ಎಸ್‌ಎಸ್‌ಎಲ್‌ಸಿ ಮರು ಮೌಲ್ಯಮಾಪನದಲ್ಲಿ ಧರ್ಮಶ್ರೀಗೆ 13 ಅಂಕ ಹೆಚ್ಚಳ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಾಗೂರಿನ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯಿಂದ ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕುಳಿತ ಧರ್ಮಶ್ರೀ ಶೆಟ್ಟಿ ಮರು ಮೌಲ್ಯಮಾಪನದಲ್ಲಿ 13 ಅಂಕ ಹೆಚ್ಚಿಗೆ ಗಳಿಸಿದ್ದಾಳೆ. 602 ಇದ್ದ ಅವಳ ಅಂಕದ ಮೊತ್ತ ಈಗ 615ಕ್ಕೆ ಏರಿದೆ. ಮೊದಲು ಬಂದಿದ್ದ ಫಲಿತಾಂಶದಂತೆ ಅವಳಿಗೆ ಕನ್ನಡದಲ್ಲಿ 125, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ತಲಾ 95, ಗಣಿತದಲ್ಲಿ 85, ವಿಜ್ಞಾನದಲ್ಲಿ 99 ಮತ್ತು ಸಮಾಜ ವಿಜ್ಞಾನದಲ್ಲಿ 97 ಅಂಕಗಳು ಬಂದಿದ್ದುವು. ಈ ಫಲಿತಾಂಶದಿಂದ ತೃಪ್ತಳಾಗದ ಅವಳು ನಾಲ್ಕು ವಿಷಯಗಳ ಮರುಮೌಲ್ಯ ಮಾಪನಕ್ಕೆ ಕೋರಿಕೆ ಸಲ್ಲಿಸಿದ್ದಳು. ಇದೀಗ ಅದರ ಫಲಿತಾಂಶ ಬಂದಿದ್ದು, ಅದರಂತೆ ಆ ನಾಲ್ಕೂ ವಿಷಯಗಳಲ್ಲಿ ಅಂಕ ಪರಿಷ್ಕರಣೆ ಆಗಿದೆ. ಹಿಂದಿ ಮತ್ತು ವಿಜ್ಞಾನದಲ್ಲಿ ಒಂದೊಂದು ಅಂಕ ಏರಿಕೆಯಾದರೆ, ಗಣಿತದಲ್ಲಿ 8 ಹಾಗೂ ಸಮಾಜ ವಿಜ್ಞಾನದಲ್ಲಿ 3 ಏರಿಕೆಯಾಗಿದೆ. ಹಿಂದೆ ಅವಳ ಸರಾಸರಿ ಅಂಕ ಶೇ. 96.32 ಆಗಿದ್ದರೆ ಈಗ ಅದು ಶೇ. 98.4 ಆಗಿದೆ. ಪರಿಷ್ಕೃತ ಫಲಿತಾಂಶದಿಂದಾಗಿ ಅವಳು ಕನ್ನಡ ಮಾತ್ರವಲ್ಲದೆ ವಿಜ್ಞಾನ ಮತ್ತು ಸಮಾಜ ವಿಜ್ಞಾನಗಳಲ್ಲೂ ನೂರಕ್ಕೆ ನೂರು ಅಂಕ ಪಡೆದಂತಾಗಿದೆ ಎಂದು ಮುಖ್ಯೋಪಾಧ್ಯಾಯ ಬಿ. ವಿಶ್ವೇಶ್ವರ ಅಡಿಗ ತಿಳಿಸಿದ್ದಾರೆ. ಈ ಸಾಧನೆಗೈದ ಧರ್ಮಶ್ರೀ ಶೆಟ್ಟಿ ಉಳ್ಳೂರಿನ ಸೀತಾರಾಮ ಶೆಟ್ಟಿ-ಜಯಶ್ರೀ ಶೆಟ್ಟಿ ದಂಪತಿಯ ಪುತ್ರಿ.

Call us

Click Here

Leave a Reply