ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ನಾಡದೋಣಿ ಭವನ ಲೋಕಾರ್ಪಣೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಮಾಜದ ಅತಿ ನಂಬಿಕಸ್ಥರು ಎಂದೆನಿಸಿಕೊಂಡಿರುವ ಮೀನುಗಾರಿಕೆ ನಡೆಸುತ್ತಿರುವ ಸಮುದಾಯವು ಇತರ ಸಮುದಾಯಗಳಿಗಿಂತ ಆರ್ಥಿಕವಾಗಿ ಹಿಂದುಳಿದಿದ್ದು, ಸರಕಾರ ಸವಲತ್ತುಗಳನ್ನು ಈ ಸಮುದಾಯಗಳಿಗೆ ಒದಗಿಸುವ ಸಲುವಾಗಿ ಈ ಸಮುದಾಯವನ್ನು ಪಂಗಡಕ್ಕೆ ಸೇರಿಸುವ ಬಗ್ಗೆ ಸರಕಾರಕ್ಕೆ ಶಿಪಾರಸ್ಸು ಮಾಡಲಾಗಿದೆ ಎಂದು ರಾಜ್ಯ ಬಂದರು ಮತ್ತು ಜವಳಿ ಖಾತೆ ಸಚಿವ ಬಾಬೂರಾವ್ ಚಿಂಚನಸೂರ್ ಹೇಳಿದರು.

Call us

Click Here

ಉಪ್ಪುಂದ-ಅಂಬಾಗಿಲು ಗ್ರಾಮ ಪಂಚಾಯತ್ ಮೈದಾನದಲ್ಲಿ ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ನಾಡದೋಣಿ ಭವನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮೀನುಗಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಲ್ಲಿ ಕಳೆದ 40 ವರ್ಷಗಳಿಂದ ಸತತ ಹೋರಾಟ ಮಾಡುತ್ತಿದ್ದೇನೆ. ಮೀನುಗಾರಿಕೆಯನ್ನು ನೆಚ್ಚಿಕೊಂಡಿರುವ ಖಾರ್ವಿ, ಗಂಗಾಪುತ್ರರು ಮೊದಲಾದ ಸಮಾಜದ ಕೆಳಮಟ್ಟದಲ್ಲಿರುವ ಜನಾಂಗದವರನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಬೇಕೆನ್ನುವ ನೆಲೆಯಲ್ಲಿ ಈಗಾಗಲೇ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ಹೇಳಿದರು.

ಯುವಜನ ಸೇವೆ, ಕ್ರೀಡೆ ಮತ್ತು ಮೀನುಗಾರಿಕಾ ರಾಜ್ಯ ಸಚಿವ ಅಭಯ್‌ಚಂದ್ರ ಜೈನ್ ನಾಡದೋಣಿ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿ ಕಳೆದ ಮೂರು ವರ್ಷದಿಂದ ಮೀನುಗಾರಿಕಾ ರಸ್ತೆ ದುರಸ್ತಿಗಾಗಿ ನಬಾರ್ಡ್ ಮೂಲಕ ಪ್ರತಿವರ್ಷ ಕರಾವಳಿ ಭಾಗದ ಅಭಿವೃದ್ಧಿಗೆ ತಲಾ ಒಂದು ಕೋಟಿ ಅನುದಾನ ಹಾಗೂ ಪ್ರತಿವರ್ಷ ನೂರು ಮೀನುಗಾರಿಕಾ ಮನೆಗಳನ್ನು ಒದಗಿಸಲಾಗುತ್ತಿದೆ. ಇಂದು ನಾಡದೋಣಿ ಮೀನುಗಾರರು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಮುಖ್ಯಮಂತ್ರಿ ಬಳಿ ತೆರಳಿ ಅವರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಚಿದರು.

ಉಪ್ಪುಂದ ಗ್ರಾಪಂ ಅಧ್ಯಕ್ಷೆ ದುರ್ಗಮ್ಮ ಸ್ಥಳೀಯ ಅಂಗನವಾಡಿಗೆ ಹೊಸದಾಗಿ ಅಳವಡಿಸಲಾದ ನೆಲಹಾಸು ಉದ್ಘಾಟಿಸಿದರು. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ವಲಯ ನಾಡದೋಣಿ ಮೀನುಗಾರರ ಸಂಘದ ಎಲ್ಲಾ ಮಾಜಿ ಅಧ್ಯಕ್ಷರನ್ನು ಗೌರವಿಸಲಾಯಿತು. ಸಂಘದ ಗೌರವಾಧ್ಯಕ್ಷ ಎಸ್. ಮದನ್‌ಕುಮಾರ್ ಶುಭಾಸಂಶನೆಗೈದರು. ಜಿಪಂ ಸದಸ್ಯ ಸುರೇಶ ಬಟವಾಡಿ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಕೇಶವ ಕುಂದರ್, ತಾಪಂ ಸದಸ್ಯೆ ಪ್ರಮೀಳಾ ದೇವಾಡಿಗ, ಸಂಘದ ಅಧ್ಯಕ್ಷ ಕುಮಾರ್ ಖಾರ್ವಿ ಬಿಹೆಚ್‌ಕೆ, ಗೌರವಾಧ್ಯಕ್ಷ ಪ್ರಭಾಕರ ಖಾರ್ವಿ, ಇಲಾಖಾಧಿಕಾರಿಗಳಾದ ಟಿ. ಎಸ್. ರಾಥೋಡ್, ಜಂಬಾವಳಿ, ನಾಗರಾಜ್, ಪಾರ್ಶ್ವನಾಥ್ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಗೌರವಾಧ್ಯಕ್ಷ ನವೀನ್‌ಚಂದ್ರ ಉಪ್ಪುಂದ ತಮ್ಮ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಶೇಖರ್ ಖಾರ್ವಿ ಸ್ವಾಗತಿಸಿ, ಕೋಶಾಧಿಕಾರಿ ಅಣ್ಣಯ್ಯ ಖಾರ್ವಿ ವಂದಿಸಿದರು. ಪ್ರಸನ್ನಕುಮಾರ್ ನಿರೂಪಿಸಿದರು.

Uppunda Nadadoni Minugarara Bhavana (1) Uppunda Nadadoni Minugarara Bhavana (3)

Click here

Click here

Click here

Click Here

Call us

Call us

Leave a Reply