ಕುಂದಾಪುರ: ಕಚೇರಿಗೆ ಕೆಲಸಕ್ಕಾಗಿ ಬರುವ ಗ್ರಾಮೀಣ ಭಾಗದ ನಾಗರಿಕರಿಗೆ ಕ್ಲಪ್ತ ಹಾಗೂ ಉತ್ತಮ ಗುಣ ಮಟ್ಟದ ಸೇವೆಗೆ ಹೆಚ್ಚಿನ ಪ್ರಾಮುಖ್ಯ ನೀಡುವಂತೆ ಉಡುಪಿ ಜಿಲ್ಲಾಧಿಕಾರಿ ಡಾ. ಆರ್. ವಿಶಾಲ್ ಕರೆ ಕೊಟ್ಟಿದ್ದಾರೆ.
ಕುಂದಾಪುರ ಮಿನಿ ವಿಧಾನಸೌಧ ಮೊದಲ ಮಹಡಿಯಲ್ಲಿ ಉಪವಿಭಾಗಾಧಿಕಾರಿ ಕಚೇರಿ, ಉಪ ತಹಸೀಲ್ದಾರ್ ಕಚೇರಿ ಹಾಗೂ ದಾಖಲಾತಿ ಕೊಠಡಿಗೆ ಚಾಲನೆ ನೀಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಟ್ಟಡ ಗುತ್ತಿಗೆದಾರರನ್ನು ಜಿ
ಲ್ಲಾಧಿಕಾರಿ ಡಾ.ವಿಶಾಲ್ ಆರ್. ಗೌರವಿಸಿದರು.
ಕುಂದಾಪುರ ಉಪವಿಭಾಗಾಧಿಕಾರಿ ಅಶ್ವಥಿ ಎಸ್., ಕುಂದಾಪುರ ತಹಸೀಲ್ದಾರ್ ಗಾಯತ್ರಿ ಎನ್.ನಾಯ್ಕ್, ಉಪ ತಹಸೀಲ್ದಾರ್ ರಾಮಚಂದ್ರ ರಾವ್, ಎಸಿ ಕಚೇರಿ ಸಿಬ್ಬಂದಿ ಶಂಕರ್ ಶೆಟ್ಟಿ, ಸುರೇಶ್, ಭಾಗ್ಯಲಕ್ಷ್ಮೀ, ವಿಶಾಲಾಕ್ಷಿ, ಮೊಹಮ್ಚಮದ್ ಸಿಖಂದರ್, ತಾಲೂಕ್ ಕಚೇರಿ ಸಿಬ್ಬಂದಿ ಇದ್ದರು.