ಜೇಸಿಐ ಸಾಸ್ತಾನ ವೈಬ್ರೆಂಟ್: ವ್ಯಕ್ತಿತ್ವ ವಿಕಸನ ಕಾರ್ಯಕ್ರಮ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಜೇಸಿ ಸಂಘಟನೆ ಎಂಬುವುದು ಒಂದು ಅಂತರಾಪ್ಷ್ರೀಯ ಸಂಸ್ಥೆಯಾಗಿದ್ದು ಅದರ ಕಾರ್ಯ ಕ್ಷೇತ್ರವನ್ನು ಗ್ರಾಮೀಣ ಭಾಗಗಳಲ್ಲಿ ವಿಸ್ತರಿಸಿಕೊಂಡು ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಕೋಟ ಪಂಚವರ್ಣ ಯುವಕ ಮಂಡಲದ ಗೌರವಾಧ್ಯಕ್ಷ ಕೆ.ವೆಂಕಟೇಶ್ ಪ್ರಭು ಹೇಳಿದ್ದಾರೆ.

Call us

Click Here

ಮಣೂರು ಪಡುಕರೆ ಸಯುಂಕ್ತ ಪ್ರೌಢಶಾಲೆಯ ಸಭಾಂಗಣದಲ್ಲಿ ಮಂಗಳವಾರ ಜೇಸಿಐ ಸಾಸ್ತಾನ ವೈಬ್ರೆಂಟ್ ವತಿಯಿಂದ ಒಂದು ವಾರಗಳ ಕಾಲ ನಡೆಯುವ ಜೇಸಿ ಸಪ್ತಾಹ ಸಂಚಲನ 2016ಇದರ ಬನ್ನಿ ಬದಲಾಗೋಣ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನೂರಾರು ಸಂಘ ಸಂಸ್ಥೆಗಳಿರಬಹುದು ಆದರೆ ಅದರದ್ದೆ ಆದ ಕಾರ್ಯ ಚಟುವಟಿಕೆಗೆ ಸ್ಥಳಗಳ ವ್ಯಾಪ್ತಿ ಇರುತ್ತದೆ ಆದರೆ ಜೇಸಿ ಸಾಸ್ತಾನ ಫಟಕ ತನ್ನ ಕಾರ್ಯಕ್ಷೇತ್ರವನ್ನು ಇತರ ಕಡೆಗಳಿಗೂ ವಿಸ್ತರಿಸಿ ಕೊಂಡಿದೆ ಇದು ಶ್ಲಾಘನಾರ್ಹ ಎಂದರು.

ಜೇಸಿಐ ಸಾಸ್ತಾನ ವೈಬ್ರೆಂಟ್‌ನ ಅಧ್ಯಕ್ಷ ಉದಯ ಕೋಟ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಣೂರು ಪ್ರೌಡ ಶಾಲಾ ಶಿಕ್ಷಕ ಸತೀಶ್ ಐತಾಳ್, ಪತ್ರಕರ್ತ ರವೀಂದ್ರ ಕೋಟ, ಸರಕಾರಿ ಪ್ರೌಡ ಶಾಲಾ ಮುಖ್ಯ ಶಿಕ್ಷಕ ಪ್ರಕಾಶ್ ಹೆಬ್ಬಾರ್, ಸಾಸ್ತಾನ ಜೇಸಿ ನಿಕಟ ಪೂರ್ವ ಅಧ್ಯಕ್ಷ ಸುಧಾಕರ್, ಜೇಸಿ ನರೇಂದ್ರ ಕುಮಾರ್ ಕೋಟ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಕಾರ್ಯಕ್ರಮದ ಸಂಚಾಲಕ ಶೇಖರ್ ಕುಮಾರ್ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮವನ್ನು ಉದಯ್ ಕೋಟ ನಿರೂಪಿಸಿದರು.ಜೇಸಿಯ ಕಾರ್ಯದರ್ಶಿ ಕೇಶವ ಆಚಾರ್ ವಂದಿಸಿದರು.

Leave a Reply