ಕುಂದಾಪ್ರ ಕನ್ನಡ ಕಿರು ಚಿತ್ರೋತ್ಸವಕ್ಕೆ ಚಾಲನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಉಡುಪಿ ಜಿಲ್ಲೆಯಲ್ಲಿಯೇ ಕಾರಂತ ಥೀಂ ಪಾರ್ಕ್ ನಿರಂತರ ಕಾರ್ಯಕ್ರಮ ಮೂಲಕ ಕಲಾವಿದರ ಮತ್ತು ಕಲಾ ರಸಿಕರ ಸ್ವರ್ಗವಾಗಿದೆ. 

ಕಾರಂತರ ಸ್ಮರಣೆಯ ಈ ಥೀಂ ಪಾರ್ಕ್‌ನಲ್ಲಿ ಇನ್ನಷ್ಟು ಕಾರ್ಯಕ್ರಮಗಳು ರೂಪುಗೊಳ್ಳಲಿ, ಕಲೆ ಮತ್ತು ಕಲಾವಿದರಿಗೆ ಆಶ್ರಯ ನೀಡಲಿ ಎಂದು ನಟ, ನಿರ್ದೇಶಕ ರಂಗಕರ್ಮಿ ರಘು ಪಾಂಡೇಶ್ವರ ಹೇಳಿದರು.
news-kota-theme-park
ಅವರು ಕೋಟ ಕಾರಂತ ಥೀಂ ಪಾರ್ಕ್‌ನಲ್ಲಿ ಕೋಟತಟ್ಟು ಗ್ರಾಮ ಪಂಚಾಯಿತಿ, ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.) ಕೋಟ, 
ಡಾ.ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ ಸಹಯೋಗದಲ್ಲಿ ಡಾ.ಶಿವರಾಮ ಕಾರಂತ ಜನ್ಮದಿನೋತ್ಸವ ಮತ್ತು ಹುಟ್ಟೂರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅಂಗವಾಗಿ ಆಯೋಜಿಸಲಾದ ದಿಬ್ಬಣ ೨೦೧೬ ಇದರ ಎಂಟನೇಯ ದಿನದ ಕಾರ್ಯಕ್ರಮ ಕುಂದಾಪ್ರ ಕನ್ನಡ ಕಿರು ಚಿತ್ರೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್. ಪ್ರಮೋದ್ ಹಂದೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.

ವಿದ್ಯಾರ್ಥಿನಿ ಕುಮಾರಿ ಮೇಘನಾ ಪ್ರಭು ಎಲ್ಲರಂತಲ್ಲ ನನ್ನ ಕಾರಂತ ಎನ್ನುವ ವಿಚಾರದ ಕುರಿತು ಮಾತನಾಡಿದರು. ಅಶ್ವಿನೀ ಪ್ರಭು, ಅಂಜನಿ, ದೀಕ್ಷಾ, ಸುಮನಾ, ಅಶ್ವಿನೀ ಪೈ., ಚೈತ್ರಾ ಆಚಾರ್, ಪಾವನಾ ಐತಾಳ್, ಪ್ರಜ್ಞಾ ಹಂದಟ್ಟು ನೃತ್ಯ ನಮನ ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ.ಕುಂದರ್, ಕಿರು ಚಿತ್ರ ನಿರ್ದೇಶಕ ರಾಘವೇಂದ್ರ ಶಿರಿಯಾರ, ಕುಮಾರ ಉಪಸ್ಥಿತರಿದ್ದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಾರ್ವತಿ ಸ್ವಾಗತಿಸಿದರು. ಶಿಕ್ಷಕ ಸಾಹಿತಿ ನರೇಂದ್ರ ಕುಮಾರ್ ಕೋಟ ಪ್ರಸ್ತಾವಿಸಿದರು. ಪಂಚಾಯಿತಿ ಸದಸ್ಯೆ ಸುಜಾತ ಎನ್. ಕಾರ್ಯಕ್ರಮ ನಿರೂಪಿಸಿದರು. ಪಂಚಾಯಿತಿ ಸದಸ್ಯ ವಾಸು ಪೂಜಾರಿ ವಂದಿಸಿದರು.

ಕಾರ್ಯಕ್ರಮಕ್ಕೆ ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಇಂಡಿಕಾ ಮಣೂರು ಪಡುಕರೆ, ಜಯ ಕರ್ನಾಟಕ, ಗಾಣಿಗ ಯುವ ಸಂಘಟನೆ, ಬ್ರಹ್ಮಾವರ ವಲಯ ಕಾರ್ಯನಿರತ ಪತ್ರಕರ್ತರ ಸಂಘ ಸಹಕಾರ ನೀಡಿತ್ತು. ಸಭಾ ಕಾರ್ಯಕ್ರಮದ ಬಳಿಕ ರಘು ಪಾಂಡೇಶ್ವರ ನಿರ್ಮಾಣದ ಶವ, ರಾಘವೇಂದ್ರ ಶಿರಿಯಾರ ಅಣ್ಣು ಮತ್ತು ಇತರ ಕಿರು ಚಿತ್ರ ಪ್ರದರ್ಶನ ನಡೆಯಿತು.

Leave a Reply