ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರತಿಷ್ಠಿತ ಜೇಸಿಐ ಕುಂದಾಪುರದ 43ನೇ ಅಧ್ಯಕ್ಷರಾಗಿ ಅಕ್ಷತಾ ಗಿರೀಶ್ ಆಯ್ಕೆಯಾಗಿದ್ದಾರೆ. ಜೇಸಿಐ ಕುಂದಾಪುರದ ಜೇಸಿರೆಟ್ ವಿಭಾಗದ ಅಧ್ಯಕ್ಷೆಯಾಗಿ ಜೇಸಿಯ ವಿವಿಧ ಪದಾಧಿಕಾರಿಯಾಗಿ ಅನುಪಮ ಸೇವೆ ಸಲ್ಲಿಸಿದ ಇವರು ಪತ್ರಕರ್ತೆಯಾಗಿ, ಟಿ.ವಿ. ನಿರೂಪಕರಾಗಿ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸಿದ ಮತ್ತು ಹಲವಾರು ಸಂಘ ಸಂಸ್ಥೆಯಲ್ಲಿ ಸಕ್ರೀಯವಾಗಿ ದುಡಿದ ಅನುಭವ ಹೊಂದಿದ್ದಾರೆ. ಇತ್ತೀಚೆಗೆ ಜೇಸಿಐ ಕುಂದಾಪುರಕ್ಕೆ ವಲಯಾಧ್ಯಕ್ಷರ ಭೇಟಿ ಸಂದರ್ಭ ಹೋಟೆಲ್ ಶೆರೋನ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮುಂದಿನ ಸಾಲಿನ ಅಧ್ಯಕ್ಷರನ್ನಾಗಿ ಅಕ್ಷತಾ ಗಿರೀಶ್ ಅವರನ್ನು ಘೋಷಿಸಲಾಯಿತು. ಜೇಸಿಐ ಕುಂದಾಪುರದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಮಹಿಳೆಯೊರ್ವರು ಅಧ್ಯಕ್ಷರಾಗುತ್ತಿದ್ದು, ಈ ಹೆಗ್ಗಳಿಕೆ ಅಕ್ಷತಾ ಗಿರೀಶ್ ಅವರ ಪಾಲಾಗಿದೆ.
ಕಾರ್ಯದರ್ಶಿಯಾಗಿ ರಾಘು ವಿಠಲವಾಡಿ, ಉಪಾಧ್ಯಕ್ಷರಾಗಿ ಲಕ್ಷ್ಮೀ ಡಿ.ಕೆ ಪ್ರಭಾಕರ, ನರೇಶ್ ಕೋಟೇಶ್ವರ, ಪ್ರವೀಣ್ ಆಯ್ಕೆಯಾದರು. ಈ ಸಂದರ್ಭದಲ್ಲಿ ಜೇಸಿ ವಲಯಾಧ್ಯಕ್ಷರಾದ ಸಂದೀಪ್, ಜೇಸಿಐ ಕುಂದಾಪುರ ಅಧ್ಯಕ್ಷ ವಿಷ್ಣು ಕೆ.ಬಿ, ಪೂರ್ವಾಧ್ಯಕ್ಷರು ಉಪಸ್ಥಿತರಿದ್ದರು.