ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಬ್ರಹ್ಮರಥೋತ್ಸವ ರಾಮನವಮಿ ದಿನದಂದು ವಿಜೃಂಭಣೆಯಿಂದ ಜರುಗಿತು. ರಥೋತ್ಸವ ಅಂಗವಾಗಿ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ಮಹಾಪೂಜೆ ಇತ್ಯಾದಿ ಧಾರ್ಮಿಕ ವಿಧಿಗಳು ನಡೆದವು.
ಕುಂದಾಪುರ ತೇರು ಎಂದೇ ಪ್ರಸಿದ್ಧವಾಗಿರುವ ಜಿಎಸ್‌ಬಿ ಸಮುದಾಯದ ಪೇಟೆ ಶ್ರೀ ವೆಂಕಟರಮಣ ರಥೋತ್ಸವವನ್ನು ನೋಡಲು ದೇವಸ್ಥಾನದ ಆಡಳಿತ ಮೊಕ್ತೇಸರ ರಾಧಾಕೃಷ್ಣ ಶೆಣೈ, ಜತೆ ಮೊಕ್ತೇಸರರಾದ ಕೋಡಿ ಶ್ರೀನಿವಾಸ ಶೆಣೈ, ಪಿ. ಮಾಳಪ್ಪ ಪೈ ಸೇರಿದಂತೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮಕ್ಕಳ ಶ್ರೇಯೋಭಿವೃದ್ಧಿಗಾಗಿ ರಥಾರೂಡ ಶ್ರೀ ವೆಂಕಟರಮಣ ದೇವರ ರಥವನ್ನು ಸ್ಪರ್ಷಿಸುವ ವಿಶಿಷ್ಟ ಪ್ರಕ್ರಿಯೆ ರಥ ಬಳುವಳಿಯಲ್ಲಿ ಹೆತ್ತವರು ತಮ್ಮ ಮಕ್ಕಳನ್ನು ರಥಕ್ಕೆ ಸ್ಪರ್ಷಿಸಿ ಆಶಿರ್ವಾದ ಪಡೆದರು.