Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಲಂಡನ್: ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಕುಂದಾಪುರದವರ ಯಕ್ಷಗಾನ
    ಊರ್ಮನೆ ಸಮಾಚಾರ

    ಲಂಡನ್: ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಕುಂದಾಪುರದವರ ಯಕ್ಷಗಾನ

    Updated:28/08/20161 Comment
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಕುಂದಾಪುರ: ಯುನೈಟೆಡ್ ಕಿಂಗ್‌ಡಂನ ಭಾರತೀಯ ದೂತಾವಾಸವು ಲಂಡನ್‌ನ ವಿಶಾಲ ಜಿಮ್‌ಖಾನಾ ಬಯಲಿನಲ್ಲಿ ಆಯೋಜಿಸಿದ್ದ ಭಾರತದ 70ನೆಯ ಸ್ವಾತಂತ್ರ್ಯೋತ್ಸವದಲ್ಲಿ ಕುಂದಾಪುರದ ಇಬ್ಬರು ಅನಿವಾಸಿ ಕನ್ನಡಿಗರು ಪ್ರದರ್ಶಿಸಿದ ಯಕ್ಷಗಾನದ ತುಣುಕು ನೆರೆದಿದ್ದ 10 ಸಾವಿರ ಭಾರತೀಯರ ಮೆಚ್ಚುಗೆ ಗಳಿಸಿತು. ಅವರಿಗೆ ನೀಡಲಾಗಿದ್ದ ಹದಿನೈದು ನಿಮಿಷಗಳ ಅವಕಾಶದಲ್ಲಿ ಕಂಸವಧೆಯ ನೃತ್ಯ ರೂಪಕವನ್ನು ಅವರು ಪ್ರಸ್ತುತಪಡಿಸಿದ್ದರು. ಇದರಲ್ಲಿ ಯು.ಕೆಯ ಡಂಕ್ಯಾಸ್ಟರ್‌ನಲ್ಲಿ ವೈದ್ಯ ವೃತ್ತಿ ನಡೆಸುತ್ತಿರುವ ಕುಂದಾಪುರದ ಡಾ. ಗುರುಪ್ರಸಾದ ಪಟ್ವಾಲ್ ಕಂಸನ ಪಾತ್ರ ನಿರ್ವಹಿಸಿದರೆ, ಬ್ರಿಸ್ಟಲ್‌ನ ಏರ್‌ಬಸ್ ವಿಮಾನ ಕಂಪನಿಯಲ್ಲಿ ಏರೋಸ್ಪೇಸ್ ಇಂಜಿನಿಯರ್ ಆಗಿ ದುಡಿಯುತ್ತಿರುವ ಯೋಗೀಂದ್ರ ಮರವಂತೆ ಕೃಷ್ಣನ ಪಾತ್ರ ಮಾಡಿದ್ದರು.

    Click Here

    Call us

    Click Here

    ಎರಡೂ ಪಾತ್ರಗಳ ಪ್ರಸಾಧನದ ವರ್ಣವಿನ್ಯಾಸ, ಲಯಬದ್ಧ ನೃತ್ಯ, ಸನ್ನಿವೇಶವನ್ನು ಬಿಂಬಿಸುವಂತಿದ್ದ ಭಾವಾಭಿನಯ ವಿವಿಧೆಡೆಯ ಭಾರತೀಯ ಮೂಲದ ಪ್ರೇಕ್ಷಕರನ್ನು ಮುದಗೊಳಿಸಿದುವು. ಪ್ರದರ್ಶನ ಮುಗಿಯುತ್ತಿದ್ದಂತೆ ಉಭಯ ಹವ್ಯಾಸಿ ಕಲಾವಿದರು ಪ್ರೇಕ್ಷರ ಮತ್ತು ಮಾಧ್ಯಮದ ಆಕರ್ಷಣೆಯ ಕೇಂದ್ರವಾದರು. ಹಲವರು ಅವರ ಜತೆ ನಿಂತು ಸೆಲ್ಫೀ ತೆಗೆದುಕೊಂಡರೆ, ಮಾಧ್ಯಮದವರು ಅವರನ್ನು ಸಂದರ್ಶಿಸಿದರು. ಕ್ರಮವಾಗಿ ಕೋಟದ ಸದಾನಂದ ಐತಾಳ್ ಮತ್ತು ಬೆಂಗಳೂರಿನಲ್ಲಿ ನೆಲೆಸಿರುವ ಕೃಷ್ಣಮೂರ್ತಿ ತುಂಗರಿಂದ ಯಕ್ಷಗಾನ ನೃತ್ಯ ಅಭ್ಯಾಸ ಮಾಡಿರುವ ಇವರಿಬ್ಬರು ಜತೆಯಾಗಿ ಬಿಡುವಿನ ವೇಳೆಯಲ್ಲಿ ಯುಕೆಯ ವಿವಿಧೆಡೆ ಯಕ್ಷಗಾನದ ಕಿರುಪ್ರದರ್ಶನಗಳನ್ನು ನೀಡುತ್ತಿದ್ದಾರೆ.

    ಲಂಡನ್‌ನಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಭಾರತದ ಹೈಕಮಿಷನರ್ ನವತೇಜ್ ಸರಣ್ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ಕೇಂದ್ರ ಆಹಾರ ಸಚಿವ ರಾಮ್‌ವಿಲಾಸ್ ಪಾಸ್ವಾನ್, ಯುಕೆಯ ಸಂಸತ್ತಿನ ಕೆಳಮನೆಯ ಸದಸ್ಯರಾದ ವೀರೇಂದ್ರ ಶರ್ಮ ಮತ್ತು ಸೀಮಾ ಮಲೋತ್ರಾ ಮುಖ್ಯ ಅತಿಥಿಗಳಾಗಿದ್ದರು.

    news Maravanthe A-281

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಒಡಗಿನ ಶ್ರೀ ನಂದಿಕೇಶ್ವರ ದೇವಸ್ಥಾನದ ಕೆರೆ ಹಸ್ತಾಂತರ ಕಾರ್ಯಕ್ರಮ

    21/05/2026

    ಕ್ಯಾಂಪಸ್ ನೇಮಕಾತಿಯಲ್ಲಿ ಮಿಂಚಿದ ಐಎಂಜೆಐಎಸ್‌ಸಿಯ ದ್ವಿತೀಯ ವರ್ಷದ 30 ವಿದ್ಯಾರ್ಥಿಗಳು

    21/05/2026

    ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ

    21/05/2026

    1 Comment

    1. Pingback: ಲಂಡನ್‌ನಲ್ಲಿ ಮತ್ತೊಮ್ಮೆ ಮಿಂಚಲಿರುವ ಕುಂದಾಪುರದ ತರುಣರು | Kundapra.com ಕುಂದಾಪ್ರ ಡಾಟ್ ಕಾಂ

    Leave A Reply Cancel Reply

    sixteen − 10 =

    Call us

    Click Here

    Call us

    Call us

    Call us
    Highest Viewed Recently
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ʼಸಾಮಾಜಿಕ ನ್ಯಾಯ ಮತ್ತು ಭದ್ರತೆʼ ವಿಷಯದ ಕುರಿತು ಉಪನ್ಯಾಸ
    • ಜಲಮಾಲಿನ್ಯ ಉಂಟುಮಾಡುವ ವಸತಿ ಸಮುಚ್ಚಯಗಳ ಮಾಲೀಕರ ಮೇಲೆ ಕಾನೂನು ಕ್ರಮ: ಜಿಲ್ಲಾಧಿಕಾರಿ ಸೂಚನೆ
    • ಸಣ್ಣ ಉದ್ದಿಮೆಗೆ ಸಹಾಯಧನ: ಅರ್ಜಿ ಆಹ್ವಾನ
    • ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಪ್ರವೇಶಾತಿ: ಅರ್ಜಿ ಆಹ್ವಾನ
    • ಸ್ಥಳೀಯ ಸಂಸ್ಥೆಗಳು ಘನತ್ಯಾಜ್ಯ ವಸ್ತುಗಳ ವಿಲೇವಾರಿಯನ್ನು ವೈಜ್ಞಾನಿಕ ರೀತಿಯಲ್ಲಿ ಕೈಗೊಳ್ಳಿ: ಜಿಲ್ಲಾಧಿಕಾರಿ ಸೂಚನೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.