ಬೈಂದೂರು ವಲಯ ಧ್ವನಿ-ಬೆಳಕು ಸಂಯೋಜಕರ ಸಂಘದ ವಾರ್ಷಿಕ ಮಹಾಸಭೆ, ಐದು ಸಾಧಕರಿಗೆ ಸನ್ಮಾನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ವೃತ್ತಿಗೆ ಅನುಗುಣವಾಗಿ ಸಂಘಟನೆಗಳ ಸದಸ್ಯರ ವೃತ್ತಿ ಕೌಶಲ್ಯ ಹೆಚ್ಚಿಸಲು ಅಗತ್ಯ ತರಬೇತಿ ಹಾಗೂ ಮಾರ್ಗದರ್ಶನ ಅತ್ಯಗತ್ಯ. ಧ್ವನಿ-ಬೆಳಕು ವೃತ್ತಿ ನಿರತರು ಅಪಾಯದ ನಡುವೆ ಕೆಲಸ ಮಾಡಬೇಕು. ಅವರಲ್ಲಿ ವೃತ್ತಿ ಕೌಶಲ್ಯಗಳಿದ್ದರೆ ಅದರ ಬಗೆಗೆ ಮುನ್ನೆಚ್ಚರಿಕೆ ವಹಿಸಬಹುದು ಮತ್ತು ಗ್ರಾಹಕರ ನಿರೀಕ್ಷೆಯ ಮಟ್ಟದ ಸೇವೆ ನೀಡಬಹುದು ಎಂದು ಖಂಬದಕೋಣೆ ರೈತರ ಸೇವಾ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

Call us

Click Here

ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ನಡೆದ ಬೈಂದೂರು ವಲಯ ಧ್ವನಿ-ಬೆಳಕು ಸಂಯೋಜಕರ ಸಂಘದ ಐದನೇಯ ವಾರ್ಷಿಕ ಮಹಾಸಭೆ, ಐದು ಸಾಧಕರಿಗೆ ಸನ್ಮಾನ ಹಾಗೂ ಕುಟುಂಬ ಸಮ್ಮಿಲನ ಉದ್ಘಾಟಿಸಿ ಮಾತನಾಡಿದರು.

ಸಂಘದ ಅಧ್ಯಕ್ಷ ಎನ್. ಶಶಿಧರ ಶೆಣೈ ಅಧ್ಯಕ್ಷತೆವಹಿಸಿದ್ದರು. ವಿವಿಧ ಕ್ಷೇತ್ರಗಳ ಸಾಧಕರಾದ ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ, ಪತ್ರಕರ್ತ-ಸಮಾಜ ಸೇವಕ ಎಸ್. ಜನಾರ್ದನ್ ಮರವಂತೆ, ಶಿಕ್ಷಕ ಬಿ. ವಿಶ್ವೇಶ್ವರ ಅಡಿಗ, ರಂಗಭೂಮಿ-ಸಂಗೀತ ಯು. ಶ್ರೀನಿವಾಸ ಪ್ರಭು, ಅಂತರಾಷ್ಟ್ರೀಯ ಕ್ರೀಡಾಪಟು ಶಂಕರ ಪೂಜಾರಿ ಕಾಡಿನ್‌ತಾರು ಇವರನ್ನು ಗೌರವಿಸಲಾಯಿತು.

ಬೈಂದೂರು ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಎಂ. ಗೋವಿಂದ, ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲೆ ಬಿ. ಜ್ಯೋತಿ ಶ್ರೀನಿವಾಸ್ ಶುಭಹಾರೈಸಿದರು. ಜಿಲ್ಲಾ ಗೌರವ ಸಲಹೆಗಾರ ಬಾಲಕೃಷ್ಣ ಪೂಜಾರಿ ಪ್ರಾಸ್ತಾವಿಸಿ, ಸಂಘಟನೆಯನ್ನು ಬಲಪಡಿಸಲು ಸಲಹೆ ನೀಡಿದರು. ಓರಿಯಂಟಲ್ ಇನ್ಶೂರೆನ್ಸ್ ಅಧಿಕಾರಿ ಪುರಂದರ ಶೆಣೈ ವಿಮಾಪತ್ರ ವಿತರಿಸಿದರು. ಅನ್ವ ಪವರ್ ಸೊಲ್ಯೂಷನ್ಸ್ ಅಧಿಕಾರಿ ವಿನಯ್ ಪೂಜಾರಿ ಜನರೇಟರ್‌ಗಳ ಹೊಸ ಪೀಳಿಗೆಯನ್ನು ಪರಿಚಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ದಾಮೋದರ್, ಕುಂದಾಪುರ ವಲಯಾಧ್ಯಕ್ಷ ರೋನಿ ಬೆರಟ್ಟೊ, ಬ್ರಹ್ಮಾವರ ವಲಯಾಧ್ಯಕ್ಷ ಪುಂಡಲೀಕ ಕಾಮತ್, ಉಡುಪಿ ವಲಯಾಧ್ಯಕ್ಷ ರಾಧಾಕೃಷ್ಣ, ಕಾಪು ವಲಯಾಧ್ಯಕ್ಷ ರಾಘು. ಡಿ. ಕೋಟ್ಯಾನ್, ಕಾರ್ಕಳ ವಲಯಾಧ್ಯಕ್ಷ ಅಬ್ದುಲ್ ಸಮದ್, ಸ್ಥಳೀಯ ಸಂಘದ ಯು. ಎ. ಮಂಜು ದೇವಾಡಿಗ, ಯು. ವಿನಾಯಕ ಪ್ರಭು ಉಪಸ್ಥಿತರಿದ್ದರು. ಶೇಷು ದೇವಾಡಿಗ ಸ್ವಾಗತಿಸಿ, ಉದಯ್ ಆಚಾರ್ ನಿರೂಪಿಸಿದರು. ಬಳಿಕ ಕುಟುಂಬ ಸದಸ್ಯರಿಗೆ ವಿನೋದ ಆಟ, ಸ್ಪರ್ಧೆಗಳು ಹಾಗೂ ರಸಮಂಜರಿ ಕಾರ್ಯಕ್ರಮ ನಡೆಯಿತು.

Click here

Click here

Click here

Click Here

Call us

Call us

Leave a Reply