ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇವತ್ತಿನ ರಾಜಕಾರಣ ವ್ಯವಸ್ಥೆ ಮೂಲಬೇರು ಶಿಕ್ಷಣ ಸಂಸ್ಥೆಗಳಲ್ಲಿನ ವಿಧ್ಯಾರ್ಥಿ ಸಂಘಗಳು, ಇಂದಿನ ಪ್ರತಿಯೊಬ್ಬರಾಜಕೀಯ ನಾಯಕರ ಯಶಸ್ಸಿನ ಹಿಂದೆ ವಿಧ್ಯಾರ್ಥಿ ಸಂಘಗಳ ಕೊಡುಗೆ ಅಪಾರ ಎಂದು ಕುಂದಾಪುರ ಪುರಸs ಉಪಾಧ್ಯಕ್ಷ ರಾಜೇಶ್ ಕಾವೇರಿ ಹೇಳಿದರು.
ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜು (ಬೋರ್ಡ್ ಹೈಸ್ಕೂಲ್) ರೋಟರಿ ಲಕ್ಷ್ಮೀವೆಂಕಟರಮಣ ಕಲಾಮಂದಿದಲ್ಲಿ ನಡೆದ ವಿವಿಧ ವಿದ್ಯಾರ್ಥಿ ಸಂಘನೆ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಸಂಘ, ಗ್ರಾಹಕ ಸಂಘ, ಕ್ರಷಿ ಸಂಘ, ಇಕೋ ಕ್ಲಬ್, ಆಪ್ತ ಸಮಾಲೋಚನೆ, ಮುಂತಾದ ಸಂಘಗಳ ಕಾರ್ಯ ಚೆಟುವಟಿಕೆ ಕ್ರಮವಾಗಿ ಶಿಕ್ಷಕರಾದ ಪ್ರದೀಪ್ ಶೆಟ್ಟಿ, ಯಶ್‌ವಂತ ಹುಲಸ್ವಾರ್, ಶ್ಯಾಮ ಶ್ಯಾನುಬಾಗ್, ಗಾಯಿತ್ರಿ ಅಡಿಗ, ನಾಗರತ್ನ ಪರಿಚಯಿಸಿದರು.
ಉಪನಿರ್ದೇಶಕರ ಕಚೇರಿ ಸಮಾಜ ವಿಷಯ ಪರಿವೀಕ್ಷಣಾಧಿಕಾರಿ ವೆಂಕಟೇಶ್ ನಾಯಕ್, ಉಪಪ್ರಾಂಶುಪಾಲ ಅರುಣ್‌ಕುಮಾರ ಶೆಟ್ಟಿ ವಿದ್ಯಾಥಿ ಸಂಸತ್‌ರ ನಾಯಕ ಸುಬ್ರಮಣ್ಯ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಭೋದಿಸಿದರು ಅಧ್ಯಾಪಕರಾದ ಪ್ರದೀಪ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿ ಮನೋಜ್ ನಿರ್ವಹಿಸಿದರು. ಶಿಕ್ಷಕ ಮಾಧವ ಅಡಿಗ ವಂದಿಸಿದರು.