ಎಚ್.ಎಮ್.ಎಮ್- ವಿ.ಕೆ.ಆರ್. ಆಚಾರ್ಯ ಶಾಲೆಯ ಹಳೆ ವಿದ್ಯಾರ್ಥಿ ಸಂಘ ’ಸೆಸ್ಸಾ’ ಉದ್ಘಾಟನೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಎಜುಕೇಶನ್ ಸೊಸೈಟಿಯ ಶಾಲೆಗಳಲ್ಲಿ ಕಲಿತಿರುವ ವಿದ್ಯಾರ್ಥಿಗಳು ಇಂದು ಸಮಾಜದ ಉನ್ನತ ಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರ ಚಟುವಟಿಕೆಗಳಿಗೆ ಮತ್ತು ಶಾಲೆಯ ನಿರಂತರ ಸಂಪರ್ಕ ಮತ್ತು ಬೆಳವಣಿಗೆಗೆ ಹಳೆ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯವಾಗಿರುವುದರಿಂದ ಕುಂದಾಪುರ ಎಜುಕೇಶನ್ ಸೊಸೈಟಿ ಸ್ಕೂಲ್ ಅಲುಮ್ನಿ ಅಸೋಸಿಯೇಶನ್‌ನ್ನು ಸ್ಥಾಪಿಸಲಾಗಿದೆ. ತನ್ಮೂಲಕ ಸಂಸ್ಥೆಯು ನಿರಂತರ ಕ್ರಿಯಾಶೀಲವಾಗಿ ಸಮಾಜಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡುವಂತಾಗಲಿ ಎಂದು ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು.

Call us

Click Here

ಅವರು ಕುಂದಾಪುರ ಎಜುಕೇಶನ್ ಸೊಸೈಟಿಯ ಸಂಸ್ಥೆಗಳಾದ ಎಚ್.ಎಮ್.ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ವಿ. ಕೆ. ಆರ್. ಆಚಾರ್ಯ ಆಂಗ್ಲ ಮಾಧ್ಯಮ ಶಾಲೆಗಳ ಹಳೆ ವಿದ್ಯಾರ್ಥಿಗಳ ಸಂಘ ಕುಂದಾಪುರ ಎಜುಕೇಶನ್ ಸೊಸೈಟಿ ಸ್ಕೂಲ್ ಅಲುಮ್ನಿ ಅಸೋಸಿಯೇಶನ್(ಸೆಸ್ಸಾ)ನ್ನು ಆರ್. ಎನ್. ಶೆಟ್ಟಿ ಅಡಿಟೋರಿಯಂ ಹಾಲ್‌ನಲ್ಲಿ ಉದ್ಘಾಟಿಸಿ ಮಾತನಾಡಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಮುಖ್ಯ ಅತಿಥಿಗಳಾಗಿ ಕುಂದಾಪುರ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷ ಎ.ಪಿ.ಮಿತ್ಯಂತಾಯ, ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ ಶುಭ ಹಾರೈಸಿದರು. ಎಚ್.ಎಮ್.ಎಮ್. ಆಂಗ್ಲ ಮಾದ್ಯಮ ಶಾಲೆ ಪ್ರಾಂಶುಪಾಲೆ ಚಿಂತನ ರಾಜೇಶ್, ವಿ. ಕೆ. ಆರ್. ಆಚಾರ್ಯ ಆಂಗ್ಲ ಮಾದ್ಯಮ ಶಾಲೆಯ ಮುಖ್ಯೋಪಧ್ಯಾಯ ಕೃಷ್ಣ ಅಡಿಗ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚ್ಚಿನ್ ನಕ್ಕತ್ತಾಯ, ಕಾರ್ಯದರ್ಶಿ ಹರ್ಷೇಂದ್ರ ಎನ್. ಶೇಟ್, ಸಲಹಾ ಸಮಿತಿಯ ಛೇರ್‌ಮೆನ್ ಕೆ. ಕಾರ್ತಿಕೇಯ ಮಧ್ಯಸ್ಥ, ಉಪಾಧ್ಯಕ್ಷರಾದ ಅಭಿಷೇಕ ಶೆಟ್ಟಿ, ಡಾ| ಸ್ವಾತಿ, ಜೊತೆ ಕಾರ್ಯದರ್ಶಿ ಮೇಘಾ, ಖಜಾಂಚಿ ಮಿಥುನ್ ಶೆಟ್ಟಿ, ಜೊತೆ ಖಜಾಂಚಿ ಪರಮೇಶ್ವರ ಉಡುಪ, ಸಂಘದ ಸಂಯೋಜಕರಾದ ಕೌಶಿಕ್ ಯಡಿಯಾಳ್, ಶರತ್ ಶೇಟ್, ವೈಶಾಲಿ, ಶ್ರೇಯಾಂಕ್ ಶೆಟ್ಟಿ, ಪ್ರಜ್ವಲ್, ಪವನ್ ರಾವ್, ಶಿಲ್ಪಶ್ರೀ, ಪೂಜಾ, ಮಂಜುಶ್ರೀ, ಚಂದನ್, ರಚನಾ, ಜೀವನ್, ಅರ್ಜುನ್ ಇನ್ನಿತರರು ಉಪಸ್ಥಿತರಿದ್ದರು.

Leave a Reply