ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರ‍್ಯಾಕ್ಟ್ ಕ್ಲಬ್ ಕುಂದಾಪುರದ ಮಾಜಿ ಅಧ್ಯಕ್ಷ ರಾಘವೇಂದ್ರ ಕೆ.ಸಿ. ಅವರು ನೂತನ ರೋಟರಿ ಜಿಲ್ಲೆ ೩೧೮೨ ಇದರ ವಲಯ ರೋಟರ‍್ಯಾಕ್ಟ್ ಪ್ರತಿನಿಧಿಯಾಗಿ ಆಯ್ಕೆಗೊಂಡಿದ್ದಾರೆ. ಇತ್ತಿಚಿಗೆ ಕಾರ್ಕಳದಲ್ಲಿ ನಡೆದ ರೋಟರ‍್ಯಾಕ್ಟ್ ಜಿಲ್ಲಾ ಅಧಿವೇಶನದಲ್ಲಿ ಅವರು ಅಧಿಕಾರ ಸ್ವೀಕರಿಸಿದರು. ನೂತನ ರೋಟರ‍್ಯಾಕ್ಟ್ ಪ್ರತಿನಿಧಿಯಾಗಿ ಆಯ್ಕೆಗೊಂಡ ರಾಘವೇಂದ್ರ ಕೆ.ಸಿ ಅವರನ್ನು ಕುಂದಾಪುರ ರೋಟರ‍್ಯಾಕ್ಟ್ ಕ್ಲಬ್‌ನ ಸದಸ್ಯರು ಅಭಿನಂದಿಸಿದ್ದಾರೆ.