ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇಹ ಸೌಂದರ್ಯಕ್ಕೆ ಎಲ್ಲರೂ ಹೆಚ್ಚಿನ ಆಧ್ಯತೆ ನೀಡುತ್ತಿದ್ದು, ಮನಸ್ಸಿನ ಆರೋಗ್ಯದ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲ. ದೇಹಕ್ಕೆ ಎಕ್ಸ್‌ಸೈಜ್ ಹೇಳಿಕೊಡೋರುಂಟು ಆದರೆ ಮನಸ್ಸಿಗೆ ಹೇಳಿಕೊಡುವವರಿಲ್ಲ. ಮನಸ್ಸಿನ ನಿಯಂತ್ರಣಕ್ಕ ವ್ಯಾಯಾಮ ಹೇಳಿಕೋಡುವ ಒಂದೇ ಒಂದು ಸಂಸ್ಥೆ ಈಶ್ವರೀಯ ವಿಶ್ವವಿದ್ಯಾಲಯ ಎಂದು ಮಂಗಳೂರು ಬ್ರಹ್ಮಕುಮಾರಿ ಬಿ.ಕೆ.ಜಯಶ್ರೀ ಹೇಳಿದರು.
ಕುಂದಾಪುರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಆಶ್ರಯದಲ್ಲಿ ಕುಂದಾಪುರ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಯುಗಾದಿ ಪ್ರಯುಕ್ತ ನಡೆದ ಸದ್ಭಾವನಾ ಸಭೆಯಲ್ಲಿ ಮಾತನಾಡಿದರು.
ಶರೀರಕ್ಕೆ ಮಾತ್ರ ಆಧ್ಯತೆ ನೀಡಿದರೆ ಸಾಲದು ಮನಸ್ಸಿನ ಆರೋಗ್ಯಕ್ಕೂ ಪ್ರಾಮುಖ್ಯತೆ ನೀಡಬೇಕು. ಮನಸ್ಸು ಸರಿಯಿದ್ದರೆ ಮನೆ ಸರಿಯಿರುತ್ತದೆ. ಮನೆ ಸರಿಯಿದ್ದರೆ ಊರು ಸಮಾಜ ಎಲ್ಲಾ ಸರಿಯಿರುತ್ತದೆ. ದೈಹಿಕ ಪರಿವರ್ತನೆಗಿಂತ ಮನಸ್ಸಿನ ಪರಿವರ್ತನೆ ಮುಖ್ಯ ಎಂದು ಹೇಳಿದರು.
ರಾಜಯೋಗಿನಿ ಬ್ರಹ್ಮಕುಮಾರಿ ವಿಶ್ವೇಶ್ವರೀಜಿ ಯುಗಾದಿ ಸದ್ಭಾವನಾ ಸಂದೇಶ ನೀಡಿದರು. ಪತ್ರಕರ್ತ ಟಿ.ಪಿ.ಮಂಜುನಾಥ, ನ್ಯಾಯವಾದಿ ರಾಜ ಕುಮಾರ್ ನೆಂಪು ಇದ್ದರು. ಬ್ರಹ್ಮಕುಮಾರಿ ಪ್ರಭಾ ಸ್ವಾಗತಿ ಗೀತೆ ಹಾಡಿದರು. ಮಂಗಳೂರು ಬ್ರಹ್ಮಕುಮಾರಿ ಬಿ.ಕೆ.ರಾಧಾ ಸ್ವಾಗತಿಸಿದರು. ಬ್ರಹ್ಮಕುಮಾರಿ ಗುಲಾಬಿ ಮತ್ತು ಅಂಬಿಕಾ ಅಥಿಗಳ ಗೌರಿಸಿದರು. ಬಿ.ಕೆ.ನಾಗರಾಜ್ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನಾ ಕುಂದಾಪುರ ಪುರ ಸಂಚಾರ ನಡೆಸಿದ ಬ್ರಹ್ಮಕುಮಾರಿ ಅವರು ದ್ಯಾನ ಯೋಗದ ಬಗ್ಗೆ ಜಾಗೃತಿ ಮೂಡಿಸಿದರು.