ಕುಂದಾಪುರ ದೇವಾಡಿಗ ಮಿತ್ರ ಸಂಘದಿಂದ ವಿದ್ಯಾರ್ಥಿವೇತನ ವಿತರಣೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದುಬೈ ಕುಂದಾಪುರ ದೇವಾಡಿಗ ಮಿತ್ರ ಕದಂ ಸಂಘ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದರೊಂದಿಗೆ ಸಂಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚುವ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ವಿಶೇಷ ಪಾತ್ರ ವಹಿಸುತ್ತಿದೆ ಎಂದು ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಯು.ಧರ್ಮಪಾಲ ದೇವಾಡಿಗ ಹೇಳಿದರು.
ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ಇತ್ತೀಚೆಗೆ ಕುಂದಾಪುರ ದೇವಾಡಿಗ ಮಿತ್ರ ಕದಂ ವಿದ್ಯಾರ್ಥಿವೇತನ ಸಮಾರಂಭ ಉದ್ಘಾಟಿಸಿ ಮಾತನಾಡಿಸಿದರು.

Call us

Click Here

ದೇವಾಡಿಗ ವೆಲ್ ಫೇರ್ ಅಸೋಸಿಯೇಶನ್ ಮುಂಬೈ ಗೌರವ ಅಧ್ಯಕ್ಷ ಸುರೇಶ ಡಿ. ಪಡುಕೋಣೆ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ದಿನೇಶ ದೇವಾಡಿಗ ನಾಗೂರು ವಿದ್ಯಾರ್ಥಿ ವೇತನ ವಿತರಿಸಿದ್ದರು.

ಮುಂಬೈ ದೇವಾಡಿಗರ ಸಂಘ ನಿಕಟ ಪೂರ್ವ ಅಧ್ಯಕ್ಷ ಎಚ್. ಮೋಹನದಾಸ, ಕರ್ನಾಟಕ ರಾಜ್ಯ ಅರಣ್ಯ ಇಲಾಖಾ ನೌಕರರ ಮಹಾಮಂಡಲದ ಅಧ್ಯಕ್ಷ ರಘುರಾಮ ದೇವಾಡಿಗ, ಮುಂಬೈ ಉದ್ಯಮಿ ನಾಗರಾಜ ಪಡುಕೋಣೆ, ಬಾರ್ಕುರು ಏಕನಾಥೇಶ್ವರಿ ದೇವಸ್ಥಾನದ ಅಧ್ಯಕ್ಷ ಅಣ್ಣಯ್ಯ ಸೇರಿಗಾರ, ಕಾರ್ಯದರ್ಶಿ ನರಸಿಂಹ ದೇವಾಡಿಗ, ಕೋಶಾಧಿಕಾರಿ ಜನಾರ್ಧನ ದೇವಾಡಿಗ, ಧರ್ಮದರ್ಶಿ ಜನಾರ್ಧನ ದೇವಾಡಿಗ ಉಪ್ಪುಂದ, ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ಉದ್ಯಮಿಗಳಾದ ಶೀನ ದೇವಾಡಿಗ ಲಕ್ಷ್ಮಣ ದೇವಾಡಿಗ, ಬೈಂದೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾದ್ಯಾಯ ಜನಾರ್ಧನ ದೇವಾಡಿಗ, ಮುಂಬೈ ಸಂಘ ರವಿ ಎಸ್. ದೇವಾಡಿಗ, ಕುಂದಾಪುರ ತಾಲೂಕ್ ವಿವಿಧ ದೇವಾಡಿಗ ಸಂಘ ಅಧ್ಯಕ್ಷ ಮಂಜು ದೇವಾಡಿಗ ಉಪ್ಪುಂದ, ಚಿತ್ತರಂಜನ್ ದೇವಾಡಿಗ ಆಲೂರು, ಬಸವ ದೇವಾಡಿಗ ತಲ್ಲೂರು, ನಾಗರಾಜ ರಾಯಪ್ಪನಮಠ ಕುಂದಾಪುರ, ರಾಮ ದೇವಾಡಿಗ ಕಿರಿಮಜೇಶ್ವರ, ಉಮಾನಾಥ ದೇವಾಡಿಗ ಗಂಗೊಳ್ಳಿ, ದಿವಾಕರ ದೇವಾಡಿಗ ಹೆಮ್ಮಾಡಿ, ಸುಬ್ಬ ದೇವಾಡಿಗ ಬೈಂದೂರು, ಸಪ್ತಸ್ವರ ವಿವಿದ್ದೋದ್ದೆಶ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ದೇವಾಡಿಗ,
ದೇವಾಡಿಗರ ವಧು ವರರ ವೇದಿಕೆ ಅಧ್ಯಕ್ಷ ನಾರಾಯಣ ದೇವಾಡಿಗ ಉಪಸ್ಥಿತರಿದ್ದರು. ತಾಲೂಕು ಪಂಚಾಯತ್ ಸದಸ್ಯ ರಾಜು ದೇವಾಡಿಗ ಸ್ವಾಗತಿಸಿದರು. ರವಿ ದೇವಾಡಿಗ ತಲ್ಲೂರು ಕಾರ್ಯಕ್ರಮ ನಿರೂಪಿಸಿ, ರಾಘವೇಂದ್ರ ವಂದಿಸಿದರು.

Leave a Reply