ಕರ್ಕುಂಜೆ ಮೀನುಗಾರಿಕೆ ನಡೆಸುತ್ತಿದ್ದ ವ್ಯಕ್ತಿ ನದಿಯಲ್ಲಿ ಮುಳುಗಿ ಮೃತ್ಯು

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ವಂಡ್ಸೆ ಸಮೀಪದ ಚಕ್ರಾ ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಮೀನುಗಾರನೊಬ್ಬ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ.
ತಾಲೂಕಿನ ಕರ್ಕುಂಜೆ ನಿವಾಸಿ ಸಂಜೀವ ಮೊಗವೀರ (53) ಮೃತಪಟ್ಟವರು. ಶನಿವಾರ ಮಧ್ಯಾಹ್ನ ಮೀನುಗಾರಿಕೆಗೆ ಮನೆಯಿಂದ ತೆರಳಿದ್ದರು ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಲಾಗಿತ್ತು. ಹೊಳೆಯಲ್ಲಿ ದೋಣಿ ಸಿಕ್ಕರೂ, ಸಂಜೀವ ಮೊಗವೀರ ಪತ್ತೆಯಾಗಿರಲಿಲ್ಲ. ಭಾನುವಾರ ಸಂಜೆ ಬಗ್ವಾಡಿ ಸೇತುವೆ ಬಳಿ ಸಂಜೀವ ಮೊಗವೀರ ಮೃತ ದೇಹ ಪತ್ತೆಯಾಗಿದೆ.

Call us

Click Here

ಮೃತರು ಗೋವಾ ರಾಜ್ಯದಲ್ಲಿ ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದು, ಬೋಟ್‌ಗೆ ರಜೆ ಇದ್ದ ಕಾರಣ ಊರಿಗೆ ಬಂದು ದೋಣಿ ಖರೀದಿಸಿ ಚಕ್ರಾ ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿ ಅಗಲಿದ್ದು, ಮೀನುಗಾರ ಕುಟುಂಬದ ಆಧಾರ ಸ್ಥಂಭ ತಪ್ಪಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply