ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಮನವಮಿ ಅಂಗವಾಗಿ ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ದೇವರ ಪ್ರಾರ್ಥನೆ, ಪಂಚಾಮೃತ ಅಭಿಷೇಕ, ಪವಮಾನ ಕಲಶಾಭಿಷೇಕ ಜರುಗಿತು. ಮಧ್ಯಾಹ್ನ ಮಹಾಪೂಜೆ ಹಾಗೂ ಮಹಾಸಮಾರಾಧನೆ ನಡೆಯಿತು. ದೇವಸ್ಥಾನದ ಮೊಕ್ತೇಸರರು, ಜಿಎಸ್‌ಬಿ ಸಮಾಜ ಭಾಂದವರು ಉಪಸ್ಥಿತರಿದ್ದರು. ದೇವತಾ ವಿಧಿ ವಿಧಾನಗಳನ್ನು ವೇ.ಮೂ.ಶ್ರೀನಿವಾಸ ಭಟ್ ಮತ್ತು ವೇ.ಮೂ.ಪ್ರಶಾಂತ ಭಟ್ ನೇರವೇರಿಸಿದರು.












