲು ಮತ್ತು ಆರಂಭಿಕ ಹಂತಗಳಲ್ಲಿ ಮಾರ್ಗದರ್ಶನ ನೀಡಿದ ರುದ್ರೇಶ್ ಶಿವಣ್ಣ ಹಾಗೂ ಕುಂದಾಪ್ರ ರಾಯಲ್ಸ್ ತಂಡವನ್ನು ಕಟ್ಟಲು ಬೆಂಬಲಿಸಿದ ಪ್ರಾಯೋಜಕರಿಗೆ ಕೃತಜ್ಞತೆ ಸಲ್ಲಿಸಿದರು. ರುದ್ರೇಶ್ ಕಾರ್ಯಕ್ರಮ ನಿರೂಪಿಸಿದರು.
ಮೆಲ್ಬೋರ್ನ್‌ನಲ್ಲಿ ಕರ್ನಾಟಕದ ಸ್ನೇಹಿತರಿಂದ 28 ವರ್ಷಗಳ ಹಿಂದೆ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆರಂಭಿಸಲಾಗಿತ್ತು. ಪ್ರಸ್ತುತ ವರ್ಷವಿಡೀ ನಡೆಯುವ ವಿವಿಧ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಮೂಲಕ ಇತರ ರಾಜ್ಯಗಳ ತಂಡಗಳೊಂದಿಗೆ ಪ್ಯಾನ್-ಇಂಡಿಯಾ ಮಟ್ಟಕ್ಕೆರಿರಿದೆ.