ರೋಟರಿ ಕುಂದಾಪುರ ಸನ್‌ರೈಸ್ ಪದಪ್ರದಾನ ಸಮಾರಂಭ

Call us

Call us

Call us

ರೋಟರಿ ತತ್ವಗಳು ಮೌಲ್ಯಯುತವಾದ ಮನುಜ ಧರ್ಮವನ್ನು ಪ್ರತಿಪಾದಿಸುತ್ತದೆ : ರವಿ ಹೆಗ್ಡೆ

Call us

Click Here

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿಶ್ವವನ್ನೇ ಒಂದು ಮನೆಯಂತೆ ನೋಡುವ ಅಂತರಾಷ್ಟ್ರೀಯ ರೋಟರಿ ನಮ್ಮ ಸನಾತನ ಸಂಸ್ಕೃತಿಯ ವಸುಧೈವ ಕುಟುಂಬಕಮ್ ನೀತಿಗನುಗುಣವಾಗಿಯೇ ಇದೆ. ರೋಟರಿಯ ಸ್ವಾರ್ಥ ಮೀರಿದ ಸೇವೆ ಧ್ಯೇಯವು ನಮ್ಮ ಸಿರಿ ಸಂಪನ್ನ ಪರಂಪರೆಯ ಪರೋಪಕಾರಕ್ಕಾಗಿಯೇ ಮನುಜ ಶರೀರರವು ಉಕ್ತಿಯೇ ಆಗಿದೆ. ವಿಶ್ವದಾದ್ಯಂತ ಒಂದೇ ಮಾದರಿಯಾಗಿರುವ ರೋಟರಿ ಸಂವಿಧಾನ ಮತ್ತದರ ತತ್ವಗಳು ಮೌಲ್ಯಯುತವಾದ ಮನುಜ ಧರ್ಮವನ್ನೇ ಪ್ರತಿಪಾದಿಸುತ್ತದೆ. ರೋಟರಿಯ ಈ ಎಲ್ಲಾ ಮೌಲ್ಯಗಳನ್ನು ಅಳವಡಿಸಿಕೊಂಡಲ್ಲಿ ಸದಸ್ಯರ ಜನುಮ ಸಾರ್ಥಕವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುವುದಾಗಿ ರೋಟರಿ ಜಿಲ್ಲೆ 3170 ಇದರ ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ರವಿ ಹೆಗಡೆ ಹೇಳಿದರು.

ಅವರು ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ಆಶ್ರಯದಲ್ಲಿ ಕೋಟೇಶ್ವರದ ಸಹನಾ ಕನ್‌ವೆನ್ಶನ್ ಸೆಂಟರ್‌ನ ಕೃಷ್ಣ ಸಭಾಂಗಣದಲ್ಲಿ ನಡೆದ ನೂತನ ಅಧ್ಯಕ್ಷ, ಕಾರ್ಯದರ್ಶಿಗಳ ಪದಪ್ರದಾನ ನೆರವೇರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಕೆ. ನರಸಿಂಹ ಹೊಳ್ಳ, ಕಾರ್ಯದರ್ಶಿಯಾಗಿ ನಾಗೇಶ್ ನಾವಡ ಅಧಿಕಾರ ಸ್ವೀಕರಿಸಿದರು. ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಭೋದಿಸಲಾಯಿತು. ನಿಕಟಪೂರ್ವ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್ ಅವರನ್ನು ಸನ್ಮಾನಿಸಲಾಯಿತು. ರೋಟರಿ ವಲಯ 1ರ ಅಸಿಸ್ಟೆಂಟ್ ಗವರ್ನರ್ ಮಧುಕರ ಹೆಗ್ಡೆ ಬುಲೆಟಿನ್ ಬಿಡುಗಡೆಗೊಳಿಸಿದರು. ಜೋನಲ್ ಲೆಪ್ಟಿನೆಂಟ್ ಅಬುಶೇಖ್ ಸಾಹೇಬ್ ಶುಭಹಾರೈಸಿದರು. ನಿಕಟಪೂರ್ವ ಅಧ್ಯಕ್ಷ ಕೆ. ದಿನಕರ ಪಟೇಲ್ ಸ್ವಾಗತಿಸಿದರು.

ನೂತನ ಅಧ್ಯಕ್ಷ ಕೆ. ನರಸಿಂಹ ಹೊಳ್ಳ ಮಾತನಾಡಿ ರೋಟರಿ ತತ್ವವನ್ನು ಅಳವಡಿಸಿಕೊಂಡು ಮುನ್ನಡೆಯಲು ಸರ್ವಸದಸ್ಯರ ಸಹಕಾರ ಅಗತ್ಯ. ಎಲ್ಲರೊಳಗೊಂದಾಗಿ ಕ್ಲಬ್‌ನ ಚುಕ್ಕಾಣಿ ಹಿಡಿದು ಮುನ್ನಡೆಯುವ ಪ್ರಯತ್ನ ಮಾಡುತ್ತೇನೆ ಎಂದರು. ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ಗೆ ನೂತನ ಸದಸ್ಯರನ್ನಾಗಿ ಮನೋಹರ, ಡುಂಡಿರಾಜ್, ಜಯಂತ್ ಪೂಜಾರಿ, ಕೆ.ಎಸ್. ಮಂಜುನಾಥ ಅವರನ್ನು ಸೇರ್ಪಡೆಗೊಳಿಸಲಾಯಿತು. ರೋಟರಿ ಸನ್‌ರೈಸ್ ಸ್ಥಾಪಕಾಧ್ಯಕ್ಷ ದಿನಕರ ಶೆಟ್ಟಿ, ನ್ಯಾಯವಾದಿ ಪ್ರಕಾಶ್ಚಂದ್ರ ಹೆಗ್ಡೆ, ಅಡಿಟರ್ ರಾಮಕೃಷ್ಣ ಐತಾಳ್ ಪರಿಚಯಿಸಿದರು. ನಿಕಟಪೂರ್ವ ಜತೆ ಕಾರ್ಯದರ್ಶಿ ಸಿ. ಎಚ್. ಗಣೇಶ್ ವರದಿ ವಾಚಿಸಿದರು. ಎಲ್. ಜೆ. ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಪ್ತಿ ಹೆಗ್ಡೆ ಸಹಕರಿಸಿದರು. ಕಾರ್ಯದರ್ಶಿ ನಾಗೇಶ ನಾವಡ ವಂದಿಸಿದರು.

Click here

Click here

Click here

Click Here

Call us

Call us

Leave a Reply