ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ, ಗ್ರಾ.ಪಂ. ಹಕ್ಲಾಡಿ, ಎಸ್.ಡಿ.ಎಂ.ಸಿ ಸ.ಕಿ.ಪ್ರಾ. ಶಾಲೆ ಯಳೂರು – ತೊಪ್ಲು ಇವುಗಳ ಆಶ್ರಯದಲ್ಲಿ ಸರಕಾರಿ, ಕಿರಿಯ ಪ್ರಾಥಮಿಕ ಶಾಲೆ ಯಳೂರು – ತೊಪ್ಲು ಇಲ್ಲಿ ಪೈಪ್ ಕಂಪೋಸ್ಟ್ ಘಟಕಕ್ಕೆ ರೋಟರಿ ಅಧ್ಯಕ್ಷ ಉದಯ ಕುಮಾರ ಶೆಟ್ಟಿ ಚಾಲನೆ ನೀಡಿದರು.
ರೋಟರಿ ಕಾರ್ಯದರ್ಶಿ ಹಾಗೂ ಶಾಲಾ ಮುಖ್ಯ ಶಿಕ್ಷಕ ಸಾಲ್ಗದ್ದೆ ಶಶಿಧರ್ ಶೆಟ್ಟಿ ಪೈಪ್ ಕಂಪೋಸ್ಟನ ಉದ್ದೇಶ, ತಯಾರಿ, ಬಳಕೆ ಮತ್ತು ವಿಲೇವಾರಿ ಹಾಗೂ ಅದರ ಪರಿಣಾಮವನ್ನು ಪರಿಸರದ ಜನರಿಗೆ ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಪಂ. ಸದಸ್ಯರಾದ ಸತೀಶ ಶೆಟ್ಟಿ, ಶ್ರೀಮತಿ ಗುಲಾಬಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಶ್ರೀಮತಿ ಸಿಂಗಾರಿ, ಉಪಾಧ್ಯಕ್ಷೆ ಶ್ರೀಮತಿ ಸಾಕು, ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕರು, ವಿದ್ಯಾಭಿಮಾನಿಗಳು, ಊರಿನ ಗಣ್ಯರು ಉಪಸ್ಥಿತರಿದ್ದರು.