ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಇಂಡಿಯ ಲಿಟ್ರಸಿ ಮಿಷನ್ ಅಡಿಯಲ್ಲಿ ಆಶಾಕಿರಣ ಯೋಜನೆ ಅನ್ವಯ ರೋಟರಿ ಕ್ಲಬ್ ಕುಂದಾಪುರ ಸನ್ ರೈಸ್ ವತಿಯಿಂದ ನಡೆದ ಆಶಾಕಿರಣ ಯೋಜನೆಯ ವಲಯ ಮಟ್ಟದ ಮಾಹಿತಿ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಮಾತನಾಡಿ ರೂ.೨೧೦೦ ನೀಡಿ ಉತ್ತರ ಭಾರತದ ಒಂದು ಮಗುವನ್ನು ದತ್ತು ತೆಗೆದುಕೊಂಡು ಆ ಮಗುವಿನ ಉಜ್ವಲ ಭವಿಷ್ಯವನ್ನು ರೂಪಿಸುವ ಯೋಜನೆಯೇ ಆಶಾಕಿರಣ ಯೋಜನೆ ಎಂದರು.
ರೋಟರಿ ಸನ್ ರೈಸ್ ಅಧ್ಯಕ್ಷ ಕೆ.ನರಸಿಂಹ ಹೊಳ್ಳ ಸ್ವಾಗತಿಸಿ, ರೋಟರಿ ಸನ್‌ರೈಸ್ ಎಂಟು ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಯೋಜನೆಗೆ ಚಾಲನೆ ನೀಡಿದರು. ರೋಟರಿ ವಲಯ ಒಂದರ ಸಹಾಯಕ ಗವರ್ನ್‌ರ್ ಮಧುಕರ ಹೆಗ್ಡೆ ಪ್ರಾಸ್ತಾವಿಕ ಮಾತನಾಡಿದರು. ವಲಯ ಸೇನಾನಿ ಅಬುಶೇಖ ಸಾಹೇಬ್, ವಲಯ ಲಿಟ್ರಸಿ ಚೇರ‍್ಮನ್ ಲುಯಿಸ್ ಜೆ ಫೆರ್ನಾಂಡಿಸ್ , ರೋಟರಿ ಸನ್‌ರೈಸ್ ಸ್ಥಾಪಕ ಅಧ್ಯಕ್ಷ ದಿನಕರ ಆರ್ ಶೆಟ್ಟಿ, ಹಾಗೂ ವಲಯ ಒಂದರ ಎಲ್ಲಾ ಏಳು ಅಧ್ಷಕ್ಷರು ಮತ್ತು ಕಾರ್ಯದರ್ಶಿ, ರೋಟರಿ ಸನ್‌ರೈಸ್ ಸದಸ್ಯರಾದ ಸತೀಶ ಎನ್ ಶೇರೆಗಾರ್, ಕೆ.ಎಂ.ಚಂದ್ರಶೇಕರ್, ದಿನಕರ್ ಪಟೇಲ್, ಕಲ್ಪನಾ ಭಾಸ್ಕರ್, ಸದಾನಂದ ಉಡುಪ, ಡುಂಡಿರಾಜ್, ಕೆ.ಎಸ್ ಮಂಜುನಾಥ್ ಉಪಸ್ಥಿತರಿದ್ದರು, ರೋಟರಿ ಸನ್‌ರೈಸ್ ಕಾರ್ಯದರ್ಶಿ ನಾಗೇಶ ನಾವುಡ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.